Sunday, April 28, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-03-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-03-2024)

ನಿತ್ಯ ನೀತಿ : ಯಾರು ಬೇಕಾದರೂ ಎಷ್ಟೇ ಶ್ರೀಮಂತರಾಗಿ ಇರಬಹುದು. ಆದರೆ, ಜಗತ್ತಿನಲ್ಲಿರುವ ಯಾವ ವ್ಯಕ್ತಿಯೂ ಕಳೆದು ಹೋದ ದಿನವನ್ನು ಮರಳಿ ಪಡೆಯುವಷ್ಟು ಶ್ರೀಮಂತನಲ್ಲ.

ಪಂಚಾಂಗ : 25-03-2024, ಸೋಮವಾರ
ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ಹುಣ್ಣಿಮೆ / ನಕ್ಷತ್ರ: ಉತ್ತರಾ / ಯೋಗ: ವೃದ್ಧಿ / ಕರಣ: ಬಾಲವ

ಸೂರ್ಯೋದಯ : ಬೆ.06.20
ಸೂರ್ಯಾಸ್ತ : 06.31
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ :
ಮೇಷ
: ನಿಮ್ಮ ಮಾತೇ ಸರಿ ಎಂಬ ಹಠ ಬಿಟ್ಟು ವಿಶಾಲವಾಗ ಚಿಂತನೆ ಮಾಡುವುದು ಒಳಿತು.
ವೃಷಭ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಮಿಥುನ: ಕೆಟ್ಟ ಅಭ್ಯಾಸವೊಂದನ್ನು ಬಿಡದ ನಿಮಗೆ ಸಾರ್ವಜನಿಕರಿಂದ ಅವಮಾನವಾಗಲಿದೆ.

ಕಟಕ: ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ಸಿಂಹ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಯಾಗುವ ಸಾಧ್ಯತೆಗಳಿವೆ.
ಕನ್ಯಾ: ನೀವು ಕಂಡ ಕನಸು ಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.

ತುಲಾ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ. ಹಣಕಾಸಿನ ಸಂಸ್ಥೆಯವರಿಗೆ ಆಕ ಒತ್ತಡ.
ವೃಶ್ಚಿಕ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಧನುಸ್ಸು: ಹಿರಿಯರ ಆಶೀರ್ವಾದ ಸದಾ ಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗದಲ್ಲಿ ಲಾಭ ಸಿಗಲಿದೆ.

ಮಕರ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ಕುಂಭ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ಮೀನ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.

RELATED ARTICLES

Latest News