Monday, May 13, 2024
Homeಜಿಲ್ಲಾ ಸುದ್ದಿಗಳುರಾಯಚೂರಲ್ಲಿ ಬಿಸಿಲ ತಾಪಕ್ಕೆ ಇಬ್ಬರು ಮಕ್ಕಳ ಸಾವು

ರಾಯಚೂರಲ್ಲಿ ಬಿಸಿಲ ತಾಪಕ್ಕೆ ಇಬ್ಬರು ಮಕ್ಕಳ ಸಾವು

ರಾಯಚೂರು, ಏ.28- ಬಿಸಿಲ ತಾಪಕ್ಕೆ ಬಸವಳಿದು ನಿತ್ರಾಣಗೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ನಡೆದಿದೆ.ರಣಬಿಸಿಲಿನ ತಾಪದಿಂದ ಹೈರಾಣಾಗಿರುವ ಜನರು ಮನೆಯಿಂದ ಹೊರಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಸುಗೂರು ಗ್ರಾಮದಲ್ಲಿ ಹುಸೇನಮ್ಮ-ಮಾರುತಿ ದಂಪತಿಯ ಮಕ್ಕಳಾದ ಆರತಿ (9) ಮತ್ತು ಪ್ರಿಯಾಂಕಾ (7) ನಿತ್ರಾಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮತ್ತೊಬ್ಬ ಪುತ್ರ ಲಕ್ಕಪ್ಪ (5)ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ ಕೆಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಕೃಷ್ಣಾನದಿಯ ನೀರು ಕುಡಿಯುತ್ತಿದ್ದ ಈ ಕುಟುಂಬದವರು ಅನಾರೋಗ್ಯಕ್ಕೀಡಾಗಿದ್ದರು ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಆದರೆ, ಬೇಸಿಗೆಯ ಬೇಗೆಗೆ ಇಬ್ಬರು ಮಕ್ಕಳು ಮೃತಪಟ್ಟಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

RELATED ARTICLES

Latest News