Friday, May 3, 2024
Homeರಾಷ್ಟ್ರೀಯಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ಮನೆಯ ಛಾವಣಿ ಕುಸಿತ ; ಮೂವರಿಗೆ ಗಾಯ

ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ಮನೆಯ ಛಾವಣಿ ಕುಸಿತ ; ಮೂವರಿಗೆ ಗಾಯ

ಥಾಣೆ, ಮಾ 20 – ಮನೆಯೊಂದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಬೈಕ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಪುರುಷ ಗಾಯಗೊಂಡಿರುವ ಘಟನೆ ಕಲ್ವಾ ಪ್ರದೇಶದ ಶಾಂತಿ ನಗರ ಪ್ರದೇಶದ ಚಾಲ್ ನಡೆದಿದೆ.ಕಳೆದ ರಾತ್ರಿ ಸಂಭವಿಸಿದ ಸ್ಫೋಟದ ಪರಿಣಾಮದಿಂದಾಗಿ ಮನೆಯ ಮೇಲ್ಛಾವಣಿ ಮತ್ತು ಪಕ್ಕದ ಮನೆಯ ಗೋಡೆ ಕುಸಿದಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ.

ರಾತ್ರಿ 10.30ರ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡಿದ್ದು, ಚಾಜಿರ್ಂಗ್ ಮಾಡಲು ಬೈಕ್ ಬ್ಯಾಟರಿಯನ್ನು ಮನೆಯಲ್ಲಿ ಇಟ್ಟಿದ್ದರೆ ಅಥವಾ ಹೊರಗೆ ಇತ್ತೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕುಸಿದು ಬಿದ್ದ ಮನೆಯಲ್ಲಿ ವಾಸವಿದ್ದ 28 ವರ್ಷದ ಮಹಿಳೆ ಹಾಗೂ ಪಕ್ಕದ ಮನೆಯಲ್ಲಿದ್ದ 66 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ದಳದ ತಂಡ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮೂವರನ್ನು ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಸ್ಫೋಟದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News