Sunday, October 6, 2024
Homeರಾಜ್ಯರಾಜ್ಯದಲ್ಲಿ 32 ಸ್ವಯಂ ಚಾಲಿತ ವಾಹನಗಳ ಪರೀಕ್ಷಾ ಕೇಂದ್ರ

ರಾಜ್ಯದಲ್ಲಿ 32 ಸ್ವಯಂ ಚಾಲಿತ ವಾಹನಗಳ ಪರೀಕ್ಷಾ ಕೇಂದ್ರ

32 Driving Test centers

ಬೆಂಗಳೂರು, ಸೆ.21-ರಾಜ್ಯದ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ವಾಹನಗಳ ಪರೀಕ್ಷಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ಯೋಜನೆಯ ಕುರಿತು ಟೆಂಡರ್‌ ಆಹ್ವಾನಿಸುವ ಹಾಗೂ ಅಂಗೀಕರಿಸುವ ಪ್ರಾಧಿಕಾರಗಳನ್ನು ಸಾರಿಗೆ ಇಲಾಖೆ ರಚಿಸಿದೆ.

ಅಪರ ಸಾರಿಗೆ ಆಯುಕ್ತರ(ಆಡಳಿತ) ಅಧ್ಯಕ್ಷತೆಯಲ್ಲಿ ಟೆಂಡರ್‌ ಆಹ್ವಾನ ಸಮಿತಿ ರಚಿಸಲಾಗಿದ್ದು, ಅಪರ ಸಾರಿಗೆ ಆಯುಕ್ತರು ಪ್ರವರ್ತನ(ದಕ್ಷಿಣ), ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಯುಕ್ತರು, ಬೆಂಗಳೂರು ನಗರ ಜಂಟಿ ಸಾರಿಗೆ ಆಯುಕ್ತರು, ಕೆ.ಆರ್‌.ಪುರಂನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸದಸ್ಯರಾಗಿರುತ್ತಾರೆ. ಸಾರಿಗೆ ಆಯುಕ್ತರ ಕಚೇರಿಯ ಆರ್ಥಿಕ ಸಲಹೆಗಾರರನ್ನು ಸಮಿತಿಯ ಸದಸ್ಯರು ಹಾಗೂ ಸಂಚಾಲಕರನ್ನಾಗಿ ನೇಮಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಅಧ್ಯಕ್ಷತೆಯಲ್ಲಿ ಟೆಂಡರ್‌ ಅಂಗೀಕಾರ ಸಮಿತಿ ರಚಿಸಿದ್ದು, ಅಪರ ಸಾರಿಗೆ ಆಯುಕ್ತರು ಪ್ರವರ್ತನ(ದಕ್ಷಿಣ) ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಅರ್ಹತಾ ಪತ್ರ ನವೀಕರಣಕ್ಕೆ ಬರುವ ವಾಹನಗಳಿಗೆ ಅರ್ಹತಾ ಪರೀಕ್ಷೆ ಕೈಗೊಳ್ಳಲು ಸಾರಿಗೆ ಇಲಾಖೆಯಲ್ಲಿ 13 ಸ್ಥಳಗಳಲ್ಲಿ ಡಿಸೈನ್‌ ಬಿಲ್ಡ್ ಫೈನಾನ್ಸ್ ಆಪರೇಟ್‌ ಮತ್ತು ಟ್ರಾನ್‌್ಸಫರ್‌ ಮಾದರಿಯಲ್ಲಿ ಮತ್ತು 19 ಸ್ಥಳಗಳಲ್ಲಿ ಬಿಲ್ಡ್ ಓನ್‌ ಆಪರೇಟ್‌ ಮಾದರಿಯಲ್ಲಿ ಸೇರಿದಂತೆ ಒಟ್ಟು 32 ಸ್ಥಳಗಳಲ್ಲಿ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಆಡಳಿತಾತಕ ಅನುಮೋದನೆ ನೀಡಿ ಆದೇಶಿಸಲಾಗಿತ್ತು.

RELATED ARTICLES

Latest News