Thursday, September 19, 2024
Homeಮನರಂಜನೆಪೊಲೀಸರ ಪ್ರಶ್ನೆಗಳಿಗೆ ಕುಗ್ಗಿಹೋದ "ಜಗ್ಗು ದಾದಾ"

ಪೊಲೀಸರ ಪ್ರಶ್ನೆಗಳಿಗೆ ಕುಗ್ಗಿಹೋದ “ಜಗ್ಗು ದಾದಾ”

ಬೆಂಗಳೂರು,ಜೂ.14- ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ ಪೋಲೀಸರ ತೀವ್ರ ವಿಚಾರಣೆಯಿಂದ ಬಳಲಿ ಬೆಂಡಾಗಿದ್ದಾರೆ.ವಿಜಯನಗರ ಉಪ-ವಿಭಾಗದ ಪೊಲೀಸರು ಮೈಸೂರಿನ ಹೋಟೆಲ್‌ಗೆ ಹೋಗಿ ದರ್ಶನ್‌ನನ್ನು ವಶಕ್ಕೆ ತೆಗೆದುಕೊಂಡು ಬೆಂಗಳೂರಿಗೆ ಕರೆ ತಂದು ತೀವ್ರ ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಿದ್ದಾರೆ.

ತದನಂತರ ದರ್ಶನ್‌ ಸೇರಿದಂತೆ ಉಳಿದ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್‌‍ ವಶಕ್ಕೆ ನೀಡಿದ್ದು, ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಮೊದಲ ದಿನ ಇದ್ದ ಗತ್ತು ಇದೀಗ ಅವರಲ್ಲಿ ಉಳಿದುಕೊಂಡಿಲ್ಲ. ಪೊಲೀಸರ ನಿರಂತರ ವಿಚಾರಣೆಯಿಂದ ಸೊರಗಿ ಸುಣ್ಣವಾಗಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಬಗ್ಗೆ ಪೊಲೀಸರು ಪ್ರಶ್ನೆಗಳನ್ನು ಕೇಳಿದಾಗ ನನಗೇನು ಗೊತ್ತಿಲ್ಲವೆಂದೇ ಹೇಳುತ್ತಿದ್ದಾರೆ. ಹಾಗಾಗಿ ಉಳಿದ ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ದರ್ಶನ್‌ನನ್ನು ವಿಚಾರಣೆ ಮಾಡಲಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ಶೆಡ್‌ಗೆ ಸ್ಥಳ ಮಹಜರಿಗಾಗಿ ದರ್ಶನ್‌ನನ್ನು ಕರೆದೊಯ್ದಾಗಲೂ ಸಹ ಪೊಲೀಸರ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದಾರೆ.

ಈ ಘಟನೆ ಬಗ್ಗೆ ನನಗೇನು ಗೊತ್ತಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ಈ ನಡುವೆ ಅವರಿಗೆ ತಮ ನಟನೆಯ ಭವಿಷ್ಯದ ಬಗ್ಗೆ ತೀವ್ರ ಚಿಂತೆ ಕಾಡಿದೆ. ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವ ದರ್ಶನ್‌ ರಾತ್ರಿ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ನಿದ್ದೆಯಿಂದ 2-3 ಬಾರಿ ಎಚ್ಚರಗೊಳ್ಳುತ್ತಿದ್ದಾರೆ. ನನ್ನ ನಟನೆ ಭವಿಷ್ಯದ ಬಗ್ಗೆ ಮರುಗುತ್ತಿದ್ದಾರೆ.

ಒಟ್ಟಾರೆ ಈ ಪ್ರಕರಣದಿಂದ ದರ್ಶನ್‌ ಕುಗ್ಗಿ ಹೋಗಿರುವುದಂತೂ ಸತ್ಯ. ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಂಡರೆ ಒಂದಲ್ಲಾ ಒಂದು ದಿನ ಕಷ್ಟ ಅನುಭವಿಸಲೇಬೇಕಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

RELATED ARTICLES

Latest News