Friday, November 22, 2024
Homeರಾಜ್ಯಅಮೆರಿಕದ ವರ್ಜೀನಿಯಾದಲ್ಲಿ ಆ.30, ಸೆ.1ರವರೆಗೆ 12ನೇ ಅಕ್ಕ ವಿಶ್ವ ಸಮ್ಮೇಳನ

ಅಮೆರಿಕದ ವರ್ಜೀನಿಯಾದಲ್ಲಿ ಆ.30, ಸೆ.1ರವರೆಗೆ 12ನೇ ಅಕ್ಕ ವಿಶ್ವ ಸಮ್ಮೇಳನ

ಬೆಂಗಳೂರು, ಜೂನ್‌ 14:ಕನ್ನಡ ನಾಡಿನ ಶ್ರೀಮಂತ ಭಾಷೆ, ಕಲೆ, ಪರಂಪರೆ, ಸಂಸ್ಕೃತಿಯನ್ನು ಸಪ್ತ ಸಾಗರದಾಚೆ ಪಸರಿಸುವ, ಬೆಳೆಸುವ 12ನೇ ಅಕ್ಕ ವಿಶ್ವ ಸಮ್ಮೇಳನ – 2024 ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್‌ಮಂಡ್‌ ನಗರದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಅಮೆರಿಕ ಕನ್ನಡ ಕೂಟಗಳ ಒಕ್ಕೂಟದ (ಅಕ್ಕ) ಅಧ್ಯಕ್ಷರಾದ ರವಿ ಬೋರೆಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದರಲ್ಲಿ ಒಟ್ಟು 42 ಅಮೆರಿಕ ಕನ್ನಡ ಸಂಘಗಳು ಸೇರಿ ಈ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ ಎಂದು ಅವರು ತಿಳಿಸಿದರು.

ಸಮ್ಮೇಳನದ ವೈಶಿಷ್ಟ್ಯಗಳು:
ಸಾಂಸ್ಕೃತಿಕ ಕಾರ್ಯಕ್ರಮಗಳು: ಕರ್ನಾಟಕದ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಮೆರಿಕದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಸ್ಪರ್ಧೆಗಳು: ಎಲ್ಲಾ ವಯೋಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತರಿಗೆ ಕರ್ನಾಟಕದಿಂದ ಆಗಮಿಸುವ ಗಣ್ಯರಿಂದ ಬಹುಮಾನ ವಿತರಿಸಲಾಗುತ್ತದೆ.

ಫ್ಯಾಶನ್‌ ಶೋ:
ಕನ್ನಡ ನಾಡಿನ ಕಲೆ, ಸಂಸ್ಕೃತಿಯ ವಿವಿಧ ಮಾದರಿಯ ವಸ್ತ್ರ ಮಾದರಿಗಳ ಪ್ರದರ್ಶನ ಆಯೋಜಿಸಲಾಗಿದೆ.ಸಾಹಿತ್ಯ ಗೋಷ್ಠಿಗಳು: ಅಮೆರಿಕ ಮತ್ತು ಕರ್ನಾಟಕದ ಸಾಹಿತಿಗಳ ನಡುವೆ ಸಮ್ಮಿಲನ ಮತ್ತು ಸಾಹಿತ್ಯ ವಿಚಾರಗೋಷ್ಠಿಗಳು ಜರುಗಲಿವೆ.

ವಿಶೇಷ ಬಿಸಿನೆಸ್‌‍ ಫೋರಂ:
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ವಾಣಿಜ್ಯೋದ್ಯಮಿಗಳಿಗೆ ಹಾಗೂ ಅಲ್ಲಿ ಉದ್ಯಮ ಆರಂಭಿಸಲು ಮತ್ತು ಕೆಲಸ ನಿರ್ವಹಿಸಲು ಇರುವ ಅವಕಾಶಗಳ ಕುರಿತು ಆಸಕ್ತ ಕನ್ನಡಿಗರಿಗಾಗಿ ವಿಶೇಷ ಬಿಸಿನೆಸ್‌‍ ಫೋರಂ ಮೂಲಕ ಚರ್ಚಿ ನಡೆಸಲಾಗುತ್ತದೆ.

