ನವದೆಹಲಿ, ಏ.15- ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ವಕ್ಫ್ ಆಸ್ತಿಗಳನ್ನು ಅಥವಾ ದತ್ತಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಮೀಸಲಾಗಿರುವ ಆಸ್ತಿಗಳನ್ನು ಪ್ರಾಮಾಣಿಕವಾಗಿ ಬಳಸಿದ್ದರೆ ಯುವ ಮುಸ್ಲಿಮರು ಜೀವನೋಪಾಯಕ್ಕಾಗಿ ಪಂಕ್ಚರ್ ಹಾಕುವ ಅಗತ್ಯವಿರುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಹರಿಯಾಣದ ಹಿಸಾರ್ ನಲ್ಲಿ ನಿನ್ನೆ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಲಕ್ಷಾಂತರ ಹೆಕ್ಟೇರ್ ಭೂಮಿ ವಕ್ಫ್ ಅಸ್ತಿಯಾಗಿದೆ ಆದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.
ವಕ್ಸ್ ಆಸ್ತಿಗಳನ್ನು ಪ್ರಾಮಾಣಿಕವಾಗಿ ಬಳಸಿದ್ದರೆ ಮುಸ್ಲಿಂ ಯುವಕರು ಬೈಸಿಕಲ್ ಗಳಿಗೆ ಪಂಕ್ಟರ್ ಹಾಕುವ, ದುರಸ್ತಿ ಮಾಡುವ ಮೂಲಕ ಜೀವನೋಪಾಯ ನಡೆಸುವ ಅಗತ್ಯವಿಲ್ಲ ಎಂದಿದ್ದರು.
ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಈ ಹೇಳಿಕೆಗೆ ತಿರುಗೇಟು ನೀಡಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಸಿದ್ದಾಂತ ಮತ್ತು ನಂಪನ್ಮೂಲಗಳನ್ನು ದೇಶದ ಹಿತಾಸಕ್ತಿಗಾಗಿ ಬಳಸಿದ್ದರೆ, ಪ್ರಧಾನಿ ತಮ್ಮ ಬಾಲ್ಯದಲ್ಲಿ ಚಹಾ ಮಾರಾಟ ಮಾಡುವ ಅಗತ್ಯವಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ತಮ್ಮ ಸರ್ಕಾರ ಅಧಿಕಾರದಲ್ಲಿದ್ದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಬಡವರಾದ ಹಿಂದೂಗಳು ಅಥವಾ ಮುಸ್ಲಿಮರಿಗೆ ಏನ್ನು ಮಾಡಿದ್ದಾರೆ ಎಂದು ಓವೈಸಿ ಪ್ರಶ್ನಿಸಿದರು. ಕಾನೂನು ದುರ್ಬಲವಾಗಿರುವುದರಿಂದ ವಕ್ಫ್ ಆಸ್ತಿಗಳಲ್ಲಿ ಈಗ ಏನಾಗಿದೆ, ಅದು ಆಗಲು ಸಾಧ್ಯವಾಗಿದೆ. ಮೋದಿಯವರ ತಿದ್ದುಪಡಿ ಕಾಯ್ದೆ ವಕ್ಫ್ ಆಸ್ತಿಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ ಗರ್ಹಿ ಅವರು, ಮುಸ್ಲಿಮರು ಪಂಕ್ಚರ್ ಗಳನ್ನು ಸರಿಪಡಿಸುತ್ತಾರೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗಾಗಿ ಬಳಸುವ ಭಾಷೆಯಾಗಿದೆ ಎಂದು ಹೇಳಿದರು. ಇಂತಹ ಹೇಳಿಕೆ ಪ್ರಧಾನಿಗೆ ಸೂಕ್ತವಲ್ಲ. ದೇಶದ ಯುವಕರಿಗೆ ಯಾವುದೇ ಉದ್ಯೋಗಗಳಿಲ್ಲದ ಪರಿಸ್ಥಿತಿಯನ್ನು ಪ್ರಧಾನಿ ತಂದಿದ್ದಾರೆ. ಪಂಕ್ಚರ್ ಗಳನ್ನು ಸರಿಪಡಿಸುವುದು ಅಥವಾ ಬಜ್ಜಿಗಳನ್ನು ಮಾರಾಟ ಮಾಡುವುದು ಏಕೈಕ ಆಯ್ಕೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಮುಸ್ಲಿಮರು ಕೇವಲ ಪಂಕ್ಚರ್ ಗಳನ್ನು ಹಾಕುವುದಿಲ್ಲ. ಮುಸ್ಲಿಮರು ದೇಶಕ್ಕಾಗಿ ಏನು ಮಾಡಿದ್ದಾರೆಂದು ನಾನು ಪಟ್ಟಿ ಮಾಡಬಲ್ಲೆ ಆದರೆ ಇದು ಸೂಕ್ತ ಸಮಯವಲ್ಲ, ನೀವು ಮುಸ್ಲಿಮರನ್ನು ದ್ವೇಷಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಹರಿಯಾಣದ ಹಿಸಾರ್ ನಲ್ಲಿ ನಿನ್ನೆ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಲಕ್ಷಾಂತರ ಹೆಕ್ಟೇರ್ ಭೂಮಿ ಎಕ್ಸ್ ಅಸ್ತಿಯಾಗಿದೆ ಆದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.
