Thursday, December 5, 2024
Homeರಾಷ್ಟ್ರೀಯ | National200 ಮೀಟರ್‌ ಕಂದಕಕ್ಕೆ ಉರಳಿದ ಬಸ್ : 20 ಕ್ಕೂ ಹೆಚ್ಚು ಮಂದಿ ಸಾವು

200 ಮೀಟರ್‌ ಕಂದಕಕ್ಕೆ ಉರಳಿದ ಬಸ್ : 20 ಕ್ಕೂ ಹೆಚ್ಚು ಮಂದಿ ಸಾವು

ಡೆಹ್ರಾಡೂನ್‌‍, ನ.4 (ಪಿಟಿಐ) ಉತ್ತರಾಖಂಡದ ಅಲೋರಾ ಜಿಲ್ಲೆಯಲ್ಲಿ ಬಸ್ಸೊಂದು ಆಳವಾದ ಕಂದರಕ್ಕೆ ಬಿದ್ದ ಪರಿಣಾಮ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‌‍ ಗರ್ವಾಲ್‌ನಿಂದ ಕುಮಾನ್‌ಗೆ ಹೋಗುತ್ತಿದ್ದಾಗ ಅಲೋರಾದ ಮಾರ್ಚುಲಾದಲ್ಲಿ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ವ್ಯಾಜಿಸ್ಟ್ರೇಟ್‌ ಅಲೋಕ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ. ಇಲ್ಲಿಯವರೆಗೆ ಏಳು ಸಾವುಗಳು ವರದಿಯಾಗಿವೆ ಎಂದು ಅವರು ಹೇಳಿದರು.

ಬಸ್ಸು 200 ಮೀಟರ್‌ ಆಳದ ಕಮರಿಗೆ ಬಿದ್ದಾಗ ಅದರಲ್ಲಿ ಸುಮಾರು 40 ಪ್ರಯಾಣಿಕರಿದ್ದ ಕಾರಣ ಸಾವುನೋವುಗಳು ಹೆಚ್ಚಾಗಬಹುದು ಎಂದು ಪಾಂಡೆ ಹೇಳಿದರು. ಪೊಲೀಸರು ಮತ್ತು ಎಸ್‌‍ಡಿಆರ್‌ಎಫ್‌ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅಪಘಾತದಲ್ಲಿ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲೋರಾ ಜಿಲ್ಲೆಯ ಮರ್ಚುಲಾದಲ್ಲಿ ಸಂಭವಿಸಿದ ದುರದಷ್ಟಕರ ಬಸ್‌‍ ಅಪಘಾತದಲ್ಲಿ ಪ್ರಯಾಣಿಕರ ಸಾವು ನೋವಿನ ಸುದ್ದಿಯನ್ನು ಸ್ವೀಕರಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಎಕ್‌್ಸನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಆಡಳಿತ ಮತ್ತು ಎಸ್‌‍ಡಿಆರ್‌ಎಫ್‌ ತಂಡಗಳು ಗಾಯಾಳುಗಳನ್ನು ಸ್ಥಳಾಂತರಿಸಲು ಮತ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಅಗತ್ಯವಿದ್ದಲ್ಲಿ ಏರ್‌ಲಿಫ್ಟ್‌‍ ಮಾಡಲು ಸಹ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News