ವಿಶೇಷ ಖಾದ್ಯ:
ಮೂರು ದಿನಗಳ ಸಮ್ಮೇಳನದಲ್ಲಿ ಕನ್ನಡ ನಾಡಿನ ವಿಶಿಷ್ಠ ಭಕ್ಷ್ಯ ಬೋಜನ ಸವಿಯುವ ಅವಕಾಶ ಲಭಿಸಲಿದೆ. ಕರ್ನಾಟಕದ ಬಹುತೇಕ ಮಾದರಿಯ ಊಟವನ್ನು ಪ್ರಸಿದ್ಧ ಅಡುಗೆ ತಯಾರಕರು ತಯಾರಿಸಿ ಬಡಿಸಲಿದ್ದಾರೆ.

ಪ್ರದರ್ಶನ ಮಳಿಗೆಗಳು:
ಅಮೆರಿಕ, ಭಾರತ ಮತ್ತು ಕರ್ನಾಟಕದ ವಿವಿಧ ಇಲಾಖೆ ಮತ್ತು ಮಳಿಗೆಗಳ ಪ್ರದರ್ಶನಗೊಳ್ಳಲಿವೆ.

ಸಂಗೀತ ಕಾರ್ಯಕ್ರಮಗಳು:
ಪ್ರತಿದಿನ ಕರ್ನಾಟಕದ ಜಾನಪದ, ಸಾಹಿತ್ಯ, ಸಿನಿಮಾ ಕುರಿತಾದ ಸಂಗೀತ ಕಾರ್ಯಕ್ರಮಗಳು, ಖ್ಯಾತ ಗಾಯಕರಾದ ವಿಜಯ್‌ ಪ್ರಕಾಶ್‌‍, ರಾಜೇಶ್‌ ಕೃಷ್ಣ, ನವೀನ್‌ ಸಜ್ಜು, ಅನುರಾಧ ಭಟ್‌ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಪುನೀತ್‌ ನಮನ: ಅಕಾಲಿಕವಾಗಿ ನಮ್ಮನ್ನು ಅಗಲಿದ ಕರ್ನಾಟಕ ರತ್ನ ಪುನೀತ್‌ ರಾಜ್‌ಕುರ್ಮಾ ಅವರಿಗೆ ಸಮರ್ಪಿತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಪಾರಂಪರಿಕ ನೃತ್ಯಗಳು: ಕರ್ನಾಟಕದ ಪಾರಂಪರಿಕ ನೃತ್ಯ ರೂಪಗಳು, ಯಕ್ಷಗಾನ, ಡೊಳ್ಳು ಕುಣಿತ ಮತ್ತು ವೀರಗಾಸೆ ಪ್ರದರ್ಶನ ಇರಲಿದೆ.

ನಾಟಕ ಮತ್ತು ರಂಗಭೂಮಿ: ಕರ್ನಾಟಕದ ಪ್ರಸಿದ್ಧ ರಂಗಭೂಮಿ ತಂಡಗಳಿಂದ ಕನ್ನಡ ನಾಟಕಗಳು ಪ್ರದರ್ಶನಗೊಳ್ಳಲಿವೆ.

ವಿಶೇಷ ಅತಿಥಿಗಳು:
ರಾಜಕೀಯ ಗಣ್ಯರು: ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು.
ಆಧ್ಯಾತ್ಮಿಕ ನಾಯಕರು: ಕರ್ನಾಟಕದ ಗೌರವಾನ್ವಿತ ಆಧ್ಯಾತ್ಮಿಕ ನಾಯಕರು.
ಚಲನಚಿತ್ರ ತಾರೆಗಳು: ಕನ್ನಡ ಚಲನಚಿತ್ರ ರಂಗದ ಪ್ರಮುಖ ತಾರೆಯರು, ಗಣ್ಯರು, ಪ್ರಮುಖರು ಭಾಗವಹಿಸುತ್ತಾರೆ.
ಸಾಹಿತ್ಯ ಕ್ಷೇತ್ರದ ಗಣ್ಯರು: ಪ್ರಸಿದ್ಧ ಸಾಹಿತಿಗಳು ಮತ್ತು ಕವಿಗಳು.
ಉದ್ಯಮಿಗಳು: ನಾಡಿನ ಯಶಸ್ವಿ ಉದ್ಯಮಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.

