Thursday, December 5, 2024
Homeರಾಜ್ಯಸೂಕ್ತ ದಾಖಲೆಗಳನ್ನು ಪರಿಶೀಲಿಸದೆ 22 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು : ಜೆಡಿಎಸ್‌‍ ಆಕ್ರೋಶ

ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ 22 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು : ಜೆಡಿಎಸ್‌‍ ಆಕ್ರೋಶ

22 lakh BPL cards cancelled without checking proper documents: JDS outrage

ಬೆಂಗಳೂರು, ನ.21-ಯಾವುದೇ ರೀತಿಯ ಸೂಕ್ತ ದಾಖಲೆಗಳ ಪರಿಶೀಲನೆ ಮಾಡದೇ ಏಕಾಏಕಿ 22 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿರುವುದು ಕಾಂಗ್ರೆಸ್‌‍ ಸರ್ಕಾರದ ಜನವಿರೋಧಿ ನಡೆ ಎಂದು ಜೆಡಿಎಸ್‌‍ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍, 22 ಲಕ್ಷ ಕಾರ್ಡ್‌ ರದ್ದು ಮಾಡುವ ಮೊದಲು ಅನರ್ಹರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆಯೇ? ಅನರ್ಹರು ಎಂದು ಯಾವೆಲ್ಲಾ ಮಾನದಂಡಗಳ ಮೇಲೆ ಪರಿಗಣಿಸಲಾಯಿತು? ಎಂದಿದೆ.

ದಿನಕ್ಕೊಂದು ಆದೇಶಗಳು, ಗಂಟೆಗೆ ಒಬ್ಬರಂತೆ ಸಚಿವರಿಂದ ಸಮರ್ಥನೆ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್‌‍, ಸರ್ಕಾರಿ ನೌಕರರು ಮತ್ತು ತೆರಿಗೆದಾರರ ಬಿಪಿಎಲ್‌ ಕಾರ್ಡ್‌ಗಳನ್ನಷ್ಟೇ ರದ್ದು ಮಾಡಿದ್ದೇವೆ ಎನ್ನುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇನ್ನುಳಿದ ಬಡವರ ಕಾರ್ಡ್‌ಗಳನ್ನು ಏಕಾಏಕಿ ರದ್ದು ಮಾಡುವ ಅನಿವಾರ್ಯತೆ ಏನಿತ್ತು? ಎಂದು ಪ್ರಶ್ನಿಸಿದೆ.

ಈಗ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೇ ಮರುಳಿಸಬೇಕು ಎಂದು ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಿರುವುದನ್ನು ಗಮನಿಸಿದರೇ ಉದ್ದೇಶ ಪೂರ್ವಕವಾಗೇ ಬಡವರ ಅನ್ನಕ್ಕೆ ಸರ್ಕಾರ ಕಲ್ಲು ಹಾಕಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಾಂಗ್ರೆಸ್‌‍ ಸರ್ಕಾರದ ಗ್ಯಾರಂಟಿ ಹೊರೆಯಿಂದ, ಲಕ್ಷಾಂತರ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವುದು ಯಾವ ನ್ಯಾಯ? ರಾಜ್ಯದಲ್ಲಿ ವಚನ ಭ್ರಷ್ಟ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ತೊಘಲಕ್‌ ಆಡಳಿತದ ಹುಚ್ಚಾಟಗಳು ಮಿತಿಮೀರಿದೆ ಎಂದು ಟೀಕಾ ಪ್ರಹಾರ ನಡೆಸಿದೆ.

RELATED ARTICLES

Latest News