Friday, May 24, 2024
Homeರಾಷ್ಟ್ರೀಯ300 ಅಡಿ ಆಳದ ಕಮರಿಗೆ ಕಾರು ಉರುಳಿ ಬಿದ್ದು 10 ಮಂದಿ ಸಾವು

300 ಅಡಿ ಆಳದ ಕಮರಿಗೆ ಕಾರು ಉರುಳಿ ಬಿದ್ದು 10 ಮಂದಿ ಸಾವು

ಬನಿಹಾಲ್/ಜಮ್ಮು, ಮಾ.29-ಜಮ್ಮು-ಶ್ರೀನಗರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಕಾರೊಂದು 300 ಅಡಿ ಕಮರಿಗೆ ಬಿದ್ದು 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಐಷಾರಾಮಿ ಕಾರು ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿತ್ತಾಗ ಬ್ಯಾಟರಿ ಚೆಶ್ಮಾ ಪ್ರದೇಶದ ಬಳಿ ಮುಂಜಾನೆ 1.15 ರ ಸುಮಾರಿಗೆ 300 ಅಡಿ ಕಮರಿಗೆ ಬಿದ್ದಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭಾರೀ ಮಳೆಯ ಸುರಿದಿದ್ದು ಇದರ ನಡುವೆಯೇ 10 ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಕಾರಿನ ಚಾಲಕ ಜಮ್ಮುವಿನ ಅಂಬ್ ಘೋಥಾದ ಬಲ್ವಾನ್ ಸಿಂಗ್ (47) ಮತ್ತು ಬಿಹಾರದ ಪಶ್ಚಿಮ ಚಂಪಾರಣ್‍ನ ವಿಪಿನ್ ಮುಖಿಯಾ ಭೈರಗಾಂಗ್ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದರು. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಮೃತರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದರು.

RELATED ARTICLES

Latest News