ವಿಶೇಷ ಆಕರ್ಷಣೆಗಳು:
ಕ್ರೀಡಾ ಚಟುವಟಿಕೆಗಳು: ಯುವಕ, ಯುವತಿಯರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತಂತ್ರಜ್ಞಾನ ವೇದಿಕೆ: ತಂತ್ರಜ್ಞಾನದಲ್ಲಿ ನಾವಿನ್ಯತೆಗಳು, ನವೀನ ತಂತ್ರಜ್ಞಾನ ಉತ್ಪನ್ನಗಳು ಮತ್ತು ಕನ್ನಡಿಗರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಚರ್ಚೆಗಳು ನಡೆಯಲಿವೆ.
ವರ್ಕ್‌ಶಾಪ್‌ಗಳು ಮತ್ತು ಪರಿಷತ್ತುಗಳು: ಆರೋಗ್ಯ ಮತ್ತು ಆಯುಷ್‌‍, ಶಿಕ್ಷಣ ಮತ್ತು ಕನ್ನಡಿಗರಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳ ಕುರಿತ ಸಂವಾದಗಳು.
ಕಲಾ ಪ್ರದರ್ಶನ: ಕನ್ನಡ ಕಲಾವಿದರ ಚಿತ್ರಗಳು, ಶಿಲ್ಪಿಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ.
ನೆಟ್‌ವರ್ಕಿಂಗ್‌‍ ಕಾರ್ಯಕ್ರಮಗಳು: ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಸಂಪರ್ಕಿಸಲು ನೆಟ್‌ ವರ್ಕಿಂಗ್‌ ಕಾರ್ಯಕ್ರಮಗಳ ಆಯೋಜನೆ.

ವಿಶೇಷ ಕಾರ್ಯಕ್ರಮ: ಕನ್ನಡ ಕಲಿಯೋಣ ಬನ್ನಿ
ಕನ್ನಡ ಕಲಿಯೋಣ ಬನ್ನಿ (ಬನ್ನಿ, ಕನ್ನಡ ಕಲಿಯೋಣ) ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಯೋಜನೆಯು ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಮತ್ತು ಕನ್ನಡ ಭಾಷೆಯ ಕಲಿಕೆಯಲ್ಲಿ ಆಸಕ್ತಿ ತೋರಿಸುವ ಎಲ್ಲರಿಗೂ ಕಲಿಸುವ ಉದ್ದೇಶವನ್ನು ಹೊಂದಿದೆ.
ಈ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ಸಂಘಟನೆಗಳು ಸೇರಿ ಅಮೆರಿಕದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಪರಿಗಣಿಸುವಂತೆ ಕೋರಲು ಪ್ರಯತ್ನ ನಡೆಸುವುದಾಗಿ ತಿಳಿಸಿವೆ. ಈ ಕಾರ್ಯಕ್ರಮವು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಅನುಕೂಲವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು: ಅಕ್ಕ ಅಧ್ಯಕ್ಷರಾದ ರವಿ ಬೋರೇಗೌಡ, ಕಾರ್ಯದರ್ಶಿ ಮಾದೇಶ ಬಸವರಾಜು, ಸಂಚಾಲಕರಾದ ಡಾ. ನವೀನ್‌ ಕೃಷ್ಣ, ಅಕ್ಕ ಭಾರತದ ಸಂಚಾಲಕರಾದ ತಿಮ್ಮಪ್ಪಗೌಡ ಮತ್ತು ಇತರ ಪದಾಧಿಕಾರಿಗಳು.

ಹೆಚ್ಚಿನ ಮಾಹಿತಿಗಾಗಿ:
ಸಿ.ಆರ್‌. ಮಂಜುನಾಥ್‌
ಮಾಧ್ಯಮ ಸಂಚಾಲಕರು, ಅಕ್ಕ
ಸಂಪರ್ಕ ಸಂಖ್ಯೆ: 9980765001

RELATED ARTICLES

Latest News