ಬೆಂಗಳೂರು,ನ.13- ಎಷ್ಟೇ ಎಚ್ಚರಿಕೆ ನೀಡಿದರೂ ದೀಪಾವಳಿ ಹಬ್ಬದ ದಿನದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ದೀಪಾವಳಿ ಆರಂಭ ದಿನವಾದ ನಿನ್ನೆ ಒಂದೇ ದಿನ ನಗರದಲ್ಲಿ 26 ಕ್ಕೂ ಹೆಚ್ಚು ಪಟಾಕಿ ಸಿಡಿತ ಪ್ರಕರಣಗಳು ದಾಖಲಾಗಿವೆ.
ನಾರಾಯಣ ನೇತ್ರಾಲಯದಲ್ಲಿ 22 ಪ್ರಕರಣ ದಾಖಲು ಹಾಗೂ ಮಿಂಟೋ ಆಸ್ಪತ್ರೆಯಲ್ಲಿ 4 ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ. ನಾರಾಯಣ ನೇತ್ರಾಲಯದ 22 ಪ್ರಕರಣಗಳಲ್ಲಿ 10 ಮಂದಿಗೆ ಮೇಜರ್ ಸಮಸ್ಯೆ ಆಗಿದ್ದರೆ 12 ಜನರಿಗೆ ಮೈನರ್ ಇಂಜುರಿ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಮುದ್ರದಾಳದಿಂದ ತೈಲ ತೆಗೆಯಲು ಮುಂದಾದ ಒಎನ್‍ಜಿಸಿ
4 ಮಕ್ಕಳು ಸೇರಿದಂತೆ 22 ವಯಸ್ಕರಿಗೆ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿದುಬಂದಿದೆ. ಇನ್ನು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 4 ಪ್ರಕರಣ ದಾಖಲಾಗಿದ್ದು, ಇಬ್ಬರಿಗೆ ಮೇಜರ್ ಇಂಜುರಿ , ಇಬ್ಬರಿಗೆ ಮೈನರ್ ಇಂಜುರಿಯಾಗಿರುವ ಬಗ್ಗೆ ಮಿಂಟೋ ವೈದ್ಯರು ಮಾಹಿತಿ ನೀಡಿದ್ದಾರೆ.