Wednesday, September 11, 2024
Homeಅಂತಾರಾಷ್ಟ್ರೀಯ | Internationalನೇಪಾಳದಲ್ಲಿ ಬಸ್‌‍ ನದಿಗೆ ಉರುಳಿ ಕನಿಷ್ಠ 14 ಭಾರತೀಯರ ಸಾವು

ನೇಪಾಳದಲ್ಲಿ ಬಸ್‌‍ ನದಿಗೆ ಉರುಳಿ ಕನಿಷ್ಠ 14 ಭಾರತೀಯರ ಸಾವು

14 Indian tourists killed and several injured as bus plunges into river in Nepal

ಕಠ್ಮಂಡು,ಆ.23- ಪ್ರಯಾಣಿಕರ ಬಸ್‌‍ ನದಿಗೆ ಉರುಳಿದ ಪರಿಣಾಮ ಕನಿಷ್ಠ 14 ಭಾರತೀಯರು ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ನೇಪಾಳದ ಚಿತ್ವಾನ್‌ ಜಿಲ್ಲೆಯ ನಾರಾಯಣಘಾಟ್‌‍-ಮುಗ್ಲಿಂಗ್‌ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ-ನೋಂದಾಯಿತ ಬಸ್‌‍ ಪೋಖರಾದಿಂದ ರಾಜಧಾನಿ ಕಠ್ಮಂಡುಗೆ ತೆರಳುವಾಗ ತನಾಹುನ್‌ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಬಿದ್ದಿದೆ ಎಂದು ಅಧಿಕಾರಿಳು ತಿಳಿಸಿದ್ದಾರೆ.

17 ಜನರು ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಉತ್ತರ ಪ್ರದೇಶ ನಂಬರ್‌ ಪ್ಲೇಟ್‌ ಹೊಂದಿರುವ ಬಸ್‌‍ ನದಿಗೆ ಧುಮುಕಿದೆ ಮತ್ತು ನದಿಯ ದಡದಲ್ಲಿ ಬಿದ್ದಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಗೆ ತಿಳಿಸಿದ್ದಾರೆ.

ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.ಕಳೆದ ತಿಂಗಳು, ನೇಪಾಳದ ಚಿತ್ವಾನ್‌ ಜಿಲ್ಲೆಯಲ್ಲಿ ವಿನಾಶಕಾರಿ ಭೂಕುಸಿತವು ಎರಡು ಬಸ್ಸುಗಳು ತ್ರಿಶೂಲಿ ನದಿಗೆ ಮುಳುಗಿತು ಎಂದು ಹೇಳಿದರು.

RELATED ARTICLES

Latest News