ಶ್ರೀನಗರ,ಮೇ7- ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ತಡರಾತ್ರಿ ಸುತ್ತುವರೆದು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಶೋಧ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿ ಬೆಳಗ್ಗೆವರೆಗೂ ಮುಂದುವರೆಯಿತು.
ಭಯೋತ್ಪಾದಕರ ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ಹೊರತೆಗೆಯಬೇಕಾಗಿದೆ.ಏಪ್ರಿಲ್ 28ರಂದು ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗ್ರಾಮ ರಕ್ಷಣಾ ಸಿಬ್ಬಂದಿ (ವಿಡಿಜಿ) ಕೊಲ್ಲಲ್ಪಟ್ಟ ನಂತರ ಎರಡು ಗುಂಪುಗಳ ಭಯೋತ್ಪಾದಕರನ್ನು ಪತ್ತೆಹಚ್ಚಲು ಮೇ 1ರಂದು ಭದ್ರತಾ ಏಜೆನ್ಸಿಗಳು ಕಥುವಾ ಜಿಲ್ಲೆಗೆ ಶೋಧ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದವು. ಚೋಚ್ರು ಗಾಲಾ ಎತ್ತರದ ದೂರದ ಪನಾರಾ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದೆ.
ಏಪ್ರಿಲ್ 29ರಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜಮ್ಮು ವಲಯ) ಆನಂದ್ ಜೈನ್ ಅವರು, ಇತ್ತೀಚೆಗೆ ಗಡಿಯಿಂದ ನುಸುಳಿದ ನಂತರ ಎರಡು ಗುಂಪುಗಳ ಭಯೋತ್ಪಾದಕರು ಈ ಪ್ರದೇಶದಲ್ಲಿ ಇದ್ದಾರೆ ಎಂದು ನಂಬಲಾಗಿದೆ.