ರಾಯ್ಪುರ,ನ.22- ಛತ್ತೀಸ್ಗಢದ ಸುಕಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ 10 ಮಾವೋವಾದಿಗಳು ಹತರಾಗಿದ್ದಾರೆ.ಸುಕಾ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್‌್ಸ (ಡಿಆರ್ಜಿ) ಮತ್ತು ಮಾವೋವಾದಿಗಳ ನಡುವೆ ನಡೆದ ಎನ್ಕೌಂಟರ್ನಲ್ಲಿ 10 ಮಾವೋವಾದಿಗಳು ಹತರಾಗಿದ್ದಾರೆ.
ಐಎನ್ಎಸ್ಎಎಸ್, ಎಕೆ-47, ಎಸ್ಎಲ್ಆರ್, ಮತ್ತು ಹಲವಾರು ಇತರ ಶಸಾ್ತ್ರಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲೀಯರು ಒಡಿಶಾ ಮೂಲಕ ಛತ್ತೀಸ್ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಕಾರ್ಯಾಚರಣೆ ಆರಂಭಿಸಿದೆ.
ಇಂದು ಬೆಳ್ಳಂಬೆಳಗ್ಗೆ ಸುಕಾ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ 10ಮಾವೋವಾದಿಗಳನ್ನು ಭದ್ರತಾ ಪಡೆ ಎನ್ಕೌಂಟರ್ ಮಾಡಿದೆ ಎಂದು ಬಸ್ತಾರ್ ಇನ್‌್ಸಪೆಕ್ಟರ್-ಜನರಲ್ ಆಫ್ ಪೋಲೀಸ್ ಪಿ ಸುಂದರರಾಜ್ ಹೇಳಿದ್ದಾರೆ.
ಭದ್ರತಾ ಸಿಬ್ಬಂದಿಯ ತಂಡವು ನಕ್ಸಲೀಯರ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಭೇಜ್ಜಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಬೆಳಿಗ್ಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- ಬೆಂಗಳೂರಲ್ಲಿ 3.5 ಕೋಟಿ ರೂ. ಮೌಲ್ಯದ ಗಾಂಜಾ ವಶ, ಮೂವರ ಬಂಧನ
- ಛತ್ತೀಸ್ಗಢ : ಎನ್‌ಕೌಂಟರ್‌ನಲ್ಲಿ 10 ನಕ್ಸಲಿಯರು ಫಿನಿಶ್
- ಚನ್ನಪಟ್ಟಣ ಉಪ ಚುನಾವಣೆಯ ಮತ ಎಣಿಕೆಗೆ ಸಿದ್ಧತೆ, ಬಿಗಿ ಭದ್ರತೆ
- ಅದಾನಿ ಪ್ರಕರನಾಡಿದ ಭಾರತ-ಅಮೆರಿಕ ಬಾಂಧವ್ಯಕ್ಕೆ ಅಡ್ಡಿಯಿಲ್ಲ : ಶ್ವೇತಭವನ
- ಮಹಾರಾಷ್ಟ್ರ – ಜಾರ್ಖಂಡ್ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ
ಕಳೆದ ತಿಂಗಳು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 30ಕ್ಕೂ ಅಧಿಕ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿತ್ತು. ಅಕ್ಟೋಬರ್ 4ರಂದು ಛತ್ತೀಸ್ಗಢದ ನಾರಾಯಣಪುರ- ದಾಂತೇವಾಡ ಗಡಿ ಅರಣ್ಯ ಪ್ರದೇಶದಲ್ಲಿಸಂಚು ರೂಪಿಸುತ್ತಿದ್ದ 30 ಮಾವೋವಾದಿ ನಕ್ಸಲರನ್ನು ಭದ್ರತಾ ಪಡೆಗಳು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದೆ.
ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಕ್ಸಲ್ ನಿರ್ಮೂಲನಾ ಕಾರ್ಯಾಚರಣೆ ಪ್ರಾರಂಭಿಸಿತ್ತು. ಎಕೆ ಸರಣಿ ರೈಫಲ್ಗಳು ಮತ್ತು ಇತರ ಶಸಾ್ತ್ರಸ್ತ್ರಗಳು ಸೇರಿದಂತೆ ಹಲವಾರು ಅಸಾಲ್ಟ್ ರೈಫಲ್ಗಳನ್ನು ನಕಲ್ಸರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ದೊಡ್ಡ ಪ್ರಮಾಣದಲ್ಲಿ ಮಾವೋವಾದಿಗಳು ಕಾರ್ಯಾಚರಣೆ ಮಾಡುತ್ತಿರುವ ವರದಿಗಳು ಬಂದ ಬಳಿಕ ಭದ್ರತಾ ಪಡೆಗಳು ಓರ್ಚಾ ಮತ್ತು ಬರ್ಸೂರ್ ಪೊಲೀಸ್ ಠಾಣೆಗಳ ವ್ಯಾಪ್ತಿಯ ಗೋವೆಲ್, ನೆಂಡೂರ್ ಮತ್ತು ತುಲ್ತುಲಿ ಗ್ರಾಮಗಳಲ್ಲ ಕಾರ್ಯಾಚರಣೆ ನಡೆಸಿತ್ತು. ಹಳ್ಳಿಗಳ ಮೂಲಕ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
ನೆಂದೂರು-ತುಲ್ತುಲಿ ಬಳಿಯ ಕಾಡುಗಳಲ್ಲಿ ನಕ್ಸಲರು ಎದುರಾಗಿದ್ದಾರೆ. ಈ ವೇಳೆ ಪರಸ್ಪರ ಗುಂಡಿನ ಚಮಮಕಿ ಪ್ರಾರಂಭವಾಯಿತು. ಎಚ್ಚರಿಕೆಯಿಂದ ಅವರನ್ನು ಬೆನ್ನಟ್ಟಿ ಹತ್ಯೆ ಮಾಡಲಾಗಿತ್ತು. ಭದ್ರತಾ ಪಡೆಗಳು ಕಾಡಿನ ಒಳಗೆ ಹೋಗಿ ಉಳಿದ ಕೆಲವು ಮಾವೋವಾದಿಗಳನ್ನು ಬೆನ್ನಟ್ಟುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಎನ್ಕೌಂಟರ್ ಛತ್ತೀಸ್ಗಡದ ಮಾವೋವಾದಿ ಬಂಡಾಯದ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ದೊರಕಿದ ದೊಡ್ಡ ಯಶಸ್ಸು ಇದಾಗಿತ್ತು.