Sunday, June 23, 2024
Homeರಾಜ್ಯಶೇ.25ರಷ್ಟು ಮುಂಗಾರು ಮಳೆ ಕೊರತೆ, ಹಿಂಗಾರು ಕೂಡ ದುರ್ಬಲ

ಶೇ.25ರಷ್ಟು ಮುಂಗಾರು ಮಳೆ ಕೊರತೆ, ಹಿಂಗಾರು ಕೂಡ ದುರ್ಬಲ

ಬೆಂಗಳೂರು, ಅ.22- ನೈರುತ್ಯ ಮುಂಗಾರು ಅವ ಮುಗಿದಿದ್ದು, ಹಿಂಗಾರು ಮಳೆ ಆರಂಭಗೊಂಡಿದೆ. ಆದರೆ, ಮುಂಗಾರಿನಂತೆ ಹಿಂಗಾರು ಮಳೆಯು ಕೈಕೊಟ್ಟಿದೆ. ಮುಂಗಾರು ಅವಯಲ್ಲಿ ರಾಜ್ಯದಲ್ಲಿ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜೂನ್ ಒಂದರಿಂದ ಸೆಪ್ಟೆಂಬರ್ ಅಂತ್ಯವರೆಗೆ ರಾಜ್ಯದಲ್ಲಿ 852 ಮಿ.ಮೀ. ವಾಡಿಕೆ ಮಳೆ ಪ್ರಮಾಣವಿದ್ದು, ಕೇವಲ 642 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ.

ಇದರಿಂದ ರಾಜ್ಯ ತೀವ್ರ ಸ್ವರೂಪದ ಬರಕ್ಕೆ ತುತ್ತಾಗಿದೆ. 216 ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತವೆಂದು ಘೋಷಣೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತಿದ್ದ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಆಗಸ್ಟ್ ನಿಂದ ನಿರಂತರ ಮಳೆ ಕೊರತೆ ರಾಜ್ಯದಲ್ಲಿ ಕಂಡುಬಂದಿದೆ. ರೈತರು ಕಂಗಾಲಾಗಿದ್ದಾರೆ.

ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಮುಂಗಾರು ನಿರ್ಗಮನವಾಗಿದ್ದು, ಹಿಂಗಾರು ಮಳೆ ಆರಂಭವಾಗಿದೆ. ಅಂದರೆ ಮುಂಗಾರಿನಂತೆ ಹಿಂಗಾರು ಮಳೆಯೂ ಕೂಡ ವಾಡಿಕೆಗಿಂತ ಎರಡು ವಾರ ವಿಳಂಬವಾಗಿದೆ. ಹಿಂಗಾರಿನ ಆರಂಭವೂ ದುರ್ಬಲವಾಗಿರುವುದರಿಂದ ವಾಡಿಕೆ ಪ್ರಮಾಣದ ಮಳೆಯಾಗದೆ ಒಣ ಹವೆ ಮುಂದುವರೆದಿದೆ.

ಬ್ರೇಕಿಂಗ್ : ಮೈಸೂರು ದಸರಾ ಮೇಲೆ ಉಗ್ರರ ಕಣ್ಣು, ಹೈಅಲರ್ಟ್ ಘೋಷಣೆ..!

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ಒಂದರಿಂದ ಸೆಪ್ಟೆಂಬರ್ ಅಂತ್ಯದವರೆಗೆ ದಕ್ಷಿಣ ಒಳನಾಡಿನಲ್ಲಿ ಶೇ.26ರಷ್ಟು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಶೇ.19ರಷ್ಟು ಹಾಗೂ ಅತಿ ಹೆಚ್ಚು ಮಳೆಯಾಗುತ್ತಿದ್ದ ಮಲೆನಾಡಿನಲ್ಲಿ ಶೇ.39ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜನವರಿ ಒಂದರಿಂದ ನಿನ್ನೆವರೆಗಿನ ಮಾಹಿತಿ ಪರಿಗಣಿಸಿದರೂ ಶೇ.25ರಷ್ಟು ವಾಡಿಕೆಗಿಂತ ಕಡಿಮೆಯಾಗಿದೆ.

ಕಳೆದ ಒಂದು ವಾರದಲ್ಲಿ ಶೇ.87ರಷ್ಟು ಮಳೆ ಕೊರತೆ ರಾಜ್ಯದಲ್ಲಿದ್ದು, ಅಲ್ಪ-ಸ್ವಲ್ಪ ಉಳಿದಿರುವ ಬೆಳೆಯೂ ರೈತರ ಕೈಸೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನು ಅಕ್ಟೋಬರ್ ಒಂದರಿಂದ ನಿನ್ನೆವರೆಗೆ ಮಾಹಿತಿ ಪರಿಗಣಿಸಿದರೂ 100 ಮಿ.ಮೀ.ನಷ್ಟು ವಾಡಿಕೆ ಮಳೆ ಇದ್ದು, ಕೇವಲ 40ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ಇದರಿಂದ ಶೇ.60ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಈ ಅವಯಲ್ಲಿ ದಕ್ಷಿಣ ಒಳನಾಡಿನಲ್ಲಿ ಶೇ.55ರಷ್ಟು, ಉತ್ತರ ಒಳನಾಡಿನಲ್ಲಿ ಶೇ.89ರಷ್ಟು, ಮಲೆನಾಡಿನಲ್ಲಿ ಶೇ.36ರಷ್ಟು ಹಾಗೂ ಕರಾವಳಿಯಲ್ಲಿ ಶೇ.12ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಒಂದು ವಾರ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಇಲ್ಲ. ಚದುರಿದಂತೆ ಅಲ್ಲಲ್ಲಿ ಹಗರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

RELATED ARTICLES

Latest News