Friday, October 11, 2024
Homeರಾಷ್ಟ್ರೀಯ | Nationalಬಾರಾಮುಲ್ಲಾ ಜಿಲ್ಲೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಬಾರಾಮುಲ್ಲಾ ಜಿಲ್ಲೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

3 terrorists killed in Baramulla encounter after 2 Army soldiers died

ಶ್ರೀನಗರ,ಸೆ.14- ಜಮ್ಮು ಮತ್ತು ಕಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಕಳೆದ ರಾತ್ರಿಯಿಂದ ನಡೆಯುತ್ತಿ ರುವ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಯೋಧರು ಇಂದು ನಸುಕಿನ ಜಾವ ಹೊಡೆದುರುಳಿಸಿದ್ದಾರೆ.ಕಳದೆ ತಡರಾತ್ರಿ ಉತ್ತರ ಕಾಶೀರ ಜಿಲ್ಲೆಯ ಪಟ್ಟಾನ್‌ ಪ್ರದೇಶದ ಚಕ್‌ ಟಪ್ಪರ್‌ ಕ್ರೀರಿಯಲ್ಲಿ ಪ್ರದೇಶಗಳನ್ನು ಸುತ್ತುವರಿದ ಭದ್ರತಾ ಪಡೆ ಯೋಧರು ಕಾರ್ಯಾಚರಣೆ ಪ್ರಾರಂಭಿಸಿದ್ದರು.

ಜಮು ಮತ್ತು ಕಾಶೀರದ ಬಾರಾಮುಲ್ಲಾ ಜಿಲ್ಲೆಯ ಚಕ್‌ ಟಪ್ಪರ್‌ ಕ್ರೀರಿ ಪಟ್ಟನ್ ಪ್ರದೇಶದಲ್ಲಿ ಉಗ್ರರೊಂದಿಗೆ ಭದ್ರತಾ ಸಿಬ್ಬಂದಿ ಎನ್‌ಕೌಂಟರ್‌ ನಡೆಸಿದರು.ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಇಬ್ಬರು ಯೋಧರು ಹುತಾತರಾಗಿ ಮತ್ತಿಬ್ಬರು ಗಾಯಗೊಂಡಿದ್ದರು. ಅದಕ್ಕೆ ಪ್ರತಿದಾಳಿ ನಡೆಸಿದ ಯೋಧರು ಇಂದು ಮೂವರು ಉಗ್ರರನ್ನು ಕೊಂದುಹಾಕಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಯೋಧರು ರಾತ್ರಿಯಿಂದಲೇ ಪ್ರದೇಶವನ್ನು ಸುತ್ತುವರಿದು ನಸುಕಿನ ಜಾವ ಏರ್ಪಟ್ಟ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕನನ್ನು ಕೊಲ್ಲಲಾಯಿತು.

ಇಬ್ಬರು ಯೋದರು ಹುತಾತ:
ಕಿಶಾ್ತ್ವರ್‌ ಜಿಲ್ಲೆಯ ಚತ್ರೂ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಭಯೋತ್ಪಾದಕರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಸೈನಿಕರು ಹುತಾತರಾಗಿ ಇಬ್ಬರು ಗಾಯಗೊಂಡಿದ್ದರು. ಛತ್ರೂ ಬೆಲ್‌್ಟನ ನೈದ್ಗಾಮ್‌ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ಭದ್ರತಾ ತಂಡವು ಸುಳಿವು ಆಧರಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಗುಂಡಿನ ಚಕಮಕಿ ನಡೆಯಿತು. ಹುತಾತ ಯೋಧರನ್ನು ನಾಯಬ್‌ ಸುಬೇದಾರ್‌ ವಿಪನ್‌ ಕುಮಾರ್‌ ಮತ್ತು ಸಿಪಾಯಿ ಅರವಿಂದ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಈತನಧ್ಯೆ, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳನ್ನು ಘಟನಾ ಸ್ಥಳಕ್ಕೆ ಹೆಚ್ಚಿನ ಪಡೆಗಳನ್ನು ರವಾನಿಸಲಾಗಿದೆ. ಛತ್ರೂ ಬೆಲ್ಟನ್‌ ನೈದ್ಗಾಮ್‌ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ಭದ್ರತಾ ತಂಡವು ಸುಳಿವು ಆಧರಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಗುಂಡಿನ ಚಕಮಕಿ ನಡೆಯಿತು.

ದಕ್ಷಿಣ ಕಾಶೀರ ಜಿಲ್ಲೆಗಳಾದ ಅನಂತನಾಗ್‌, ಪುಲ್ವಾಮಾ, ಶೋಪಿಯಾನ್‌ ಮತ್ತು ಕುಲ್ಗಾಂನಲ್ಲಿ 16 ಸ್ಥಾನಗಳ ಜೊತೆಗೆ ದೋಡಾ, ಕಿಶಾ್ತ್ವರ್‌ ಮತ್ತು ರಾಂಬನ್‌ ಜಿಲ್ಲೆಗಳನ್ನು ಒಳಗೊಂಡಿರುವ ಚೆನಾಬ್‌ ಕಣಿವೆ ಪ್ರದೇಶದ ಎಂಟು ಅಸೆಂಬ್ಲಿ ಕ್ಷೇತ್ರಗಳು ಮೊದಲ ಹಂತದಲ್ಲಿ ಮತದಾನಕ್ಕೆ ಸಜ್ಜಾಗಿರುವುದರಿಂದ ಈ ಎನ್ಕೌಂಟರ್ಗಳು ಸಂಭವಿಸಿವೆ ಎಂದು ವರದಿ ಹೇಳಿದೆ.ಸೆಪ್ಟೆಂಬರ್‌ 18ರಂದು ಜಮು, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಕ್ರಮವಾಗಿ ಸೆಪ್ಟೆಂಬರ್‌ 25 ಮತ್ತು ಅಕ್ಟೋಬರ್‌ 1 ರಂದು ಎರಡನೇ ಮತ್ತು ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

RELATED ARTICLES

Latest News