Tuesday, May 7, 2024
Homeರಾಜ್ಯಲೋಕಸಭಾ ಚುನಾವಣೆ ಬಂದೋಬಸ್ತ್‌ಗೆ 15 ಕಂಪನಿ ಕೇಂದ್ರ ಪಡೆ ಆಗಮನ

ಲೋಕಸಭಾ ಚುನಾವಣೆ ಬಂದೋಬಸ್ತ್‌ಗೆ 15 ಕಂಪನಿ ಕೇಂದ್ರ ಪಡೆ ಆಗಮನ

ಬೆಂಗಳೂರು, ಮಾ.22- ಲೋಕಸಭಾ ಚುನಾವಣೆಯ ಬಂದೋಬಸ್ತ್ಗಾಗಿ ರಾಜ್ಯಕ್ಕೆ ಈವರೆಗೆ 15 ಕಂಪನಿ ಕೇಂದ್ರ ಪಡೆಗಳು ಆಗಮಿಸಿವೆ. ಸಿಐಎಸ್ಎಫ್ನ 10 ಕಂಪನಿಗಳು ಮತ್ತು CRPF 5 ಕಂಪನಿ ಗಳು ಆಗಮಿಸಿದ್ದು, ಮತದಾನ ಸಮೀಪಿಸುತ್ತಿದ್ದಂತೆ ಇನ್ನಷ್ಟು ಕೇಂದ್ರ ಪಡೆಗಳು ರಾಜ್ಯಕ್ಕೆ ಬರಲಿವೆ.

ಈ ಕೇಂದ್ರ ಪಡೆಗಳನ್ನು ಮಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಪೊಲೀಸರ ಜೊತೆಗೆ ನಿಯೋಜಿಸಲಾಗಿದೆ. ಮತದಾನ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲು ಹಾಗೂ ಪ್ರಚಾರದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಭದ್ರತೆಗಾಗಿ ಈ ಕೇಂದ್ರ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.

ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಪಡೆಗಳು ಈಗಾಗಲೇ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸ್ಥಳೀಯ ಪೊಲೀಸರ ಜೊತೆಗೆ ಪಥಸಂಚಲನ ನಡೆಸಿವೆ.

RELATED ARTICLES

Latest News