Saturday, July 27, 2024
Homeಅಂತಾರಾಷ್ಟ್ರೀಯಕೆಲಸದ ಆಮಿಷಕ್ಕೊಳಗಾಗಿ ಲಾವೋಸ್‌‍ನಲ್ಲಿ ಸಿಲುಕಿದ್ದ 13 ಭಾರತೀಯರ ರಕ್ಷಣೆ

ಕೆಲಸದ ಆಮಿಷಕ್ಕೊಳಗಾಗಿ ಲಾವೋಸ್‌‍ನಲ್ಲಿ ಸಿಲುಕಿದ್ದ 13 ಭಾರತೀಯರ ರಕ್ಷಣೆ

ಲಾವೋಸ್‌‍,ಮೇ.27- ಅಕ್ರಮ ಕೆಲಸಕ್ಕೆ ಆಮಿಷಕ್ಕೆ ಒಳಗಾಗಿದ್ದ 13 ಭಾರತೀಯರನ್ನು ಲಾವೋಸ್‌‍ನಲ್ಲಿ ರಕ್ಷಿಸಲಾಗಿದೆ.ರಕ್ಷಿತ ಭಾರತೀಯರನ್ನು ಅವರ ಮನೆಗೆ ಕಳುಹಿಸಲಾಗುತ್ತಿದೆ ಎಂದು ಆಗ್ನೇಯ ಏಷ್ಯಾದ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಕಳೆದ ತಿಂಗಳು, ಲಾವೋಸ್‌‍ನಲ್ಲಿ 17 ಭಾರತೀಯ ಕಾರ್ಮಿಕರನ್ನು ರಕ್ಷಿಸಿ ಭಾರತಕ್ಕೆ ವಾಪಸ್‌‍ ಕಳುಹಿಸಲಾಗಿತ್ತು. ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಪ್ರಮುಖ ಆದ್ಯತೆಯ ವಿಷಯವಾಗಿ ಖಾತ್ರಿಪಡಿಸುವ ನಮ ಮುಂದುವರಿದ ಕೆಲಸದಲ್ಲಿ, ರಾಯಭಾರ ಕಚೇರಿಯು 13 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಿ ಸ್ವದೇಶಕ್ಕೆ ಕಳುಹಿಸಿದೆ.

ಅಟ್ಟಾಪ್ಯೂ ಪ್ರಾಂತ್ಯದ ಮರದ ಕಾರ್ಖಾನೆಯಿಂದ 7 ಒಡಿಯಾ ಕೆಲಸಗಾರರು ಮತ್ತು 6 ಭಾರತೀಯ ಯುವಕರು ಗೋಲ್ಡನ್‌ ಟ್ರಯಾಂಗಲ್‌ನ ಬೊಕಿಯೊ ಲಾವೋಸ್‌‍ ಪ್ರಾಂತ್ಯದಲ್ಲಿ ಸಿಲುಕಿಕೊಂಡಿದ್ದರು ಎಂದು ಭಾರತೀಯ ರಾಯಭಾರ ಕಚೇರಿ ಎಕ್ಸ್ ನಲ್ಲಿ ಹೇಳಿದೆ.ಇದುವರೆಗೆ, ರಾಯಭಾರ ಕಚೇರಿಯು 428 ಭಾರತೀಯರನ್ನು ಲಾವೊ ಪಿಡಿಆರ್‌ನಿಂದ ರಕ್ಷಿಸಿದೆ. ಅವರ ಸಹಕಾರಕ್ಕಾಗಿ ನಾವು ಲಾವೊ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇವೆ ಎಂದು ಅದು ಹೇಳಿದೆ. ಲಾವೋಸ್‌‍ನಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಭಾರತೀಯ ಪ್ರಜೆಗಳು ನಕಲಿ ಅಥವಾ ಅಕ್ರಮ ಉದ್ಯೋಗಕ್ಕೆ ಆಮಿಷಕ್ಕೆ ಒಳಗಾಗದಂತೆ ಬಹಳ ಎಚ್ಚರಿಕೆಯಿಂದ ಇರುವಂತೆ ರಾಯಭಾರ ಕಚೇರಿ ಮನವಿ ಮಾಡಿದೆ.

ಲಾವೋಸ್‌‍/ಲಾವೊ ಪಿಡಿಆರ್‌ಗೆ ಬರುವ ಭಾರತೀಯ ಕಾರ್ಮಿಕರಿಗೆ, ಸೈಬರ್‌ ಹಗರಣಗಳು ಇತ್ಯಾದಿಗಳಿಗಾಗಿ ನಕಲಿ ಅಥವಾ ಕಾನೂನುಬಾಹಿರ ಉದ್ಯೋಗ ಆಫರ್‌ಗಳಿಗೆ ಮೋಸಹೋಗುವ ಮೂಲಕ ನಿಮ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಬೇಡಿ ಎಂದು ಅದು ಹೇಳಿದೆ. ಇತ್ತೀಚೆಗೆ ಭಾರತೀಯ ಪ್ರಜೆಗಳನ್ನು ಥಾಯ್ಲೆಂಡ್‌ ಮೂಲಕ ಉದ್ಯೋಗಕ್ಕಾಗಿ ಆಮಿಷವೊಡ್ಡುತ್ತಿರುವ ನಿದರ್ಶನಗಳು ನಮ ಗಮನಕ್ಕೆ ಬಂದಿವೆ ಎಂದು ಅದು ಹೇಳಿದೆ.

ಈ ನಕಲಿ ಉದ್ಯೋಗಗಳು ಲಾವೋಸ್‌‍ನ ಗೋಲ್ಡನ್‌ ಟ್ರಯಾಂಗಲ್‌ ವಿಶೇಷ ಆರ್ಥಿಕ ವಲಯದಲ್ಲಿ ಕಾಲ್‌‍-ಸೆಂಟರ್‌ ಹಗರಣಗಳು ಮತ್ತು ಕ್ರಿಪ್ರೋ-ಕರೆನ್ಸಿ ವಂಚನೆಯಲ್ಲಿ ತೊಡಗಿರುವ ಸಂಶಯಾಸ್ಪದ ಕಂಪನಿಗಳಿಂದ ಡಿಜಿಟಲ್‌ ಸೇಲ್ಸ್‌‍ ಮತ್ತು ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ಗಳು ಅಥವಾ ಗ್ರಾಹಕ ಬೆಂಬಲ ಸೇವೆಯಂತಹ ಪೋಸ್ಟ್‌ಗಳಿಗಾಗಿವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

RELATED ARTICLES

Latest News