Saturday, May 4, 2024
Homeರಾಷ್ಟ್ರೀಯದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣ

ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣ

ಅಹಮದಾಬಾದ್, ಜ.8: ಗುಜರಾತ್-ಮಹಾರಾಷ್ಟ್ರ ನಡುವಿನ ಬುಲೆಟ್ ರೈಲು ಯೋಜನೆಗೆ 100 ಪ್ರತಿಶತ ಭೂಸ್ವಾಧೀನವನ್ನು ಪೂರ್ಣಗೊಳಿಸಿದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾಪೆರ್ರೇಷನ್ ಲಿಮಿಟೆಡ್ ಹೇಳಿದೆ. ಮುಂಬೈ-ಅಹಮದಾಬಾದ್ ನಡುವಿನ ರೈಲು ಕಾರಿಡಾರ್‍ಗಾಗಿ ಭೂಸ್ವಾಧೀನ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್‍ನಲ್ಲಿ ಖುಷಿ ಹಂಚಿಕೊಂಡಿದ್ದಾರೆ, ಯೋಜನೆಗೆ ಅಗತ್ಯವಿರುವ ಸಂಪೂರ್ಣ 1389.49 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜನಪ್ರೀಯತೆ ಗಳಿಸಿರುವ ಮುಂಬೈ ಮತ್ತು ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು ಮಾರ್ಗವನ್ನು ನಿರ್ಮಿಸುವ ಸಿವಿಲ್ ಗುತ್ತಿಗೆಗಳನ್ನು ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ನೀಡಲಾಗಿದೆ, 120.4 ಕಿಮೀ ಗರ್ಡರ್‍ಗಳನ್ನು ಪ್ರಾರಂಭಿಸಲಾಗಿದೆ ಮತ್ತು 271 ಕಿಮೀ ಪಿಯರ್ ಕಾಸ್ಟಿಂಗ್ ಪೂರ್ಣಗೊಂಡಿದೆ ಎಂದು ಎನ್‍ಎಚ್‍ಎಸ್‍ಆರ್‍ಸಿಎಲ್ ತಿಳಿಸಿದೆ.

ಜಪಾನಿನ ಶಿಂಕನ್‍ಸೆನ್‍ನಲ್ಲಿ ಬಳಸಿದಂತೆ ಕಾರಿಡಾರ್ ಟ್ರ್ಯಾಕ್ ಸಿಸ್ಟಮ್‍ಗಾಗಿ ಮೊದಲ ಬಲವರ್ತಧಿ ಕಾಂಕ್ರೀಟ್ ಟ್ರ್ಯಾಕ್ ಬೆಡ್ ಅನ್ನು ಹಾಕುವ ಕಾರ್ಯ ಸೂರತ್ ಮತ್ತು ಆನಂದ್‍ನಲ್ಲಿ ಪ್ರಾರಂಭವಾಗಿದೆ. ಇದು ಮೊದಲ ಬಾರಿಗೆ ಎ- ಸ್ಲ್ಯಾಬ್ ಬ್ಯಾಲೆಸ್ಟ್‍ಲೆಸ್ ಟ್ರ್ಯಾಕ್ ಸಿಸ್ಟಮ್ ಅನ್ನು ಭಾರತದಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದೆ. ಗುಜರಾತ್‍ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ 350 ಮೀಟರ್ ಉದ್ದ ಮತ್ತು 12.6 ಮೀಟರ್ ವ್ಯಾಸದ ಮೊದಲ ಪರ್ವತ ಸುರಂಗವನ್ನು ಕೇವಲ 10 ತಿಂಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ ಎಂದು ಹೇಳಿದೆ.

ಜೆಟ್ ಲ್ಯಾಗ್ ಪಾರ್ಟಿ ಪ್ರಕರಣ : ನಟ ದರ್ಶನ್ ಸೇರಿ ಹಲವರಿಗೆ ನೋಟಿಸ್

ಮೊದಲ ಉಕ್ಕಿನ ಸೇತುವೆ, 70 ಮೀಟರ್ ವ್ಯಾಪಿಸಿರುವ ಮತ್ತು 673 ಒಖಿ ತೂಕವನ್ನು ಸೂರತ್‍ನಲ್ಲಿ ಓಊ 53 ಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಮತ್ತು 28 ರಲ್ಲಿ 16 ಅಂತಹ ಸೇತುವೆಗಳು ತಯಾರಿಕೆಯ ವಿವಿಧ ಹಂತಗಳಲ್ಲಿವೆ ಎಂದು ಅದು ಹೇಳಿದೆ.

ಕಾರಿಡಾರ್‍ನಲ್ಲಿ 24 ರಲ್ಲಿ ಆರು ನದಿಗಳ ಮೇಲೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ, ಪಾರ್ (ವಲ್ಸಾದ್ ಜಿಲ್ಲೆ), ಪೂರ್ಣ (ನವಸಾರಿ ಜಿಲ್ಲೆ), ಮಿಂಧೋಲಾ (ನವಸಾರಿ ಜಿಲ್ಲೆ), ಅಂಬಿಕಾ (ನವಸಾರಿ ಜಿಲ್ಲೆ), ಔರಂಗ (ವಲ್ಸಾದ್ ಜಿಲ್ಲೆ) ಮತ್ತು ವೆಂಗನಿಯಾ ( ನವಸಾರಿ ಜಿಲ್ಲೆ)ಎಂದು ಹೇಳಿದೆ.

ನರ್ಮದಾ, ತಪತಿ, ಮಾಹಿ ಮತ್ತು ಸಬರಮತಿ ನದಿಗಳ ಮೇಲೆ ಸೇತುವೆ ಕಾಮಗಾರಿ ನಡೆಯುತ್ತಿದೆ ಸಂಚಾರ ವೇಳೆ ರೈಲು ಮತ್ತು ಸಿವಿಲ್ ರಚನೆಗಳಿಂದ ಉಂಟಾಗುವ ಶಬ್ದವನ್ನು ತಗ್ಗಿಸಲು ವಾಯಡಕ್ಟ್‍ನ ಎರಡೂ ಬದಿಗಳಲ್ಲಿ ಶಬ್ದ ತಡೆಗಳನ್ನು ನಿರ್ಮಿಸಲಾಗುತ್ತಿದೆ.

ಮಹಾರಾಷ್ಟ್ರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾ ನಡುವಿನ 21 ಕಿಮೀ ಉದ್ದದ ಸುರಂಗದ ಭಾಗವಾಗಿರುವ ಭಾರತದ ಮೊದಲ 7 ಕಿಮೀ ಸಾಗರದೊಳಗಿನ ರೈಲು ಸಂಚಾರಕ್ಕಾಗಿ ಕೆಲಸ ಪ್ರಾರಂಭವಾಗಿದೆ ಮತ್ತು ಮುಂಬೈ ಎಚ್‍ಎಸ್‍ಆರ್ ನಿಲ್ದಾಣದ ನಿರ್ಮಾಣಕ್ಕಾಗಿ ಉತ್ಖನನ ಕಾರ್ಯಗಳು ಪ್ರಾರಂಭವಾಗಿದೆ ಎಂದು ಅದು ಹೇಳಿದೆ.

RELATED ARTICLES

Latest News