Thursday, September 19, 2024
Homeರಾಷ್ಟ್ರೀಯ | Nationalದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ, ಅಲ್‌ ಖೈದಾ ನಂಟು ಹೊಂದಿದ್ದ 11 ಶಂಕಿತರ ಬಂಧನ 

ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ, ಅಲ್‌ ಖೈದಾ ನಂಟು ಹೊಂದಿದ್ದ 11 ಶಂಕಿತರ ಬಂಧನ 

11 held in connection with Al-Qaeda-inspired terror module: Delhi Police

ನವದೆಹಲಿ,ಆ.23- ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಲ್‌ ಖೈದಾ  ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ 11ಜನ ಶಂಕಿತರನ್ನು ಬಂಧಿಸಿದ್ದಾರೆ.  ಜಾರ್ಖಂಡ್‌, ರಾಜಸ್ಥಾನ ಮತ್ತು ಉತ್ತರ ಪ್ರದೇಶದಾದ್ಯಂತ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಮೂರು ರಾಜ್ಯಗಳ ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ದೆಹಲಿ ಪೊಲೀಸರ ಮೂರು ವಿಶೇಷ ತಂಡ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಬರೋಬ್ಬರಿ 15ಸ್ಥಳಗಳಲ್ಲಿ ದಾಳಿಸಿ ನಡೆಸಿ 11ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಬಂಧಿತರಿಂದ ಒಂದು ಎಕೆ-47 ರೈಫಲ್‌, 38 ಬೋರ್‌ ರಿವಾಲ್ವರ್‌, 38 ಬೋನರ್‌ ಆರು ಲೈವ್‌ ಕಾಟ್ರಿಡ್ಜ್ ಗಳು, 32 ಬೋನರ್‌ 30 ಲೈವ್‌ ಕಾಟ್ರಿಡ್ಜ್ ಗಳು ಮತ್ತು  ಎಕೆ-47ನ 30 ಲೈವ್‌ ಕಾಟ್ರಿಡ್ಜ್ ಗಳು ಸೇರಿದಂತೆ ಭಾರೀ ಸಶಾ್ತ್ರಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಪೊಲೀಸರು ಡಮ್ಮಿ ಇನ್ಸಾಸ್‌ ರೈಫಲ್‌, ಏರ್‌ ರೈಫಲ್‌ ಮತ್ತು ಕಬ್ಬಿಣದ ಮೊಣಕೈ ಪೈಪ್‌, ಹ್ಯಾಂಡ್‌ ಗ್ರೆನೇಡ್‌, ಕೀ ರಿಮೋಟ್‌ ಕಂಟ್ರೋಲ್‌ ಯಾಂತ್ರಿಕ ವ್ಯವಸ್ಥೆ, ಕೆಲವು ತಂತಿಗಳು, 1.5-ವೋಲ್ಟ್  ಎಎ ಬ್ಯಾಟರಿ, ಟೇಬಲ್‌ ವಾಚ್‌, ನಾಲ್ಕು ನೆಲದ ಹಾಳೆಗಳು, ಗುರಿ, ಕ್ಯಾಂಪಿಂಗ್‌ ಟೆಂಟ್‌ ಮತ್ತು ವಿವಿಧ ಆಹಾರ ಪದಾರ್ಥಗಳಾದ ಬಿಸ್ಕತ್ತುಗಳು, ಪ್ಯಾಕೆಟ್‌ ಚಿಪ್‌್ಸ, ಮತ್ತು ನೀರಿನ ಬಾಟಲ್‌ ಮೊದಲಾದವುಗಳನ್ನು ಸೀಜ್‌ ಮಾಡಿದ್ದಾರೆ.

ರಾಜಸ್ಥಾನದ ಭಿವಾಡಿಯಲ್ಲಿ ಶಸ್ತ್ರಾಸ್ತ್ರ  ತರಬೇತಿ ಪಡೆಯುತ್ತಿದ್ದ ಆರು ಜನರನ್ನು ಬಂಧಿಸಲಾಗಿದೆ. ಜಾರ್ಖಂಡ್‌ ನಿವಾಸಿಗಳಾದ ಹಸನ್‌ ಅನ್ಸಾರಿ, ಇನಾಮುಲ್‌ ಅನ್ಸಾರಿ, ಅಲ್ತಾಫ್‌ ಅನ್ಸಾರಿ, ಅರ್ಷದ್‌ ಖಾನ್‌, ಉಮರ್‌ ಫಾರೂಕ್‌ ಮತ್ತು ಶಹಬಾಜ್‌ ಅನ್ಸಾರಿ ಬಂಧಿತರು. ಅವರು ಕಳೆದ ಕೆಲವು ದಿನಗಳಿಂದ ರಾಜಸ್ಥಾನದಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಇವರ ಬಂಧನದ ನಂತರ ಜಾರ್ಖಂಡ್ನ ರಾಂಚಿಯಲ್ಲಿ ಇನ್ನೂ ಐವರನ್ನು ಬಂಧಿಸಲಾಗಿದೆ. ಹೆಚ್ಚುವರಿ ಶಂಕಿತರನ್ನು ಇಶ್ತಿಯಾಕ್‌ ಅಹ್ಮದ್‌, ಮೋತಿಯುರ್‌, ರಿಜ್ವಾನ್‌, ಮುಫ್ತಿ ರಹಮತುಲ್ಲಾ ಮತ್ತು ಫೈಜಾನ್‌ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಭಯೋತ್ಪಾದನಾ ಘಟಕದ ಸದಸ್ಯರು ರಾಜಸ್ಥಾನದ ಅರಾವಳಿ ಬೆಟ್ಟಗಳ ಕಾಡುಗಳಂತಹ ವಿವಿಧ ಸ್ಥಳಗಳಲ್ಲಿ  ಶಸ್ತ್ರಾಸ್ತ್ರ ನಿರ್ವಹಣೆ ಸೇರಿದಂತೆ ತರಬೇತಿಪಡೆದಿದ್ದರು ಎಂದು ತಿಳಿಸಿದ್ದಾರೆ.

ಶಂಕಿತರನ್ನು ಬಂಧಿಸಲು ಈ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಲಾಯಿತು. ಉತ್ತರ ಪ್ರದೇಶದ ಅಲಿಗಢದಿಂದ ಮೂವರು ಶಂಕಿತ ಉಗ್ರರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ವರದಿ ಮಾಡಿದ್ದಾರೆ.

RELATED ARTICLES

Latest News