Saturday, March 22, 2025
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruಸರಕಾರಿ ಬಸ್ ಇಲ್ಲದೆ ಗೂಡ್ಸ್‌ ವಾಹನದಲ್ಲಿ 28 ಜನ ವಿದ್ಯಾರ್ಥಿಗಳ ಪ್ರಯಾಣ

ಸರಕಾರಿ ಬಸ್ ಇಲ್ಲದೆ ಗೂಡ್ಸ್‌ ವಾಹನದಲ್ಲಿ 28 ಜನ ವಿದ್ಯಾರ್ಥಿಗಳ ಪ್ರಯಾಣ

28 children travel in goods vehicle

ಕೊರಟಗೆರೆ :- ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನವನ್ನ ಖರ್ಚು ಮಾಡುತ್ತಿದ್ದರೂ ಸಹ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಪರೀಕ್ಷಾ ಸಂದರ್ಭದಲ್ಲಿ (SSLC -PUC) ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣಿಸಲು ಸರ್ಕಾರಿ ಬಸ್ ಅಥವಾ ಖಾಸಗಿ ಬಸ್ ಸಿಗದೆ ವಿದ್ಯಾರ್ಥಿಗಳು ಗೂಡ್ಸ್ ವಾಹನ, ಆಟೋ ಹಾಗೂ ದ್ವಿಚಕ್ರ ವಾಹನಗಳ ಮೊರೆಹೋಗುವ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಆತಂಕ ಸೃಷ್ಟಿಸುವುದು ದುರಾದೃಷ್ಟಕರ ಎಂದು ಪೋಷಕರು ವ್‌ಯವಸ್ಥೆಯ ವಿರುದ್ಧ ಇಡೀ ಶಾಪ ಹಾಕುವ ಪ್ರಸಂಗ ಶುಕ್ರವಾರ ಜರುಗಿದೆ.

ಗಡಿಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸರಕಾರಿ ಮತ್ತು ಖಾಸಗಿ ಬಸ್ಸಿನ ಸೌಲಭ್ಯವಿಲ್ಲದೇ ರಂಗನಾಥ ಅನುಧಾನಿತ ಪ್ರೌಢಶಾಲೆಯ ಆಡಳಿತ ಮಂಡಳಿಯು ಗೂಡ್ಸ್ ವಾಹನದಲ್ಲೇ 28 ಜನ ಮಕ್ಕಳನ್ನು ಬೈರೇನಹಳ್ಳಿಯಿಂದ ಅಕ್ಕಿರಾಂಪುರಕ್ಕೆ ಕನ್ನಡ ಪರೀಕ್ಷೆ ಬರೆಯಲು ಕಳುಹಿಸಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸುವುದರ ಜೊತೆಗೆ ಪ್ರಸಕ್ತ ಶೈಕ್ಷಣಿಕ ವ್‌ಯವಸ್ಥೆಯ ವಿರುದ್ಧ ಟೀಕಿಸುವಂತಾಗಿದೆ.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂಯ ಬೈರೇನಹಳ್ಳಿಯ ಶ್ರೀರಂಗನಾಥ ಪ್ರೌಢಶಾಲೆಯ 28 ಜನ ವಿದ್ಯಾರ್ಥಿಗಳು ಬೈರೇನಹಳ್ಳಿಯಿಂದ ಅಕ್ಕಿರಾಂಪುರ ಪರೀಕ್ಷಾ ಕೇಂದ್ರಕ್ಕೆ ಗೂಡ್ ವಾಹನದಲ್ಲೇ ಹೋಗಿರುವುದು ಜೊತೆಗೆ ಪರೀಕ್ಷೆ ಮುಗಿಸಿಕೊಂಡು ಹಿಂದಕ್ಕೆ ಬರುವಾಗ ಬೈಚಾಪುರ ಕ್ಯಾಸಿನ ನರ್ಸರಿ ಸಮೀಪದ ಮುಖ್ಯ ರಸ್ತೆ ಸೇತುವೆ ಬಳಿ ಆಗಬೇಕಿದ್ದ ಅನಾಹುತ ತಪ್ಪಿದೆ.

