ಹೊಂಡದ ಹೂಳಿನಲ್ಲಿ ಸಿಲುಕಿ ಆರು ಮಂದಿ ಸಾವು

ವಿಜಯವಾಡ,ಫೆ.27- ಮೀನು ಹಿಡಿಯಲು ಕೊಳದ ನಡುಭಾಗಕ್ಕೆ ತೆರಳಿದ್ದ 10 ಮಂದಿ ಪೈಕಿ ಹೂಳಿನಲ್ಲಿ ಮುಳುಗಿ ಆರು ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ತೊಡೆರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಳದಲ್ಲಿ ಮೀನು ಹಿಡಿಯಲು ಭಾನುವಾರ 10 ಮಂದಿ ತೆರಳಿದ್ದರು, ಅವರಲ್ಲಿ ನಾಲ್ಕು ಮಂದಿ ಮಾತ್ರ ವಾಪಾಸಾಗಿದ್ದಾರೆ. ಉಳಿದ ಶ್ರೀನಾಥ್ (18), ಪ್ರಶಾಂತ್ (28), ರಘು (24), ಬಾಲಾಜಿ (18), ಕಲ್ಯಾಣ್ (25) ಮತ್ತು ಸುರೇಂದ್ರ (18) ಕೊಳದ ಜೌಗುನಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ […]

ಆಂಧ್ರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ

ಅಮರಾವತಿ,ಜ.3- ಕಾಲ್ತುಳಿದಿಂದ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಸಾರ್ವಜನಿಕ ಸಭೆ ಮತ್ತು ರ್ಯಾಲಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಪ್ರತಪಕ್ಷ ತೆಲುಗು ದೇಶಂ ಪಕ್ಷದ ನಾಯಕ ಚಂದ್ರ ಬಾಬು ನಾಯ್ಡು ಅವರ ನೇತೃತ್ವದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಘಟಿಸಿದ ಕಾಲ್ತುಳಿತದಿಂದ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು. ಡಿಸೆಂಬರ್ 28ರಂದು ನೆಲ್ಲೂರು ಜಿಲ್ಲೆಯ ಕಂಡುಕುರಿನಲ್ಲಿ ನಡೆದ ಮೊದಲ ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ ಏಳು ಮಂದಿ ಮೃತಪಟ್ಟಿದ್ದರು. ಅದೇ ರೀತಿ ಭಾನುವಾರ ಗುಂಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ […]

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಬದ್ದ : ರಾಹುಲ್ ಗಾಂಧಿ

ನವದೆಹಲಿ,ಅ.21-ಆಂಧ್ರಪ್ರದೇಶದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಸಿದ ರಾಹುಲ್ ಗಾಂಧಿ ಇಂದು ಕರ್ನಾಟಕ ಪ್ರವೇಶಿಸುವ ಸಂದರ್ಭದಲ್ಲಿ ತೆಲುಗು ನಾಡಿಗೆ ಭಾವನಾತ್ಮಕ ವಿದಾಯಪತ್ರ ಬರೆದಿದ್ದು ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಪ್ರತಿಕ್ಷಣ ಜೊತೆಯಲ್ಲಿರುವುದಾಗಿ ತಿಳಿಸಿದ್ದಾರೆ. ಇಂದು ಬೆಳಗ್ಗೆ ಆಂಧ್ರಪ್ರದೇಶದಲ್ಲಿ ನಡೆದ ಯಾತ್ರೆ ಪೂರ್ಣಗೊಂಡಿದೆ. ಆಂಧ್ರಪ್ರದೇಶದ ಜನರ ಬೆಂಬಲ ಮತ್ತು ಪ್ರೋತ್ಸಾಹ ಮರೆಯಲಾಗದಂತದ್ದು ಎಂದಿದ್ದಾರೆ. ಯಾತ್ರೆಯಲ್ಲಿ ತಾವು ವಿವಿಧ ವರ್ಗಗಳ ಜೊತೆ ಸಮಾಲೋಚನೆ ನಡೆಸಿದಾಗ ಜನರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿವೆ. ಹೈದ್ರಾಬಾದ್‍ನಲ್ಲಿ ಇಡಿ ದಾಳಿ, 150 ಕೋಟಿ ಆಸ್ತಿ […]

