ಇಸ್ರೋ ಮತ್ತೊಂದು ಮೈಲಿಗಲ್ಲು : ಜಿಸ್ಯಾಟ್-18 ಉಪಗ್ರಹ ಯಶಸ್ವಿ ಉಡಾವಣೆ
ನವದೆಹಲಿ, ಅ.5-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಫ್ರೆಂಚ್ ಗಯಾನದ ಕೌರುವಿನಿಂದ ಜಿಸ್ಯಾಟ್-18 ದೂರಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಇದರೊಂದಿಗೆ ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಕೌರುವಿನಿಂದ (ಫ್ರೆಂಚ್ ಗಯಾನ) ಇಂದು ಮುಂಜಾನೆ ಜಿಸ್ಯಾಟ್-19 ಸಂಪರ್ಕ ಉಪಗ್ರಹವನ್ನು ಹೊತ್ತ ಅಧಿಕ ಸಾಮಥ್ರ್ಯದ ಏರಿಯನ್-5 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತ್ತು. ಬುಧವಾರ ಮುಂಜಾನೆ ಈ ಉಪಗ್ರಹವನ್ನು ಉಡಾಯಿಸಲು ವೇದಿಕೆ ಸಜ್ಜಾಗಿತ್ತಾದರೂ ಪ್ರಬಲ ಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಉಡ್ಡಯನ 24 ತಾಸುಗಳ ಕಾಲ ವಿಳಂಬವಾಯಿತು.
ಜಿಯೋಸ್ಯಾಟಿಲೈಟ್-18 ದೇಶದ ಅತ್ಯಾಧುನಿಕ ದೂರಸಂಪರ್ಕ ಉಪಗ್ರಹವಾಗಿದ್ದು, ಇದರಲ್ಲಿರುವ 48 ಟ್ರಾನ್ಸ್ಪಾಂಡರ್ಗಳು ಸಿಗ್ನಲ್ಗಳ ಸ್ವೀಕಾರ ಮತ್ತು ರವಾನೆಯ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಿದೆ. ಇಸ್ರೋದಿಂದ ನಿರ್ಮಾಣಗೊಂಡಿರುವ ಜಿಸ್ಯಾಟ್-18 ದೂರಸಂಪರ್ಕ ಸೇವೆಗಳನ್ನು ಒದಗಿಸಲಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬಾಹ್ಯಾಕಾಶ ಸಂಸ್ಥೆಯ 15 ಟೆಲಿಕಮ್ಯೂನಿಕೇಷನ್ ಸ್ಯಾಟಿಲೈಟ್ಗಳ ಕಾರ್ಯವನ್ನು ಮತ್ತಷ್ಟು ಬಲಗೊಳಿಸಲಿದೆ
ಪ್ರಧಾನಿ ಅಭಿನಂದನೆ :
ಜಿಸ್ಯಾಟ್-18 ಉಪಗ್ರಹದ ಯಶ್ವಸಿ ಉಡಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.