ಬೈರೇನಹಳ್ಳಿಯಿಂದ ಕಡೆಯಿಂದ ಕೊರಟಗೆರೆ ಕಡೆಗೆ ಬರುತ್ತಿದ್ದ ಲಾರಿಯೊಂದು ಸೇತುವೆ ಬಳಿ ವೇಗವಾಗಿ ಬಂದಾಗ 28 ಜನ ಮಕ್ಕಳನ್ನು ತುಂಬಿದ್ದ ಗೂಡ್ಸ್ ಟಾಟಾ ಎಸಿ ವಾಹನ ರಸ್ತೆಯಿಂದ ಕೆಳಗಡೆ ಇಳಿಸುತ್ತಾನೆ. ಹಿಂದೆ ಒಬ್ಬರ ಮೇಲೋಬ್ಬರ ನಿಂತಿದ್ದ ಮಕ್ಕಳು ಕೆಳಗೇ ಬಾಗಿ ಮತ್ತೇ ಒಳಗಡೆ ಹೋಗುವುದು ಸಹ ಕಂಡುಬರುತ್ತೇ, ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಆಗಿಲ್ಲ.

ವಾಹನ ಚಾಲಕ ಮತ್ತು ಮುಂದೆ ಕುಳಿತುಕೊಂಡಿದ್ದ ಶಿಕ್ಷಕನನ್ನು ಪ್ರಶ್ನಿಸಿದರೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಇಲ್ಲದೆ ಇರುವುದು ಹಾಗೂ ಬಸ್ ಕೊರತೆ ಜೊತೆಗೆ ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಅನಿವಾರ್ಯವಾಗಿ ಗೂಡ್ಸ್ ಗಾಡಿ ಮಾಡಲಾಗಿದೆ ಎಂದು ಅದಕ್ಕೆ ಉತ್ತರ ನೀಡುವ ಮೂಲಕ ಗ್ರಾಮೀಣ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವುದು ಎಷ್ಟು ಸರಿ ಎದ್ದು ಪ್ರಜ್ಞಾವಂತ ನಾಗರಿಕರ ಹಾಗೂ ಪೋಷಕರ ನಾದವಾಗಿದೆ.

ಬೈರೇನಹಳ್ಳಿಯಿಂದ ಕೊರಟಗೆರೆಗೆ ಸರಕಾರಿ ಬಸ್ಸಿನ ಕೊರತೆ ಇದೆ. ಮಕ್ಕಳು ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರೋದಿಲ್ಲ. ಪರೀಕ್ಷೆಗೆ ತಡವಾಗಿದ್ದ ಪರಿಣಾಮ 28 ಜನ ಮಕ್ಕಳನ್ನು ಟಾಟಾಎಸಿ ಗೂಡ್ ವಾಹನದಲ್ಲಿ ಕಳಿಸಿದ್ದು ಸತ್ಯ. ಮತ್ತೆ ನಮ್ಮ ಶಾಲೆಯಿಂದ ಈತರ ಆಗೋದಿಲ್ಲ ನಾಳೆಯಿಂದ ಮುಂಚಿತವಾಗಿ ಮಕ್ಕಳನ್ನು ಬಸ್ಸಿನಲ್ಲಿಯೇ ಕಳಿಸುತ್ತೇವೆ.
ಮಹಮ್ಮದ್ ರಫಿ, ಮುಖ್ಯಶಿಕ್ಷಕ, ರಂಗನಾಥ ಪ್ರೌಢಶಾಲೆ, ಬೈರೇನಹಳ್ಳಿ,

ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅರ್ಚನೆ ಆಗದಂತೆ ಸುಸೂತ್ರವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಹ ವ್‌ಯವಸ್ಥೆಯನ್ನು ಕಲ್ಪಿಸಲಾಗಿದೆ. ರಂಗನಾಥ ಪ್ರೌಢಶಾಲೆ ಖಾಸಗಿ ಶಾಲೆ ಆಗಿರುವುದರಿಂದ ಅನುದಾನ ಕೊರತೆ ಇರುತ್ತದೆ, ಆದರೆ ಪಕ್ಷ ಕೇಂದ್ರಕ್ಕೆ ಈ ರೀತಿ ಒತ್ತಡದಲ್ಲಿ ಬರುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ಈ ರೀತಿಯ ವಾತಾವರಣ ಮರುಕಳಿಸದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಎಚ್ಚರಿಕೆ ನೀಡಲಾಗಿದೆ.
ನಟರಾಜು.. ಬಿ.ಇ.ಓ ಕೊರಟಗೆರೆ..!

RELATED ARTICLES

Latest News