Wednesday, May 1, 2024
Homeರಾಜ್ಯಪಾಕ್ ಪರ ಘೋಷಣೆ ಪ್ರಕರಣವನ್ನು NIAಗೆ ವಹಿಸಲು ಸುನಿಲ್‍ಕುಮಾರ್ ಒತ್ತಾಯ

ಪಾಕ್ ಪರ ಘೋಷಣೆ ಪ್ರಕರಣವನ್ನು NIAಗೆ ವಹಿಸಲು ಸುನಿಲ್‍ಕುಮಾರ್ ಒತ್ತಾಯ

ಬೆಂಗಳೂರು,ಫೆ.28- ರಾಜ್ಯಸಭೆ ಚುನಾವಣಾ ಫಲಿತಾಂಶದ ನಂತರ ನಡೆದ ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಬಿಜೆಪಿ ಶಾಸಕ ಸುನಿಲ್‍ಕುಮಾರ್ ವಿಧಾನಸಭೆಯಲ್ಲಿ ಒತ್ತಾಯಿಸಿದರು. ನಿನ್ನೆ ಸಂಜೆ ರಾಜ್ಯಸಭಾ ಚುನಾವಣೆ ಫಲಿತಾಂಶ ಬಂದ ನಂತರ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂದು ಅವರು ಆರೋಪಿಸಿದರು.

ಈ ಘಟನೆಯ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಹೊತ್ತು ಸ್ಪಷ್ಟನೆ ನೀಡಬೇಕು, ಅಲ್ಲಿವರೆಗೂ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು. ಘೋಷಣೆ ಕೂಗಿದವರು ಪಾಕ್ ಧ್ವಜ ಹಾರಿಸಲು ಹಿಂಜರಿಯುವುದಿಲ್ಲ ಎಂದು ಅವರು ಆರೋಪಿಸಿದರು.

ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಮನಸ್ಥಿತಿಯವರು ವಿಧಾನಸೌಧದ ಒಳಗೆ, ಹೊರಗೆ ಇದ್ದರೆ ಅದನ್ನು ದೊಡ್ಡ ಪ್ರಮಾಣದಲ್ಲಿ ಖಂಡಿಸಬೇಕು. ಸಂತೋಷದ ಸಂಭ್ರಮಾಚರಣೆಗೆ ಆಕ್ಷೇಪಣೆ ಇಲ್ಲ. ಘೋಷಣೆ ಕೂಗಿದ ವ್ಯಕ್ತಿಯ ಬಾಯಿಯನ್ನು ಮತ್ತೊಬ್ಬರು ಮುಚ್ಚುತ್ತಾರೆ. ಆ ರೀತಿ ಘೋಷಣೆ ಕೂಗದಿದ್ದರೆ ಬಾಯಿ ಮುಚ್ಚುವ ಅಗತ್ಯವಿರಲಿಲ್ಲ. ಕಾಂಗ್ರೆಸ್ ಪರವಾಗಿಯೋ ಅಥವಾ ವಿಜೇತ ಅಭ್ಯರ್ಥಿ ಪರವಾಗಿಯೋ ಘೋಷಣೆ ಕೂಗಿದರೆ ಆಕ್ಷೇಪವಿರಲಿಲ್ಲ. ಭಾರತ ವಿರೋಧಿ ಧೋರಣೆಯುಳ್ಳ ನಿತೀಶ್ ಕೌಲ್ ಎಂಬ ವ್ಯಕ್ತಿಯನ್ನು ಕರೆಸಿ ಭಾಷಣ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕುರಿತು ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?

ಆಗ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಆ ರೀತಿಯ ಅವಕಾಶ ಕೊಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಘೋಷಣೆ ಕೂಗಿದ ಗುಂಪನ್ನು ಹೊರಹೋಗಲು ಬಿಟ್ಟಿದ್ದಾರೆ. ಇದುವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಇದರ ಹಿಂದಿರುವ ಶಕ್ತಿ ಯಾವುದು ಎಂದು ಪ್ರಶ್ನಿಸಿದರು.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ತರಾತುರಿಯಲ್ಲಿ ಪಡೆಯಲಾಗುತ್ತಿದೆ. ಆದರೆ ಬೇರೆ ಘಟನೆಯಲ್ಲಿ ತಿಂಗಳಾನುಗಟ್ಟಲೆ ವರದಿ ಬರುವುದಿಲ್ಲ. ಕಳೆದ 9 ತಿಂಗಳಿನಲ್ಲಿ ಸರ್ಕಾರ ನಡೆದುಕೊಂಡ ಧೋರಣೆಯೇ ಇಂತಹ ಘಟನೆ ನಡೆಯಲು ಕಾರಣ ಎಂದು ಟೀಕಿಸಿದರು. ರಾಜ್ಯಪಾಲರ ಭಾಷಣದಲ್ಲಿ ಪತ್ರಿಕೆಗಳು ಬರೆದಿದ್ದ ಒಳ್ಳೆ ಸುದ್ದಿಯನ್ನು ಮುಖ್ಯಮಂತ್ರಿ ಸದನದಲ್ಲಿ ಉಲ್ಲೇಖಿಸಿದರು. ಆದರೆ ಈ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದವರನ್ನು ಬೆದರಿಸುವುದು ಎಷ್ಟು ಸರಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಚಾರವನ್ನು ವಾಚಿಸಿದರು.

ರಣರಂಗವಾದ ಪರಿಷತ್ : ಏಕವಚನದಲ್ಲೇ ವಾಗ್ದಾಳಿ

ಕೈ ಮುಗಿದು ಒಳಗೆ ಬಾ, ಧೈರ್ಯವಾಗಿ ಪ್ರಶ್ನಿಸಿ ಎಂದು ಹೇಳುವ ಸರ್ಕಾರ ವಾಸ್ತವ ವಿಚಾರವನ್ನು ಬೆಳಕಿಗೆ ತರುವ ಪತ್ರಕರ್ತರನ್ನು ಗದರಿಸುತ್ತದೆ. ಜಿನ್ನಾ ಮಾನಸಿಕ ಸರ್ಕಾರ ಇರುವುದರಿಂದ ಇಂತಹ ಘಟನೆ ನಡೆಯುತ್ತಿರುವುದರ ಹೊಣೆ ಸರ್ಕಾರವೇ ಹೆರಬೇಕು ಎಂದು ಒತ್ತಾಯಿಸಿದರು. ಶಾಸಕರ ಭವನದಿಂದ ವಿಧಾನಸೌಧಕ್ಕೆ ರಾಷ್ಟ್ರಧ್ವಜ ಹಿಡಿದು ನಾವು ಬಂದಿದ್ದೇವೆ. ಆದರೆ 2022 ರ ಫೆ.18 ರಂದು ಹಿಜಾಬ್ ಘಟನೆ ಚರ್ಚೆ ಮಾಡುವಾಗ ಕಾಂಗ್ರೆಸ್ ಶಾಸಕರು ಸದನದಲ್ಲಿ ರಾಷ್ಟ್ರಧ್ವಜ ಪ್ರದರ್ಶನ ಮಾಡಿದ್ದರು ಎಂದು ಹೇಳಿದ್ದರು.

RELATED ARTICLES

Latest News