Saturday, July 27, 2024
Homeಬೆಂಗಳೂರುಬೆಂಗಳೂರು : ಬಾತ್ ರೂಂನಲ್ಲಿ ಯುವತಿ ಅನುಮಾನಸ್ಪದ ಸಾವು

ಬೆಂಗಳೂರು : ಬಾತ್ ರೂಂನಲ್ಲಿ ಯುವತಿ ಅನುಮಾನಸ್ಪದ ಸಾವು

ಬೆಂಗಳೂರು, ಮೇ 16- ಮನೆಯೊಳಗೆ ಕೈ ಹಾಗೂ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತ ಪಟ್ಟಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೃಂದಾವನ ಲೇಔಟ್ ನಿವಾಸಿ ಪ್ರಭುದ್ಯಾ (21) ಸಾವನ್ನಪ್ಪಿರುವ ವಿದ್ಯಾರ್ಥಿನಿ.

ದ್ವಿತೀಯ ವರ್ಷದ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಭುದ್ಯಾ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊರಗೆ ಹೋಗಿದ್ದ ತಾಯಿ ಸೌಮ್ಯಾ ಅವರು ನಿನ್ನೆ ಸಂಜೆ ಮನೆಗೆ ವಾಪಾಸಾದಾಗ ಮಗಳು ಪ್ರಭುದ್ಯಾ ಸ್ನಾನದ ಮನೆಯಲ್ಲಿ ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಮನೆಯ ಹಿಂಬದಿ ಬಾಗಿಲು ತೆರೆದಿರುವುದು ಗಮನಿಸಿ ಯಾರೋ ಮನೆಯೊಳಗೆ ನುಗ್ಗಿ ಮಗಳನ್ನು ಕೊಲೆ ಮಾಡಿ ಆಕೆಯ ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆಂದು ತಾಯಿ ಸೌಮ್ಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ಮಗಳು ಆತಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ, ಆಕೆ ಯಾವಾಗಲೂ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದಳು. ಅದೇ ಅವಳಲಿಗೆ ಮುಳುವಾಯಿತು ಎಂದು ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿ ತಿಳಿದು ಸುಬ್ರಹಣ್ಯಪುರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯನ್ನೆಲ್ಲಾ ಪರಿಶೀಲಿಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಈ ವಿದ್ಯಾರ್ಥಿನಿಯ ಸಾವು ಆತಹತ್ಯೆಯೋ ಅಥವಾ ಕೊಲೆಯೋ ಎಂಬುವುದು ಗೊತ್ತಾಗಲಿದೆ.

RELATED ARTICLES

Latest News