ವಿಜಯನಗರ ,(ಆಂಧ್ರಪ್ರದೇಶ), ಮೇ 18-ಆಟವಾಡುವಾಗ ಕಾರಿನೊಳಗೆ ಸಿಲುಕಿ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ದ್ವಾರಕಪುಡಿ ಗ್ರಾಮದಲ್ಲಿ ಇಲ್ಲಿ ನಡೆದಿದೆ.
ಮನೆಯ ಹೊರಗೆ ಆಟವಾಡುತ್ತಿದ್ದ ಮಕ್ಕಳು ನಿಲ್ಲಿಸಿದ್ದ ಲಾಕ್ ಮಾಡದೆ ಇದ್ದ ಕಾರಿನೊಳಗೆ ಪ್ರವೇಶಿಸಿದರು.
ನಂತರ ಸ್ವಯಂಚಾಲಿತವಾಗಿ ಲಾಕ್ ಆಗಿದ್ದರಿಂದ ಅವರು ಹೊರಬರಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳು ಒಳಗೆ ಹೋದ ನಂತರ ಕಾರಿನ ಆಟೋ-ಲಾಕ್ ವ್ಯವಸ್ಥೆಯಿಂದ ಸಿಕ್ಕಿಹಾಕಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು, ರಾತ್ರಿ ಮಕ್ಕಳು ಕಾಣದಿದ್ದಾಗ ಹುಡುಕಾಟ ನಡೆಸಿದಾಗ ಕಾರಿನೊಳಗೆ ಶವಗಳು ಪತ್ತೆಯಾಗಿವೆ ಎಂದು ಹೇಳಿದರು.
ಮತಪಟ್ಟ ಮಕ್ಕಳು 8 ರಿಂದ 6 ವರ್ಷ ವಯಸ್ಸಿನವರಾಗಿದ್ದರು. ನಾಲ್ವರು ಮಕ್ಕಳಲ್ಲಿ ಇಬ್ಬರು ಒಡಹುಟ್ಟಿದವರು, ಇತರರು ಪ್ರತ್ಯೇಕ ಕುಟುಂಬಗಳಿಗೆ ಸೇರಿದವರು ಎಂದು ಗೊತ್ತಾಗಿದೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.