Monday, March 31, 2025
Homeರಾಷ್ಟ್ರೀಯ | Nationalಉಗ್ರರು ಅಪಹರಿಸಿದ್ದ ಯುವಕರ ರಕ್ಷಣೆ

ಉಗ್ರರು ಅಪಹರಿಸಿದ್ದ ಯುವಕರ ರಕ್ಷಣೆ

ಕೊಹಿಮಾ, ಡಿ 18 (ಪಿಟಿಐ) ಮ್ಯಾನ್ಮಾರ್ ಮೂಲದ ಎನ್‍ಎಸ್‍ಸಿಎನ್-ಕೆ (ಅಂಗ್ ಮಾಯï) ಉಗ್ರಗಾಮಿಗಳಿಂದ ಅಪಹರಿಸಿದ್ದ ಇಬ್ಬರು ಯುವಕರನ್ನು ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯ ಅರಣ್ಯದಿಂದ ಗುಂಡಿನ ಚಕಮಕಿಯ ನಂತರ ರಕ್ಷಿಸಲಾಗಿದೆ ಎಂದು ರಕ್ಷಣಾ ಹೇಳಿಕೆ ತಿಳಿಸಿದೆ.

ಜಿಲ್ಲೆಯ ಯನ್ಯು ಗ್ರಾಮದಿಂದ ಉಗ್ರಗಾಮಿ ಸಂಘಟನೆಯ ಶಸ್ತ್ರಸಜ್ಜಿತ ಕಾರ್ಯಕರ್ತರ ಗುಂಪು ಇಬ್ಬರು ಯುವಕರನ್ನು ಅಪಹರಿಸಿತ್ತು. ಘಟನೆ ವರದಿಯಾದ ನಂತರ ಅಸ್ಸಾಂ ರೈಫಲ್ಸ ಮತ್ತು ನಾಗಾಲ್ಯಾಂಡ್ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

ಪ್ಯಾಂಟ್‍ನಲ್ಲಿ ಚಿನ್ನ ಕಳ್ಳ ಸಾಗಣೆ, ಸಿಕ್ಕಿಬಿದ್ದ ಪ್ರಯಾಣಿಕ

ಹುಡುಕಾಟದ ಸಮಯದಲ್ಲಿ ವೆಟ್ಟಿಂಗ್ ಗ್ರಾಮದ ಬಳಿಯ ಕಾಡಿನಲ್ಲಿ ಉಗ್ರರನ್ನು ತಡೆದಾಗ ನಡೆದ ಗುಂಡಿನ ಚಕಮಕಿಯ ನಂತರ ಅವರು ಯುವಕರನ್ನು ಬಿಟ್ಟು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಎಕೆ-16 ರೈಫಲ್ ಮತ್ತು ಮೂರು ಪಿಸ್ತೂಲ್‍ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ಬಿಟ್ಟು ಹೋಗಿz್ದದ್ದಾರೆ ಎಂದು ಹೇಳಿಕೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ನಾಗರಿಕ ಮಾರ್ಗದರ್ಶಕನನ್ನು ಸಹ ಬಂಧಿಸಲಾಗಿದೆ ಎಂದು ಅದು ಹೇಳಿದೆ.

RELATED ARTICLES

Latest News