Monday, November 11, 2024
Homeರಾಷ್ಟ್ರೀಯ | National2 ತಿಂಗಳಲ್ಲಿ 300 ಕೋಟಿ ಮೌಲ್ಯದ ಮಾದಕವಸ್ತು ವಶ

2 ತಿಂಗಳಲ್ಲಿ 300 ಕೋಟಿ ಮೌಲ್ಯದ ಮಾದಕವಸ್ತು ವಶ

ಮುಂಬೈ,ಅ.28- ಎರಡು ತಿಂಗಳ ಕಾರ್ಯಾಚರಣೆಯಲ್ಲಿ 300 ಕೋಟಿ ಮೌಲ್ಯದ ಮೆಫೆಡ್ರೋನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಮುಂಬೈ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಿಷೇಧಿತ ವಸ್ತುವನ್ನು ತಯಾರಿಸಲು ಮತ್ತು ಕಾರ್ಖಾನೆಯನ್ನು ಸ್ಥಾಪಿಸಲು ಮಾನವಶಕ್ತಿಯನ್ನು ಒದಗಿಸಲು ಮುಂದಾಗಿದ್ದ ವ್ಯಕ್ತಿಯ ಬಂಧನವೂ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ಬಂಧನಗಳೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 18 ಜನರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಉತ್ತರಾಖಂಡದ ಡೆಹ್ರಾಡೂನ್‍ನಲ್ಲಿ ಹರಿಶ್ಚಂದ್ರ ಪಂತ್ ಅವರನ್ನು ಸಾಕಿ ನಾಕಾ ಪೊಲೀಸರ ತಂಡ ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪಂತ್ ಅಲ್ಲದೆ, ಪೊಲೀಸರು ಮಹಾನಗರದ ಕುರ್ಲಾದಿಂದ 30 ವರ್ಷದ ಅಮೀರ್ ಅತೀಕ್ ಖಾನ್ ಅವರನ್ನು ಸಹ ಬಂಧಿಸಿದ್ದಾರೆ. ಅವರು ಮುಂಬೈನಲ್ಲಿ ಮಾರಾಟ ಮಾಡಲು ದೊಡ್ಡ ಪ್ರಮಾಣದ ಮೆಫೆಡ್ರೋನ್ ಅನ್ನು ಖರೀದಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ವಂಚನೆ

ಪಂತ್ ಅವರು ಮೆಫೆಡ್ರೋನ್ ಅನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಸೂತ್ರವನ್ನು ಒದಗಿಸಿದ್ದಾರೆ ಮತ್ತು ಇತರ ಆರೋಪಿಗಳಾದ ಲಲಿತ್ ಪಾಟೀಲ್ ಮತ್ತು ಅವರ ಸಹೋದರ ಭೂಷಣ್ ಪಾಟೀಲ್ ಕಾರ್ಖಾನೆಯನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.

ಇತರ ಆರೋಪಿಗಳೊಂದಿಗೆ ಪಂತ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 30 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಎರಡು ತಿಂಗಳ ಅವಯ ಕಾರ್ಯಾಚರಣೆಯಲ್ಲಿ, ಪೊಲೀಸರು 300 ಕೋಟಿ ಮೌಲ್ಯದ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡರು, ವಿವಿಧ ನಗರಗಳಿಂದ ವಿವಿಧ ಜನರನ್ನು ಬಂಧಿಸಿದರು ಮತ್ತು ಅಕ್ಟೋಬರ್ 5 ರಂದು ನಾಸಿಕ್ ಜಿಲ್ಲೆಯ ಶಿಂಡೇಗಾಂವ್ ಕೈಗಾರಿಕಾ ಪ್ರದೇಶದಲ್ಲಿನ ಮಾದಕವಸ್ತು ತಯಾರಿಕಾ ಘಟಕವನ್ನು ಭೇದಿಸಿದರು.

ಆರೋಪಿಗಳು ಕೀಟನಾಶಕ ಕಾರ್ಖಾನೆ ಸ್ಥಾಪಿಸುವುದಾಗಿ ಮಾಲೀಕರಿಗೆ ಮಾಹಿತಿ ನೀಡಿ ಬೇರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಬಾಡಿಗೆಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ, ಪ್ರಕರಣದಲ್ಲಿ 325 ಕೋಟಿ ಮೌಲ್ಯದ 163.8 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News