Sunday, September 15, 2024
Homeರಾಷ್ಟ್ರೀಯ | Nationalಆ.31ರೊಳಗೆ ಆಸ್ತಿ ಘೋಷಿಸದಿದ್ದರೆ 13 ಲಕ್ಷ ಸರ್ಕಾರಿ ನೌಕರರ ಸಂಬಳ ಕಟ್

ಆ.31ರೊಳಗೆ ಆಸ್ತಿ ಘೋಷಿಸದಿದ್ದರೆ 13 ಲಕ್ಷ ಸರ್ಕಾರಿ ನೌಕರರ ಸಂಬಳ ಕಟ್

Uttar Pradesh 13 lakh Govt employees may lose August salaries due to THIS order.

ಲಖ್ನೋ,ಆ.23- ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಆದೇಶವನ್ನು ಪಾಲಿಸದಿದ್ದರೆ 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಸಂಬಳ ಕಳೆದುಕೊಳ್ಳುವ ಅಪಾಯವಿದೆ.

ಸರ್ಕಾರಿ ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳನ್ನು ಸರ್ಕಾರಿ ಪೋರ್ಟಲ್ ಮಾನವ ಸಂಪದದಲ್ಲಿ ಆಗಸ್ಟ್ 31 ರೊಳಗೆ ಘೋಷಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಅವರಿಗೆ ಈ ತಿಂಗಳ ಸಂಬಳ ನೀಡಲಾಗುವುದಿಲ್ಲ. ಪಾಲಿಸದಿರುವುದು ಬಡ್ತಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿ ನೀಡಲಾದ ಆದೇಶದ ಆರಂಭಿಕ ಗಡುವು ಡಿ.31 ಆಗಿತ್ತು. ಅದರ ನಂತರ ಗಡುವನ್ನು ಹಲವು ಬಾರಿ ವಿಸ್ತರಿಸಲಾಯಿತು. ಜೂನ್ 30 ಮತ್ತು ನಂತರ ಜು.31ರವರೆಗೆ ವಿಸ್ತರಿಸಲಾಯಿತು. ಆದರೆ ಕೇವಲ 26 ಪ್ರತಿಶತ ಸರ್ಕಾರಿ ನೌಕರರು ಈ ನಿಯಮ ಪಾಲಿಸಿದ್ದಾರೆ. ಇದೀಗ ಈ ಗಡುವನ್ನು ಆ.31ಕ್ಕೆ ಮುಂದೂಡಲಾಗಿದೆ.

ಸದ್ಯ ಉತ್ತರ ಪ್ರದೇಶದಲ್ಲಿ 17 ಲಕ್ಷ 88 ಸಾವಿರದ 429 ಸರ್ಕಾರಿ ನೌಕರರಿದ್ದಾರೆ. ಈ ಪೈಕಿ ಶೇ 26ರಷ್ಟು ನೌಕರರು ಮಾತ್ರ ತಮ್ಮ ಆಸ್ತಿ ವಿವರ ನೀಡಿದ್ದಾರೆ. ಅಂದರೆ, 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇನ್ನೂ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕಾಗಿದೆ. ಈ ಹಿಂದೆ ಹಲವು ಬಾರಿ ಗಡುವನ್ನು ವಿಸ್ತರಿಸಲಾಗಿದ್ದರೂ, ವಿವರಗಳನ್ನು ಸಲ್ಲಿಸಲು ವಿಫಲರಾದವರಿಗೆ ಇತ್ತೀಚಿನ ನಿರ್ದೇಶನವು ಅಂತಿಮ ಗಡುವಾಗಿದೆ.

ಆಗಸ್ಟ್ 31 ರೊಳಗೆ ಆಸ್ತಿ ವಿವರಗಳನ್ನು ನೀಡುವವರಿಗೆ ಮಾತ್ರ ಆಗಸ್ಟ್ ತಿಂಗಳ ಪಾವತಿಯನ್ನು ನೀಡಲಾಗುವುದು ಮತ್ತು ಉಳಿದವರ ಸಂಬಳವನ್ನು ನಿಲ್ಲಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಕ್ರಮವು ಸರ್ಕಾರದೊಳಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ಗುರಿ ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ ಎಂದು ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಹೇಳಿದ್ದಾರೆ.

ರಾಜ್ಯ ಸರ್ಕಾರವು ತನ್ನ ಆದೇಶವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಅನೇಕ ಗಡುವು ವಿಸ್ತರಣೆಗಳು ತೋರಿಸುತ್ತವೆ ಎಂದು ಪ್ರತಿಪಕ್ಷದವರು ಈ ಕ್ರಮವನ್ನು ಟೀಕಿಸಿದ್ದಾರೆ.

RELATED ARTICLES

Latest News