Wednesday, December 4, 2024
Homeರಾಷ್ಟ್ರೀಯ | Nationalಇಬ್ಬರು ಉಗ್ರರನ್ನು ಹೊಸಕಿಹಾಕಿದ ಸೇನೆ

ಇಬ್ಬರು ಉಗ್ರರನ್ನು ಹೊಸಕಿಹಾಕಿದ ಸೇನೆ

ಶ್ರೀನಗರ,ಅ.23- ಕಣಿವೆ ರಾಜ್ಯದ ಉರಿ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಭೂ ಪ್ರದೇಶ ಒಳಗೆ ನುಸುಳುತ್ತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ. ಭಾರೀ ಶಸ್ತ್ರಾಸ್ತ್ರ ಸಜ್ಜಿತ ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಬಹುದು ಎಂದು ಗುಪ್ತಚರ ಮಾಗಿತಿ ಹಿನ್ನಲೆಯಲ್ಲಿ ಸೇನೆ ಕಟ್ಟೆಚ್ಚರ ವಹಿಸಿದೆ.

ಮಳೆ ಹಾಗು ಹಿಮಪಾತದ ಲಾಭ ಪಡೆದು ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ಮಧ್ಯರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಪ್ರಯತ್ನಪಟ್ಟರು ಈ ವೇಳೆ ನಮ್ಮ ಯೋಧರು ಗುಂಡು ಹಾರಿಸಿ ಹಿಮ್ಮೆಟ್ಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವದವರೆಗೂ ದುಂಡಿನ ಚಕಮಕಿ ನಡುವೆ ಇಬ್ಬರು ಉಗ್ರರನ್ನು ಹತರಾಗಿದ್ದಾರೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಲು ಕೇರಳ ಘಟಕ ತೀರ್ಮಾನ

ನಿಯಂತ್ರಣ ರೇಖೆಯ ಬಳಿಯೇ ಮತ್ತೊಂದು ಪ್ರಕರಣದಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದು ಈ ವೇಳೆ ಜೊತೆಗಿದ್ದವರು ಆತನ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯದ ವೇಳೆ 2 ಎಕೆ 47 ರೈಫಲ್‍ಗಳು, 6 ಪಿಸ್ತೂಲ್‍ಗಳು, 4 ಚೈನ ನಿರ್ಮಿತ ಹ್ಯಾಂಡ್ ಗ್ರೆನೇಡ್‍ಗಳು, ಬ್ಯಾಗಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Latest News