Tuesday, September 17, 2024
Homeರಾಜ್ಯಪ್ಯಾಂಟ್‍ನಲ್ಲಿ ಚಿನ್ನ ಕಳ್ಳ ಸಾಗಣೆ, ಸಿಕ್ಕಿಬಿದ್ದ ಪ್ರಯಾಣಿಕ

ಪ್ಯಾಂಟ್‍ನಲ್ಲಿ ಚಿನ್ನ ಕಳ್ಳ ಸಾಗಣೆ, ಸಿಕ್ಕಿಬಿದ್ದ ಪ್ರಯಾಣಿಕ

ಮಂಗಳೂರು, ಡಿ.17- ಇಲ್ಲಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಇಲ್ಲಿಗೆ ಬಂದ ಪ್ರಯಾಣಿಕರೊಬ್ಬ ಪ್ಯಾಂಟ್‍ನಲ್ಲಿ ಅಡಗಿಸಿಕೊಂಡು ತಂದಿದ್ದ 17.73 ಲಕ್ಷ ಮೌಲ್ಯದ 286 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇಂಡಿಗೋ ವಿಮಾನ 6ಇ1163 ಮೂಲಕ ಬಂದ ಪ್ರಯಾಣಿಕನ ಚಲನವಲನ ಅನುಮಾನ ಮೂಡಿಸಿತು ಮೊದಲು ಆತನನ್ನು ಪರೀಕ್ಷಿಸಿದಾಗ ಏನು ತಿಳಿಯಲ್ಲಿಲ್ಲ ನಂತರ ಪ್ಯಾಂಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮತ್ತು ಸ್ಕ್ಯಾನಿಂಗ್ ಮಾಡಿದ ನಂತರ, ಕಪ್ಪು ಚಿತ್ರ ಅನುಮಾನವನ್ನು ಹುಟ್ಟುಹಾಕಿತು. ನಂತರದ ಸಂಪೂರ್ಣ ಪರೀಕ್ಷೆಯು ಪ್ಯಾಂಟ್‍ನ ಪದರಗಳಲ್ಲಿ ಮರೆಮಾಚಲ್ಪಟ್ಟ ಹಳದಿ ಬಣ್ಣದ ಪೇಸ್ಟ್ ವಸ್ತು ಕಂಡುಬಂತು.

ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರಿಗೆ ಡ್ರಗ್ಸ್ ಪೆಡ್ಲರ್‌ಗಳ ಜೊತೆ ನಂಟು

ನಂತರ ಚಿನ್ನ ಕಳ್ಳಸಾಗಣೆ ಅಸಲಿಯತ್ತು ಗೊತ್ತಾಯಿತು ಆತನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.ಪ್ರಯಾಣಿಕರ ಡೇಟಾ ಪರಿಶೀಲನೆ ವೇಳೆ ಈತನ ಬಗ್ಗೆ ಅನುಮಾನ ಮೂಡಿತ್ತು ಆತ ದುಬೈನಿಂದ ಬಂದ ಬಳಿಕ ಗುಮಾನಿ ಮೇಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಚಿನ್ನ ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.

RELATED ARTICLES

Latest News