Friday, April 4, 2025
Homeರಾಷ್ಟ್ರೀಯ | Nationalಉಜ್ಜಯಿನಿ ಮಹಾಕಾಲ್ ದೇವಸ್ಥಾನದಲ್ಲಿ ಆರತಿ ವೇಳೆ ಬೆಂಕಿ ತಗುಲಿ 13 ಮಂದಿ ಅರ್ಚಕರಿಗೆ ಗಾಯ

ಉಜ್ಜಯಿನಿ ಮಹಾಕಾಲ್ ದೇವಸ್ಥಾನದಲ್ಲಿ ಆರತಿ ವೇಳೆ ಬೆಂಕಿ ತಗುಲಿ 13 ಮಂದಿ ಅರ್ಚಕರಿಗೆ ಗಾಯ

ಉಜ್ಜಯಿನಿ, ಮಾ 25- ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಭಸ್ಮ ಆರತಿ ವೇಳೆ ಸಂಭವಿಸಿದ ಬೆಂಕಿಯಲ್ಲಿ 13 ಮಂದಿ ಅರ್ಚಕರು ಗಾಯಗೊಂಡಿದ್ದಾರೆ.

ದೇವಾಲಯದ ಗರ್ಭಗೃಹ ದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಜ್ಜಯಿನಿ ಕಲೆಕ್ಟರ್ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ. ಹದಿಮೂರು ಪುರೋಹಿತರಿಗೆ ಸುಟ್ಟ ಗಾಯಗಳಾಗಿದ್ದು, ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಂಗ್ ಸೇರಿಸಲಾಗಿದೆ.

ಹೋಳಿ ಹಬ್ಬದ ಅಂಗವಾಗಿ ಧಾರ್ಮಿಕ ಸಮಾರಂಭದ ನಡೆಯುತ್ತಿತ್ತು ಈ ಸಮಯದಲ್ಲಿ ಬಳಸುವ ಬಣ್ಣದ ಪುಡಿ ಎಸೆಯುವ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

RELATED ARTICLES

Latest News