ವಕ್ಸ್ ಆಸ್ತಿಗಳನ್ನು ಪ್ರಾಮಾಣಿಕವಾಗಿ ಬಳಸಿದ್ದರೆ ಮುಸ್ಲಿಂ ಯುವಕರು ಬೈಸಿಕಲ್ ಗಳಿಗೆ ಪಂಕ್ಟರ್‌ಗಳನ್ನು ದುರಸ್ತಿ ಮಾಡುವ ಮೂಲಕ ಜೀವನೋಪಾಯವನ್ನು ಗಳಿಸುವ ಅಗತ್ಯವಿರಲಿಲ್ಲ ಎಂದಿದ್ದರು.
ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸ ಈ ಹೇಳಿಕೆಗೆ ತಿರುಗೇಟು ನೀಡಿದ್ದು ಸಂಘ (ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‍ಎಸ್‍ಎಸ್, ಬಿಜೆಪಿಯ ಸೈದ್ದಾಂತಿಕ ಪೋಷಕ) ತನ್ನ ಸಿದ್ದಾಂತ ಮತ್ತು ನಂಪನ್ಮೂಲಗಳನ್ನು ದೇಶದ ಹಿತಾಸಕ್ತಿಗಾಗಿ ಬಳಸಿದ್ದರೆ, ಪ್ರಧಾನಿ ತಮ್ಮ ಬಾಲ್ಯದಲ್ಲಿ ಚಹಾ ಮಾರಾಟ ಮಾಡುವ ಅಗತ್ಯವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ತಮ್ಮ ಸರ್ಕಾರ ಅಧಿಕಾರದಲ್ಲಿದ್ದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಬಡವರಾದ ಹಿಂದೂಗಳು ಅಥವಾ ಮುಸ್ಲಿಮರಿಗೆ ಏನ್ನು ಮಾಡಿದ್ದಾರೆ ಎಂದು ಓವೈಸಿ ಪ್ರಶ್ನಿಸಿದರು. ವಕ್ಸ್ ಆಸ್ತಿಗಳಲ್ಲಿ ಏನಾಯಿತು ಎಂಬುದಕ್ಕೆ ದೊಡ್ಡ ಕಾರಣವೆಂದರೆ ಎಕ್ ಕಾನೂನುಗಳು ಯಾವಾಗಲೂ ದುರ್ಬಲವಾಗಿವೆ.
ಮೋದಿಯವರ ವಕ್ಸ್ ತಿದ್ದುಪಡಿಗಳು ಅವರನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ ಎಂದು ಅವರು ಬರೆದಿದ್ದಾರೆ. ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ ಗರ್ಹಿ ಅವರು ಮುಸ್ಲಿಮರು ಪಂಕ್ಚರ್ ಗಳನ್ನು ಸರಿಪಡಿಸುತ್ತಾರೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗಳು ಬಳಸುವ ಭಾಷೆಯಾಗಿದೆ ಎಂದು ಹೇಳಿದರು. ಇಂತಹ ಹೇಳಿಕೆ ಪ್ರಧಾನಿಗೆ ಸೂಕ್ತವಲ್ಲ. ಅಲ್ಲದೆ, ನೀವು ದೇಶದ ಯುವಕರನ್ನು ಈ ಹಂತಕ್ಕೆ ತಂದಿದ್ದೀರಿ. ಯಾವುದೇ ಉದ್ಯೋಗಗಳಿಲ್ಲ. ಪಂಕ್ಚರ್ ಗಳನ್ನು ಸರಿಪಡಿಸುವುದು ಅಥವಾ ಬಜ್ಜಿಗಳನ್ನು ಮಾರಾಟ ಮಾಡುವುದು ಏಕೈಕ ಆಯ್ಕೆಯಾಗಿದೆ ಎಂದಿದ್ದಾರೆ.
ಮುಸ್ಲಿಮರು ಕೇವಲ ಪಂಕ್ಚರ್ ಗಳನ್ನು ಮಾಡುವುದಿಲ್ಲ. ಮುಸ್ಲಿಮರು ಏನು ಮಾಡಿದ್ದಾರೆಂದು ನಾನು ಪಟ್ಟಿ ಮಾಡಬಲ್ಲೆ ಆದರೆ ಇದು ಸಮಯವಲ್ಲ, ನೀವು ಕಾಂಗ್ರೆಸ್ ಬೆಂಬಲಿಗರು (ಮುಸ್ಲಿಮರೊಂದಿಗೆ) ಎಂದು ಹೇಳುತ್ತಿದ್ದೀರಿ. ನೀವು ಅವರನ್ನು ದ್ವೇಷಿಸುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ.