Wednesday, September 11, 2024
Homeರಾಜ್ಯಕೆಎಸ್‌‍ಆರ್‌ಟಿಸಿಗೆ 16 ರಾಷ್ಟ್ರದ ಮಟ್ಟದ ಪ್ರಶಸ್ತಿಗಳ ಗರಿ

ಕೆಎಸ್‌‍ಆರ್‌ಟಿಸಿಗೆ 16 ರಾಷ್ಟ್ರದ ಮಟ್ಟದ ಪ್ರಶಸ್ತಿಗಳ ಗರಿ

16 Nation Level Award for KSRTC

ಬೆಂಗಳೂರು, ಆ.31– ದೇಶದಲ್ಲಿ ಉತ್ತಮ ಸಾರಿಗೆ ಸೇವೆಗೆ ಹೆಸರಾಗಿರುವ ಕೆಎಸ್‌‍ಆರ್‌ಟಿಸಿಗೆ ರಾಷ್ಟ್ರ ಮಟ್ಟದ ಎಂಟು ವೀಡಿಯಾ, ಐದು ಎಮ್ಕ್ಯೂಬ್‌, ಎರಡು ಸ್ಕೋಚ್‌ ಆರ್ಡರ್‌ ಆಫ್‌ ಮೆರಿಟ್‌ ಹಾಗೂ ಒಂದು ಸ್ಕೋಚ್‌ ಪ್ರಶಸ್ತಿಗಳು ಲಭಿಸಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನ ತಂತ್ರಜ್ಞಾನ ಉತ್ತಮ ಸೇವೆ ನೀಡುತ್ತಾ ದೇಶದೆಲ್ಲೆಡೆ ಮನೆ ಮಾತಾಗಿದ್ದು, ಒಂದಿಲ್ಲೊಂದು ಸಾಧನೆಯ ಮೂಲಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಲೇ ಬರುತ್ತಿದೆ. ಅದರಂತೆ ಇದೀಗ ರಾಷ್ಟ್ರಮಟ್ಟದ 16 ಪ್ರಶಸ್ತಿಗಳು ಲಭಿಸಿರುವುದು ಹೆಮೆಯ ವಿಷಯ.

ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರಾಡಕ್ಟ್‌ ಪ್ಲೇಸೆಂಟ್‌ನಲ್ಲಿ ಅತ್ಯುತ್ತಮ ವೀಡಿಯೋ ಕಂಟೆಂಟ್‌ ಪ್ರಶಸ್ತಿ.ಅಶ್ವಮೇಧ ಬ್ರಾಂಡಿಂಗ್‌ಗಾಗಿ ಕಡಿಮೆ ಬಜೆಟ್‌ ಮಾರ್ಕೆಂಟಿಂಗ್‌. ಕ್ಯಾಂಪೇನ್‌(ಆಫ್ಲೈನ್‌) ನಲ್ಲಿ ಅತ್ಯುತ್ತಮ ವೀಡಿಯೋ ಕಂಟೆಂಟ್.

ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.
ಅಶ್ವಮೇಧ ಬ್ರಾಂಡಿಂಗ್‌ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.

ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್‌ ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.ಅಂಬಾರಿ ಉತ್ಸವದ ಬ್ರಾಂಡಿಂಗ್‌ಗಾಗಿ ಇನ್ಸ್ಟಾಗ್ರಾಮ್‌ ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

ಅಶ್ವಮೇಧ ಬ್ರಾಂಡಿಂಗ್‌ಗಾಗಿ ಮೊಬೈಲ್‌ ಮಾರ್ಕೆಂಟಿಂಗ್‌ ಕ್ಯಾಂಪೇನ್‌- ಒಟ್ಟಾರೆ ಅತ್ಯುತ್ತಮ ವೀಡಿಯೊ ಕಂಟೆಂಟ್.ಶ್ರೇಷ್ಠ ವೀಡಿಯೊ ಕಂಟೆಂಟ್‌ ಬ್ರಾಂಡ್ಸ್ ಎಂಟರ್‌ಪ್ರೈಸಸ್‌‍- ಕೆಎಸ್‌‍ಆರ್‌ಟಿಸಿ ಲಭಿಸಿವೆ.

ಎಮ್ಕ್ಯೂಬ್‌ ಪ್ರಶಸ್ತಿಗಳು:
ಬ್ರಾಂಡಿಂಗ್‌ಗಾಗಿ ಶ್ರೇಷ್ಠ ಪಿಆರ್‌ ಕ್ಯಾಂಪೇನ್.
ಬ್ರಾಂಡಿಂಗ್‌ಗಾಗಿ ಕಡಿಮೆ ಬಜೆಟ್‌ ಮಾರ್ಕೆಂಟಿಂಗ್‌ ಕ್ಯಾಂಪೇನ್‌ (ಆಫ್ಲೈನ್).
ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್‌ ಕ್ಯಾಂಪೇನ್.
ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರಾಂಡ್‌ ಕಂಟೆಂಟ್.
ಬ್ರಾಂಡಿಂಗ್‌ಗಾಗಿ ಶ್ರೇಷ್ಠ ಆನ್‌ಲೈನ್‌ ಪಿಆರ್‌ ಕ್ಯಾಂಪೇನ್‌ ಪ್ರಶಸ್ತಿಗಳು ದೊರೆತಿವೆ.

ನಿಗಮವು ಸಾರಿಗೆ ಸಂಜೀವಿನಿ- ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮಗಳಿಗಾಗಿ 2 ಸ್ಕೋಚ್‌ ಆರ್ಡರ್‌ ಆಫ್‌ ಮೆರಿಟ್‌ ಪ್ರಶಸ್ತಿಗಳು ಮತ್ತು ಒಂದು ಸ್ಕೋಚ್‌ ಪ್ರಶಸ್ತಿಯನ್ನು ಪಡೆದಿದೆ. ವೀಡಿಯೊ ಪ್ರಶಸ್ತಿ ಮತ್ತು ಎಮ್ಕ್ಯೂಬ್‌ ಪ್ರಶಸ್ತಿಗಳನ್ನು ಗುರುಗಾಂವ್‌ನಲ್ಲಿ ಪ್ರಧಾನ ಮಾಡಲಾಯಿತು. ಸ್ಕೋಚ್‌ ಆರ್ಡರ್‌ ಆಫ್‌ ಮೆರಿಟ್‌ ಪ್ರಶಸ್ತಿಗಳನ್ನು ಆನ್‌ಲೈನ್‌ನಲ್ಲಿ ನೀಡಲಾಯಿತು. ಇನ್ನು ಸ್ಕೋಚ್‌ ಪ್ರಶಸ್ತಿ ಸಮಾರಂಭವು ಸೆ. 21ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

RELATED ARTICLES

Latest News