ಗುರುವಾರದಿಂದ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತ..!?

Social Share

ಬೆಂಗಳೂರು,ನ.15- ಗುರುವಾರದಿಂದ ರಾಜ್ಯದಾದ್ಯಂತ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
108 ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಜಿವಿಕೆ ಸಂಸ್ಥೆಯವರು ತಮ್ಮ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿರುವುದರಿಂದ ಗುರುವಾರದಿಂದ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಲು ಸಿಬ್ಬಂದಿಗಳು ತೀರ್ಮಾನಿಸಿದ್ದಾರೆ.

ಕಳೆದ ಹಲವಾರು ತಿಂಗಳುಗಳಿಂದ ಜಿವಿಕೆ ಸಂಸ್ಥೆಯವರು ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದರು. ಆಡಳಿತ ಮಂಡಳಿಯ ಈ ಧೋರಣೆ ಖಂಡಿಸಿ ಸಿಬ್ಬಂದಿಗಳು ಪ್ರತಿಭಟನೆ ಹಾದಿ ಹಿಡಿದಿದ್ದರು.

ಹೀಗಾಗಿ ಮಧ್ಯ ಪ್ರವೇಶಿಸಿದ ಸರ್ಕಾರ ಜಿವಿಕೆ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಸಿಬ್ಬಂದಿಗಳಿಗೆ ಈ ಕೂಡಲೆ ಮೂರು ತಿಂಗಳ ವೇತನ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಆರೋಗ್ಯ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಜಿವಿಕೆ ಸಂಸ್ಥೆಯವರು ಕೇವಲ ಒಂದು ತಿಂಗಳ ವೇತನ ಪಾವತಿಸಿ ಮತ್ತೆ ತಮ್ಮ ಕಳ್ಳಾಟ ಮುಂದುವರೆಸಿದ್ದರು.

ಜಿ-20 ಶೃಂಗಸಭೆಗೆ ಆಗಮಿಸಿದ್ದ ಕಾಂಬೋಡಿಯಾ ಪ್ರಧಾನಿಗೆ ಕೊರೋನಾ ಪಾಸಿಟಿವ್

ಕಳೆದ 15 ದಿನಗಳ ಹಿಂದೆ ಸಭೆ ಮಾಡಿ ಸಂಬಳ ನೀಡಲು ಅರೋಗ್ಯ ಇಲಾಖೆ ಅಯುಕ್ತ ರಂದೀಪ್ ಸೂಚಿಸಿದರು ಜಿವಿಕೆ ಸಂಸ್ಥೆಯವರು ವೇತನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿರುವುದು ಸಿಬ್ಬಂದಿಗಳ ತಾಳ್ಮೆ ಕೆಡಿಸಿದೆ.
ಹೀಗಾಗಿ ನಾಳೆ ಸಂಜೆ ವೇಳೆಗೆ ಬಾಕಿ ಇರುವ ಮೂರು ತಿಂಗಳ ವೇತನ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಗುರುವಾರದಿಂದ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಆಂಬ್ಯುಲೆನ್ಸ್ ನೌಕರರ ಸಂಘದ ಕಾರ್ಯದರ್ಶಿ ಪರಮಶಿವಯ್ಯ ತಿಳಿಸಿದ್ದಾರೆ.

ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ..!

ಸಾರಿಗೆ ಇಲಾಖೆಯವರು ಮೂರು ದಿನಗಳ ಒಳಗೆ ಬಾಕಿ ಇರುವ ವೇತನ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಆದರೂ ಜಿವಿಕೆ ಸಂಸ್ಥೆಯವರು ವೇತನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದ್ದಾರೆ. ನಾಳೆ ಸಂಜೆ ವೇಳೆಗೆ ವೇತನ ಪಾವತಿ ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು 108 ಆಂಬ್ಯುಲೆನ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸುಮಾರು 750 ಆಂಬ್ಯುಲೆನ್ಸ್ ವಾಹನಗಳಿವೆ.

ಶನಿ ಸಂತಾನದಂತೆ ಬಿಜೆಪಿ ಆಡಳಿತ : ವೀರಪ್ಪ ಮೊಯ್ಲಿ ಟೀಕೆ

ಒಂದು ವೇಳೆ ಜಿವಿಕೆ ಸಂಸ್ಥೆಯವರು ನಾಳೆ ಸಂಜೆ ವೇಳೆಗೆ ವೇತನ ಬಿಡುಗಡೆ ಮಾಡದಿದ್ದರೆ, ಗುರುವಾರದಿಂದ ರೋಗಿಗಳು ಆಂಬ್ಯುಲೆನ್ಸ್ ಸಿಗದೆ ಪರದಾಡುವಂತಾಗಲಿದೆ.

Articles You Might Like

Share This Article