Thursday, December 5, 2024
Homeರಾಜ್ಯರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್‌ ಕಾರ್ಡ್‌ ರದ್ದು : ಸಂತೋಷ್‌ ಲಾಡ್‌

ರಾಜ್ಯದಲ್ಲಿ ಶೇ.15ರಷ್ಟು ಬಿಪಿಎಲ್‌ ಕಾರ್ಡ್‌ ರದ್ದು : ಸಂತೋಷ್‌ ಲಾಡ್‌

15% of BPL cards will cancelled : Santosh Lad

ಬೆಂಗಳೂರು, ನ.20-ರಾಜ್ಯದಲ್ಲಿ ಶೇ.15ರಷ್ಟು ಅನರ್ಹ ಬಿಪಿಎಲ್‌ ಪಡಿತರ ಚೀಟಿ ರದ್ದಾಗಬಹುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.15ಕ್ಕಿಂತ ಹೆಚ್ಚು ಪಡಿತರ ಚೀಟಿಗಳು ರದ್ದಾಗುವುದಿಲ್ಲ. ಕೆಲವು ಕಡೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿರುವ ಆರೋಪಗಳು ಬರುತ್ತಿವೆ. ನಮ ಕಲಘಟಗಿಯಲ್ಲಿ 400 ಕಾರ್ಡ್‌ ರದ್ದಾಗಿವೆ ಎಂದರು.

ಪಡಿತರ ಚೀಟಿಗಳ ಪರಿಶೀಲನೆ ವೇಳೆ ಅರ್ಹರು ಇದ್ದರೆ, ಅಂಥವರ ಕಾರ್ಡ್‌ಗಳನ್ನು ವಾಪಸ್‌‍ ಕೊಡುತ್ತೇವೆ. ಕೆಲವರು ಕಾರ್ಡ್‌ ಬೇಡ ಎನ್ನುತ್ತಿದ್ದರು. ಒಂದು ವೇಳೆ ತಪ್ಪು ಮಾಹಿತಿಯಿಂದ ರದ್ದಾದರೆ ಅಂತಹವರಿಗೆ ಮರಳಿ ಕಾರ್ಡ್‌ ನೀಡಲಾಗುವುದು. ಅರ್ಹರು ಬಿಪಿಎಲ್‌ ಕಾರ್ಡ್‌ನಿಂದ ವಂಚಿತರಾಗಬಾರದು ಅನರ್ಹರು ಈ ಕಾರ್ಡ್‌ಗಳನ್ನ ಪಡೆಯಬಾರದು ಎಂಬುದು ಸರ್ಕಾರದ ಉದ್ದೇಶ. . ನಾವು ಎಲ್ಲಾ ಕಾರ್ಯಕ್ರಮಗಳಿಗೆ ದುಡ್ಡು ಕೊಟ್ಟಿದ್ದೇವೆ ಎಂದು ಅವರು ಹೇಳಿದರು.

ನಕಲಿ ಕಾರ್ಡ್‌ ರದ್ದು :
ಕಾರ್ಮಿಕರ ಕಾರ್ಡ್‌ಗಳನ್ನು ಆನ್‌ಲೈನ್‌ ಮೂಲಕ ನೀಡಲು ಅಂಬೇಡ್ಕರ್‌ ಸೇವಾ ಕೇಂದ್ರ ಮಾಡಿದ್ದೇವೆ. ಯಾರು ಅರ್ಜಿ ಹಾಕುತ್ತಾರೋ ಅವರ ಮನೆಗೆ ಹೋಗಿ ನೇರ ಪರಿಶೀಲನೆ ಮಾಡಿ ಕಾರ್ಡ್‌ ಕೊಡುತ್ತೇವೆ. ನಕಲಿ ಕಾರ್ಡ್‌ ಮಾತ್ರ ರದ್ದ ಮಾಡುತ್ತೇವೆ. ಅರ್ಹರನ್ನು ಗುರುತಿಸಿ ಕಾರ್ಡ್‌ ಕೊಡುತ್ತೇವೆ. ಸ್ಥಳೀಯ ಶಾಸಕರ ಮೂಲಕ ಸರ್ವೆ ಮಾಡಿಸಿ ಕಾರ್ಮಿಕರ ಕಾರ್ಡ್‌ ಮಾಡಲಿಸಿದ್ದೇವೆ ಎಂಬ ಮಾಹಿತಿ ನೀಡಿದರು.

