ಶಿಮ್ಲಾ(ಹಿಮಾಚಲಪ್ರದೇಶ),ಫೆ.28- ಸ್ಪೀಕರ್ ಚೇಂಬರ್‍ನಲ್ಲಿ ಘೋಷಣೆ ಕೂಗಿದ ಆರೋಪದ ಮೇಲೆ ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಅಮಾನತುಗೊಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಗದ್ದಲ ಮುಂದುವರೆದಿದೆ, ಒಂದೆಡೆ ಕಾಂಗ್ರೆಸ್ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದ್ದರೆ ಇನ್ನೊಂದೆಡೆ ಸರ್ಕಾರವನ್ನು ಉಳಿಸಲು ವಿಧಾನಸಭೆಯಲ್ಲಿ ಹೊಸ ಆಟ ಶುರುವಾಗಿದೆ.
ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸೇರಿದಂತೆ 15 ಮಂದಿ ಬಿಜೆಪಿ ಶಾಸಕರನ್ನು ವಿಧಾನಸಭೆ ಸ್ಪೀಕರ್ ಅಧಿವೇಶನದಿಂದ ಅಮಾನತು ಮಾಡಿದ್ದಾರೆ. ಯಾವುದೇ ಮತದಾನ ಮಾಡುವುದಾದರೆ ಕೇವಲ 10 ಶಾಸಕರು ಮಾತ್ರ ಅಲ್ಲಿರುತ್ತಾರೆ. ಇದೇ ವೇಳೆ ಯಾವುದೇ ಅಡೆತಡೆಯಿಲ್ಲದೆ ಬಜೆಟ್ ಮಂಡನೆಯಾಗಲಿದ್ದು, ಅಧಿವೇಶನವನ್ನು ಅನಿರ್ದಿಷ್ಟಾವಗೆ ಮುಂದೂಡಲಾಗುತ್ತದೆ. ಜೈರಾಮ್ ಠಾಕೂರ್, ವಿಪಿನ್ ಸಿಂಗ್ ಪರ್ಮಾರ್, ರಣೀರ್ ಶರ್ಮಾ,ಲೋಕೇಂದ್ರ ಕುಮಾರ್, ವಿನೋದ್ ಕುಮಾರ್, ಹಂಸರಾಜ್, ಜನಕ್‍ರಾಜ್, ಬಲ್‍ಬೀರ್ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದ್ರ ಶೋರಿ, ದೀಪ್‍ರಾಜ್, ಪುರಣ್‍ಠಾಕೂರ್, ಇಂದರ್ ಸಿಂಗ್ ಗಾಂಧಿ ಮತ್ತು ದಿಲೀಪ್ ಠಾಕೂರ್ ಸೇರಿದಂತೆ ಬಿಜೆಪಿಯಿಂದ ಉಚ್ಛಾಟಿತ ಶಾಸಕರೂ ಇದ್ದಾರೆ.
ಪಾಕ್ ಪರ ಘೋಷಣೆ ಪ್ರಕರಣವನ್ನು NIAಗೆ ವಹಿಸಲು ಸುನಿಲ್‍ಕುಮಾರ್ ಒತ್ತಾಯ
ಸದನದಲ್ಲಿ ಗದ್ದಲ ಎಬ್ಬಿಸಿದಕ್ಕಾಗಿ ಹಾಗೂ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಆದರೆ ಇದು ಅನ್ಯಾಯದ ಕ್ರಮ ಎಂದು ಬಿಜೆಪಿ ಹೇಳುತ್ತಿದ್ದು, ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ. ಇಂದು ಬೆಳಗ್ಗೆಯೇ ಜೈ ರಾಮ್ ಠಾಕೂರ್ ನೇತೃತ್ವದ ಬಿಜೆಪಿ ನಾಯಕರು ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ಅವರನ್ನು ಭೇಟಿ ಮಾಡಿದ್ದಾರೆ.
ಸದನದಲ್ಲಿ ವಿಶ್ವಾಸಮತ ಪರೀಕ್ಷೆ ನಡೆದರೆ ಅಥವಾ ಬಜೆಟ್ ಮಂಡನೆಗೆ ಮತದಾನಕ್ಕೆ ಒತ್ತಾಯಿಸಿದರೆ ಕಾಂಗ್ರೆಸ್ ಸರ್ಕಾರ ಅಲ್ಪ ಮತಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.