Monday, September 16, 2024
Homeಇದೀಗ ಬಂದ ಸುದ್ದಿಇಸ್ರೋ ಮತ್ತೊಂದು ಮೈಲಿಗಲ್ಲು, EOS-08 ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

ಇಸ್ರೋ ಮತ್ತೊಂದು ಮೈಲಿಗಲ್ಲು, EOS-08 ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ (ಆಂಧ್ರಪ್ರದೇಶ), ಆ.16– ಇಸ್ರೋ ಇಂದು ಬೆಳಿಗ್ಗೆ ತನ್ನ ಮೂರನೇ ಮತ್ತು ಅಂತಿಮ ಅಭಿವೃದ್ಧಿ ವಿಮಾನ, ಸಣ್ಣ ಉಪಗ್ರಹ ,ಭೂ ವೀಕ್ಷಣಾ ಉಪಗ್ರಹ ಸೇರಿ ಹಲವು ಬಹುಪಯೋಗಿ ಉಪಗ್ರಹ ಹೊತ್ತ ರಾಕೆಟ್‌ ನಭಕ್ಕೆ ಹಾರಿದೆ.

ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಬೆಳಿಗ್ಗೆ 9.17ಕ್ಕೆ ಉಡಾವಣಾ ಮಾಡಲಾಗಿದ್ದು ಇದರಿಂದ ಮತ್ತೊಮೆ ಇಸ್ರೋ ಹೊಸ ಮೈಲಿಗಲ್ಲು ಸಾಧಿಸಿದೆ. ಮೈಕ್ರೊಸ್ಯಾಟಲೈಟ್‌ ಅನ್ನು ವಿನ್ಯಾಸಗೊಳಿ ಅಭಿವೃದ್ಧಿಪಡಿಸಲಾಗಿದ್ದು ಮತ್ತು ಮೈಕ್ರೋಸ್ಯಾಟಲೈಟ್‌ ಬಸ್‌‍ಗೆ ಹೊಂದಿಕೆಯಾಗುವ ಪೇಲೋಡ್‌ ಉಪಕರಣಗಳು ಸೇರಿವೆ ಎಂದು ಬೆಂಗಳೂರಿನ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಪ್ರಧಾನ ಕಚೇರಿಯ ತಿಳಿಸಿದೆ.

ಪೇಲೋಡ್‌ ಅನ್ನು ಮಿಡ್‌-ವೇವ್‌ ಮತ್ತು ಲಾಂಗ್‌-ವೇವ್‌ ಬ್ಯಾಂಡ್‌ಗಳು ,ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆ, ಬೆಂಕಿ ಗುರುತ್ತಿಸುವ ಹಗಲು ಮತ್ತು ರಾತ್ರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲುವಂತೆ ಸಾಧನ ವಿನ್ಯಾಸಗೊಳಿಸಲಾಗಿದೆ. ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಮತ್ತು ಕೈಗಾರಿಕಾ ಮತ್ತು ವಿದ್ಯುತ್‌ ಸ್ಥಾವರ ವಿಪತ್ತು ಮೇಲ್ವಿಚಾರಣೆ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಗರ ಮೇಲಿನ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶದ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಮೇಲಿನ ಕ್ರಯೋಸ್ಪಿಯರ್‌ ಅಧ್ಯಯನಗಳು, ಪ್ರವಾಹ ಪತ್ತೆ ಮತ್ತು ಒಳನಾಡಿನ ಜಲಮೂಲ ಪತ್ತೆಯಂತಹ ಅಪ್ಲಿಕೇಶನ್‌ಗಳಿಗಾಗಿ ರಿಮೋಟ್‌ ಸೆನ್ಸಿಂಗ್‌ ಸಾಮರ್ಥ್ಯವೂ ಒಳಗೊಂಡಿದೆ.

ಉಪಗ್ರಹ ಕ್ಷೆ ಸೇರಿದ್ದು ಪ್ರಯೋಗ ಯಶಸ್ವಿಯಾಗಿದೆ.ಈ ರಾಕೆಟ್‌ ಉಡಾವಣೆಯನ್ನು ವೀಕ್ಷಿಸಲು ವಿವಿಧ ಶಾಲಾ ಮಕ್ಕಳು ,ವಿದ್ಯಾರ್ಥಿಗಳು ಆಗಮಿಸಿ ಖುಷಿ ಪಟ್ಟರು

RELATED ARTICLES

Latest News