Tuesday, July 16, 2024
Homeಬೆಂಗಳೂರು32 NDPS ಪ್ರಕರಣ ದಾಖಲು : ವಿದೇಶಿ ಪ್ರಜೆ ಸೇರಿ 45 ಮಂದಿ ಬಂಧನ

32 NDPS ಪ್ರಕರಣ ದಾಖಲು : ವಿದೇಶಿ ಪ್ರಜೆ ಸೇರಿ 45 ಮಂದಿ ಬಂಧನ

ಬೆಂಗಳೂರು,ಜು.10- ಕಳೆದ ಜೂನ್ ತಿಂಗಳಲ್ಲಿ 32 NDPS ಪ್ರಕರಣಗಳನ್ನು ದಾಖಲಿಸಿ ಮೂವರು ವಿದೇಶಿ ಪ್ರಜೆ ಸೇರಿದಂತೆ 45 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 117ಕೆಜಿ 449 ಗ್ರಾಂ ಗಾಂಜಾ , 11 ಕೆಜಿ 414 ಗ್ರಾಂ ಅಫೀಮು, 400 ಗ್ರಾಂ ಅಸೀಶ್ ಆಯಿಲ್, 50 ಗ್ರಾಂ ಕೊಕೈನ್ 236 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಜೂನ್ ತಿಂಗಳಲ್ಲಿ 2 ಮಟ್ಕಾ ಪ್ರಕರಣದಲ್ಲಿ ಇಬ್ಬರು, 32 ಜೂಜಾಟ ಪ್ರಕರಣದಲ್ಲಿ 159 ಮಂದಿ, 4 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ನಾಲ್ವರು ಹಾಗೂ ಅನಧಿಕೃತ ಬೆಟ್ಟಿಂಗ್ನ ಒಂದು ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಬಂಽಸಲಾಗಿದೆ ಎಂದು ಹೇಳಿದರು.

ಸಂಚಾರಿ ನಿಯಮ ಅನುಪಾಲನೆ ಮಾಡದೆ ಇರುವ 16 ಪ್ರಕರಣಗಳಲ್ಲಿ 18 ಮಂದಿ, ಶಸಾಸ ಕಾಯ್ದೆಯಡಿ 9 ಮಂದಿ, ಅನಧಿಕೃತ ಬಡ್ಡಿ ದಂಧೆಯಲ್ಲಿ ಇಬ್ಬರು, ಬಡ್ಸ್ ಕಾಯ್ದೆಯಡಿ ಇಬ್ಬರು, ಇಸಿ ಕಾಯ್ದೆಯಡಿ ಮೂವರು, ಕಾಪಿರೈಟ್ ಆ್ಯಕ್ಟ್ ಸಂಬಂಧ 16 ಮಂದಿ ಎನ್ಡಿಪಿಎಸ್ ಕಾಯ್ದೆಯಡಿ 45 ಮಂದಿ ಮತ್ತು ಕೋಟ್ಪ ಅಡಿ 43 ಮಂದಿಯನ್ನು ಬಂಧಿಸಲಾಗಿದೆ. ಒಟ್ಟಾರೆ 179 ಪ್ರಕರಣಗಳಲ್ಲಿ 324 ಮಂದಿಯನ್ನು ಬಂಽಸಲಾಗಿದೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ಪ್ರಕರಣಗಳಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ 31 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ತಲೆಮರೆಸಿಕೊಂಡಿದ್ದ 12 ರೌಡಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ಜೂನ್ ತಿಂಗಳಿನಲ್ಲಿ ಒಟ್ಟು 1185 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 810 ಮಂದಿಗೆ ಶಿಕ್ಷೆಯಾಗಿದೆ. ಅದರಲ್ಲಿ ಮೂರು ಪ್ರಕರಣಗಳಲ್ಲಿ ಐದು ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ ಎಂದು ಕಮೀಷನರ್ ತಿಳಿಸಿದ್ದಾರೆ. ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಒಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಜೆಜೆನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಮೂವರಿಗೆ 20 ಸಾದಾ ಶಿಕ್ಷೆಯನ್ನು ನ್ಯಾಯಾಲಯ ವಿಽಸಿದೆ.

ಇದಲ್ಲದೆ ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣದಲ್ಲಿ ಒಬ್ಬ ವ್ಯಕ್ತಿ 50 ಸಾವಿರ ರೂ. ದಂಡ ವಿಧಿಸಲಾಗಿದ್ದು, ದೇವನಹಳ್ಳಿ ಠಾಣೆಯಲ್ಲಿ ನಡೆದಿದ್ದ ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಒಬ್ಬನಿಗೆ 10 ವರ್ಷ ಜೈಲು ಶಿಕ್ಷೆ ವಿಽಸಲಾಗಿದೆ.
ಕಳೆದ 2007ರಲ್ಲಿ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ನಾಲ್ಕು ವರ್ಷ ಶಿಕ್ಷೆ ವಿಽಸಲಾಗಿದೆ.

ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದ್ದ ಎನ್ಡಿಪಿಎಸ್ ಡ್ರಗ್್ಸ ಪ್ರಕರಣದಲ್ಲಿ ಒಬ್ಬನಿಗೆ 3 ವರ್ಷ 6 ತಿಂಗಳು ಶಿಕ್ಷೆಯಾಗಿದೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದ ಅಪರಾಽಗೆ 2 ವರ್ಷ 10 ತಿಂಗಳ ಶಿಕ್ಷೆಯಾಗಿದೆ. ಇದಲ್ಲದೆ 802 ಪ್ರಕರಣದಲ್ಲಿ 915 ಜನರಿಗೆ ದಂಡ ಶುಲ್ಕ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮಹತ್ವದ ಪ್ರಕರಣದಲ್ಲಿ ತಲ್ಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಬ್ಬ ಡ್ರಗ್ ಪೆಡ್ಲರ್ನ್ನು ಬಂಧಿಸಿ 5 ಲಕ್ಷ ರೂ. ವೌಲ್ಯದ 4.30 ಕೆಜಿ ಗಾಂಜಾ, 400 ಎಂಎಲ್ ಆಸೀಶ್ ಆಯಿಲ್57 ಗ್ರಾಂ ಎಂಡಿಎ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಯಲಹಂಕ ನ್ಯೂಟೌನ್ ಪೊಲೀಸರು ಮೂರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 16 ಲಕ್ಷ ಬೆಲೆ ಬಾಳುವ 32 ಕೆಜಿ ಗಾಂಜಾ ಹಾಗೂ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ.ಕೋಣನಕುಂಟೆ ಪೊಲೀಸರು ಒಬ್ಬ ಡ್ರಗ್ ಪೆಡ್ಲರ್ನ್ನು ಬಂಽಸಿ ಅಫೀಮ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಕುಮಾರಸ್ವಾಮಿ ಲೇಔಟ್ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ನಾಲ್ವರನ್ನು ಬಂಽಸಲಾಗಿದೆ. ಇವರು ಕದ್ದ ಚಿನ್ನದ ಸರಗಳನ್ನು ತುಮಕೂರು ಹಾಗೂ ಭರಮಸಾಗರದಲ್ಲಿರುವ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದರು. ಪ್ರಸ್ತುತ 11 ಲಕ್ಷ ರೂ. ವೌಲ್ಯದ 174 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 6 ಕಳ್ಳತನ ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಕೋಣನಕುಂಟೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 16.50 ಲಕ್ಷ ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ನಗರದ ವಿವಿಧೆಡೆ ನಡೆದಿದ್ದ 12 ಕಳ್ಳತನ ಪ್ರಕರಣ ಪತ್ತೆಯಾಗಿದೆ. ಹುಳಿಮಾವು ಪೊಲೀಸರು ವ್ಯಕ್ತಿಯೊಬ್ಬನನ್ನು ಶಿವಮೊಗ್ಗದಲ್ಲಿ ಬಂಧಿಸಿ ಆತ ಕಳ್ಳತನ ಮಾಡಿ ಅಡಮಾನವಿಟ್ಟಿದ್ದ ಮತ್ತು ಮಾರಾಟ ಮಾಡಿದ್ದ ವಿವಿಧ ಕಂಪನಿಗಳ 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿವಿಪುರಂ ಪೊಲೀಸ್ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿ, ವಿಚಾರಣೆ ವೇಳೆ ಆತನ ನೀಡಿದ್ದ ಮಾಹಿತಿ ಮೇರೆಗೆ ಕಳ್ಳತನ ಮಾಡಿದ್ದ ದ್ವಿಚಕ್ರ, ತ್ರಿಚಕ್ರ ಹಾಗೂ ಟೆಂಪೋ ಟ್ರಾವಲರ್ನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಜೆಪಿನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಕಳ್ಳತನ ಮಾಡಿದ್ದ 8 ಲಕ್ಷ ವೌಲ್ಯದ ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ವಿದೇಶಿಯರ ಕಾಯ್ದೆಯ ನಿಯಮಗಳನ್ನು ಉಲ್ಲಂಸಿ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆ ನೀಡಿದ್ದ 20 ಮಂದಿ ಮನೆ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.

RELATED ARTICLES

Latest News