Saturday, April 27, 2024
Homeಬೆಂಗಳೂರುನಾಳೆ ಬಿಬಿಎಂಪಿ ಬಜೆಟ್

ನಾಳೆ ಬಿಬಿಎಂಪಿ ಬಜೆಟ್

ಬೆಂಗಳೂರು,ಫೆ.28- ಸತತ ನಾಲ್ಕನೆ ಬಾರಿಗೆ ಅಧಿಕಾರಿಗಳೇ ಮಂಡಿಸುತ್ತಿರುವ ಬಿಬಿಎಂಪಿ ಬಜೆಟ್ ನಾಳೆ ಮಂಡನೆಯಾಗುತ್ತಿದೆ. ಕಳೆದ ಮೂರು ಬಾರಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಎರಡು ಬಾರಿ ಹಾಗೂ ಜಯರಾಂ ರಾಯ್‍ಪುರ ಅವರು ಒಂದು ಬಾರಿ ಬಜೆಟ್ ಮಂಡಿಸಿದ್ದರು ನಾಳೆ ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿ ನಿಯೋಜನೆಗೊಂಡಿರುವ ಶಿವಾನಂದ್ ಕಲಕೇರಿ ಅವರು ಬಜೆಟ್ ಮಂಡಿಸುತ್ತಿದ್ದಾರೆ.

ಬೆಂಗಳೂರು ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ಟೌನ್‍ಹಾಲ್‍ನಲ್ಲಿ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಈ ಬಾರಿ 12 ರಿಂದ 13 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಮಂಡನೆ ಆಗುವ ನಿರಿಕ್ಷೆ ಇದೆ. ಲೋಕಸಭೆಯ ಚುನಾವಣಾ ವೇಳಾ ಪಟ್ಟಿ ಮಾರ್ಚ್ ಮೊದಲ ವಾರ ಪ್ರಕಟವಾಗುವ ಸಾಧ್ಯತೆ ಇದೆ.

ಹೀಗಾಗಿ ಚುನಾವಣಾ ಸಂಹಿತೆ ಜಾರಿಯಾದರೆ ಬೇರೆಲ್ಲ ಸರ್ಕಾರಿ ಕೆಲಸಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಬಜೆಟ್ ಮಂಡನೆಗೆ ದಿಢೀರ್ ಮಹೂರ್ತ ಫಿಕ್ಸ್ ಮಾಡಲಾಗಿದೆ. ಕಳೆದ ಸಾಲಿನಲ್ಲಿ 2023-24ನೇ ಸಾಲಿನಲ್ಲಿ 11,158 ಕೋಟಿ ರೂ. ಆದಾಯ ಬರುವ ಅಂದಾಜು ಮಾಡಲಾಗಿತ್ತು. ಅದರಂತೆ 11,157 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಘೋಷಿಸಲಾಗಿತ್ತು.

ದೇಶದ್ರೋಹಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ

ಇದೀಗ ಪ್ರಸಕ್ತ ವರ್ಷ ಅತ್ಯಧಿಕ ಆದಾಯ ನಿರೀಕ್ಷೆ ಹಿನ್ನೆಲೆಯಲ್ಲಿ ಬಜೆಟ್ ಗಾತ್ರವನ್ನು 12 ಸಾವಿರ ಕೋಟಿಯಿಂದ 13 ಸಾವಿರ ಕೋಟಿ ರೂಪಾಯಿ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಸಿರು ಬೆಂಗಳೂರು, ರಸ್ತೆ ಅಭಿವೃದ್ಧಿಯಂತಹ ಕೆಲವು ಯೋಜನೆಗಳಿಗೆ ಅನುದಾನ ಘೋಷಣೆ ಆಗಲಿದೆ. ಮಳೆಗಾಲದಲ್ಲಿ ತೊಂದರೆ ಮಾಡುತ್ತಿರುವ ರಸ್ತೆ ಅಂಡರ್‍ಪಾಸ್ ಗಳ ಸುಧಾರಣೆಗೆ ಹಣ ಹಂಚಿಕೆ ನಿರೀಕ್ಷೆ ಮಾಡಲಾಗಿದೆ ಇದರ ಜೊತೆಗೆ ಸರ್ಕಾರದ ಮಹತ್ವಾಕಾಂಕ್ಷೆಯ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ 1500 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅಂದಾಜಿಸಲಾಗಿದೆ.

ಇದರ ಜೊತೆಗೆ ರಾಜ್ಯ ಬಜೆಟ್‍ನಲ್ಲಿ ಘೋಷಣೆಯಾಗಿರುವ ಆಕಾಶದೀಪ ಯೋಜನೆಗೂ ಬಿಬಿಎಂಪಿ ಬಜೆಟ್‍ನಲ್ಲಿ ಹಣ ತೆಗೆದಿಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರ ಈ ಬಾರಿ ಬಿಬಿಎಂಪಿಗೆ ಕೇವಲ 3 ಸಾವಿರ ಕೋಟಿ ಮಾತ್ರ ಅನುದಾನ ನೀಡಿದೆ ಇದರ ಜೊತೆಗೆ ಹೊಸ ಆಸ್ತಿ ತೆರಿಗೆ ಮಾದರಿಯಂತೆ 6 ಸಾವಿರ ಕೋಟಿ ತೆರಿಗೆ ನಿರೀಕ್ಷೆ ಮಾಡಲಾಗಿದ್ದು 9 ಸಾವಿರ ಕೊಟಿ ರೂ.ಗಳ ಅಂದಾಜಿನಲ್ಲಿ ಬಜೆಟ್ ಮಂಡನೆ ಮಾಡುವ ನಿರೀಕ್ಷೆ ಮಾಡಲಾಗಿತ್ತು.

ಮಾಧ್ಯಮಗಳು ಸರ್ಕಾರವನ್ನು ನೇಣಿಗೆ ಹಾಕಲು ಮುಂದಾಗಿವೆ : ಪ್ರಿಯಾಂಕ್ ಖರ್ಗೆ

ಆದರೆ, ಶೀಘ್ರದಲ್ಲೇ ಲೋಕಸಭಾ ಚುನಾವಣೆ ನಡೆಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡ ನಗರದ ನಾಗರೀಕರನ್ನು ಸೆಳೆಯುವ ಉದ್ದೇಶದಿಂದ 13 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡನೆ ಮಾಡಲು ತಯಾರಿ ನಡೆಸಲಾಗಿದೆ. ಕಳೆದ ಬಾರಿ ಜಯರಾಮ್ ರಾಯ್‍ಪುರ ಅವರು ಮಂಡಿಸಿದ್ದ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದ್ದ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿರಲಿಲ್ಲ. ಇದೀಗ ಮತ್ತೆ 13 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡನೆ ಯಾವ ಪುರುಷಾರ್ಥಕ್ಕೆ ಎಂದು ಜನ ಪ್ರಶ್ನಿಸುವಂತಾಗಿದೆ.

RELATED ARTICLES

Latest News