Saturday, July 13, 2024
Homeರಾಜ್ಯಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರಿಗೆ ಡ್ರಗ್ಸ್ ಪೆಡ್ಲರ್‌ಗಳ ಜೊತೆ ನಂಟು

ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರಿಗೆ ಡ್ರಗ್ಸ್ ಪೆಡ್ಲರ್‌ಗಳ ಜೊತೆ ನಂಟು

ಬೆಂಗಳೂರು,ಡಿ.17- ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರಿಗೆ ಡ್ರಗ್ಸ್ ಪೆಡ್ಲರ್‍ಗಳ ಜೊತೆ ನಂಟಿರುವ ಬಗ್ಗೆ ಸಿಸಿಬಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ ವಾರ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಲಿಯೋನಾರ್ಡ್ ಎಂಬಾತನನ್ನು ಬಂಧಿಸಿ 21 ಕೋಟಿ ರೂ. ಮೌಲ್ಯದ ಡ್ರಗ್ಸ್‍ನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ, ಸ್ಪೋಟ ಮಾಹಿತಿ ಹೊರಬಿದ್ದಿದ್ದು, ಪೆಡ್ಲರ್ ಜೊತೆ ಕನ್ನಡದ ನಟ-ನಟಿ ಹಾಗೂ ಕಿರುತೆರೆ ಕಲಾವಿದರ ಸಂಪರ್ಕ ಇರುವ ಬಗ್ಗೆ ತಿಳಿದುಬಂದಿದೆ.

ಕಳೆದ ಮೂರು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣವೊಂದರಲ್ಲಿ ಕನ್ನಡದ ಖ್ಯಾತ ನಟಿ ಸೇರಿದಂತೆ ಹಲವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಮತ್ತೆ ನಗರ ಪೊಲೀಸರು ಸ್ಯಾಂಡಲ್‍ವುಡ್ ತಾರೆಯರ ಮೇಲೆ ಕಣ್ಣಿಟ್ಟಿದ್ದಾರೆ. ಆರೋಪಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಿರುವ ಸಿಸಿಬಿ ಪೆಪೊಲೀಸರು, ಯಾರೆಲ್ಲ ಜೊತೆ ವ್ಯವಹಾರ ನಡೆಸಿದ್ದಾರೆ, ಅವರಿಗೆಲ್ಲ ಯಾವ ರೀತಿ ಡ್ರಗ್ಸ್ ಸರಬರಾಜು ಆಗುತ್ತಿತ್ತು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಮಲಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ : ಪ್ರಾಂಶುಪಾಲೆ, ವಾರ್ಡನ್, ಡಿ ಗ್ರೂಪ್ ನೌಕರರ ಅಮಾನತು

ಪೊಲೀಸರ ಹದ್ದಿನ ಕಣ್ಣು: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಈ ವೇಳೆ ಡ್ರಗ್ಸ್ ಸೇವನೆ ಮತ್ತು ಮಾರಾಟದ ಮೇಲೆ ನಿಗಾ ಇಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿದೇಶಿ ಪ್ರಜೆಗಳು ಹೆಚ್ಚು ವಾಸಿಸುತ್ತಿರುವ ಸ್ಥಳಗಳಲ್ಲಿ ಮುಫ್ತಿ ಕಾರ್ಯಾಚರಣೆ, ರೆಸಾರ್ಟ್, ರೇವಾ ಪಾರ್ಟಿ ನಡೆಯುವಂತಹ ಸ್ಥಳಗಳು, ಫಾರ್ಮ್‍ಹೌಸ್, ಸ್ಟಾರ್ ಹೋಟೆಲ್, ಪಬ್,ಬಾರ್‍ಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.

RELATED ARTICLES

Latest News