ಸಿಎಂ, ಡಿಸಿಎಂ ತೀರ್ಮಾನ :
ಸಂಪುಟ ಪುನರ್‌ ರಚನೆಗೆ ಆಗ್ರಹಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವರಾಗಲು ಎಲ್ಲರಿಗೂ ಕೆಪಾಸಿಟಿ ಇದೆ. ಕಾಂಗ್ರೆಸ್‌‍ನಲ್ಲಿ 136 ಶಾಸಕರು ಇದ್ದಾರೆ. ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಈ ರೀತಿ ಅಭಿಪ್ರಾಯ ಶಾಸಕ ನರೇಂದ್ರಸ್ವಾಮಿ ಒಬ್ಬರದ್ದಲ್ಲ, ಬಹಳ ಜನರ ಅಭಿಪ್ರಾಯ ಇದೆ ಎಂದರು.

ಅನುದಾನದ ಬಗ್ಗೆ ಕಾಂಗ್ರೆಸ್‌‍ ಶಾಸಕ ಗವಿಯಪ್ಪ ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದನ್ನೇ ಮುಂದಿಟ್ಟು ಯಾಕೆ ಹೇಳಿದ್ದಾರೋ? ನೀವು ಗವಿಯಪ್ಪಣ್ಣನವರನ್ನೇ ಕೇಳಬೇಕು ಎಂದು ಹೇಳಿದರು.

ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಮಾಹಿತಿ ಸಿಗಲಿದೆ. ಅನುದಾನವನ್ನು ಸರ್ಕಾರ ನಿಲ್ಲಿಸಿಲ್ಲ. ಕೆಲವು ವಿಶೇಷ ಅನುದಾನ ಸಿಗದೇ ಇರಬಹುದು. ಶಾಸಕರ ಅನುದಾನಕ್ಕೆ ಕೊರತೆಯಾಗಿಲ್ಲ. ಬಿಜೆಪಿಯವರಿಗೆ ವಿಶೇಷ ಅನುದಾನ ಅವರ ಅವಧಿಯಲ್ಲೂ ಸಿಕ್ಕಿಲ್ಲ. ನಮಲ್ಲಿ ವಾಕ್‌ ಸ್ವಾತಂತ್ರ್ಯವಿದೆ. ಹಾಗಾಗಿ ನಮ ಶಾಸಕರು ಮಾತನಾಡುತ್ತಾರೆ. ಆದರೆ ಬಿಜೆಪಿ ಶಾಸಕರಿಗೆ ವಾಕ್‌ ಸ್ವಾತಂತ್ರ್ಯವಿಲ್ಲ ಎಂದು ಅವರು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಹೋಗಲ್ಲ. ಅವರಿಗೆ ಅಲ್ಲಿ ಏನೂ ಆಗಿಲ್ಲ ಅಂತಾನೇ ಇದೆ. ಮತ ಎಲ್ಲಿ ಸಿಗುತ್ತದೆಯೋ ಅಲ್ಲಿ ಮಾತನಾಡುತ್ತಾರೆ. ಮುಂದಿನ 10 ವರ್ಷ ಎಚ್ಚೆತ್ತುಕೊಳ್ಳದೆ ಹೋದರೆ ಕಷ್ಟ. ಈ ದೇಶ ಅದೋಗತಿಯತ್ತ ಸಾಗಲಿದೆ. ಮೋದಿ ಅವರು ಪ್ರಚಾರಕ್ಕಾಗಿ 6500 ಕೋಟಿ ರೂ. ಖರ್ಚು ಮಾಡಿದ್ದಾರೆ. ಖೇಲೋ ಇಂಡಿಯಾಗೆ ಹೆಚ್ಚಿನ ಹಣ ಕೊಡಲಿಲ್ಲ. 450 ಕೋಟಿ ರೂ. ಗುಜರಾತ್‌ಗೆ ಕೊಟ್ಟರು. ಖೇಲೋ ಇಂಡಿಯಾದಲ್ಲಿ ಒಂದು ಪದಕ ಬರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

RELATED ARTICLES

Latest News