ಆಂಧ್ರ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ

ಕರ್ನೂಲ್,ಅ.18- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಅಖಿಲ ಭಾರತ ಐಕ್ಯತಾ ಯಾತ್ರೆ ಇಂದು ಆಂಧ್ರಪ್ರದೇಶ ಪ್ರವೇಶಿಸಿದೆ. ಆಲೂರು ಕ್ಷೇತ್ರದ ಛತ್ರಗುಡಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಹುಲ್ ಗಾಂಧಿ ಯಾತ್ರೆ ಆರಂಭಿಸಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಾಕೇಶ್ ಶೈಲಜನಾಥ್ ಮತ್ತಿತರ ನಾಯಕರು ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡರು. ಇಂದು ಆಲೂರು ಹಟ್ಟಿಬೆಳಗಲ ಮತ್ತು ಮುನೀರ್‍ಕುತ್ರಿ ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ. ರಾತ್ರಿ ಅಧೋನಿಯ, ಛಾಗಿ ಗ್ರಾಮದಲ್ಲಿ ವಿಶ್ರಾಂತಿ ಪಡೆಯಲಿದೆ. ಅ.14ರಂದು ಅನಂತಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸಂಚರಿಸಿ […]

ಅಂಧ್ರ, ತೆಲಂಗಾಣದ 25 ಕಡೆ ಎನ್‍ಐಎ ದಾಳಿ

ನವದೆಹಲಿ,ಸೆ.18- ಪಿಎಫ್‍ಐನ ಚಟುವಟಿಕೆ ಆಧರಿಸಿ ರಾಷ್ಟ್ರೀಯ ತನಿಖಾ ದಳ ಇಂದು ಅಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರೆ, ಕಡಪ, ಗುಂಟೂರು, ತೆಲಂಗಾಣದ ನಿಜಾಮಬಾದ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ಹಲವು ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪಿಎಫ್‍ಐ ಸಂಘಟನೆಯ ಅಬ್ದುಲ್ ಖಾದರ್ ಮತ್ತು ಇತರ 26ಕ್ಕೂ ಹೆಚ್ಚು ಮಂದಿ ವಿರುದ್ದ ಎನ್‍ಐಎನ ಹೈದರಾಬಾದ್ ಘಟಕ ಆ.28ರಂದು ಪ್ರಕರಣ ದಾಖಲಿಸಿತ್ತು. ಪಿಎಫ್‍ಐ ಸಂಘಟನೆ ಕೇಂದ್ರ ಸರ್ಕಾರದ […]

ತಿರುಪತಿಗೆ ತೆರಳುತ್ತಿದ್ದ ಕಾರು ಟ್ರಕ್‍ಗೆ ಡಿಕ್ಕಿ, ಸ್ಥಳದಲ್ಲೇ ಐವರು ಸಾವು

ಹೈದರಾಬಾದ್,ಆ.8- ತಿರುಪತಿಗೆ ತೆರಳುತ್ತಿದ್ದ ಕಾರು ನಿಂತ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟ ಘಟನೆ ಪ್ರಕಾಶಂ ಜಿಲ್ಲೆಯ ಮಾರ್ಚಾಲದ ಸಮೀಪ ಸಂಭವಿಸಿದೆ. ಮೃತರನ್ನು ಪಲ್ನಾಡು ಜಿಲ್ಲೆಯ ವೇಲ್ ದುರ್ತಿ ತಾಲ್ಲೂಕಿನ ಸಿರಿಗಿರಿ ಪಾಡು ನಿವಾಸಿಗಳಾದ ಅನಿಮಿ ರೆಡ್ಡಿ(60), ಗುರುವಮ್ಮ(60), ಅನಂತಮ್ಮ(55), ಆದಿಲಕ್ಷ್ಮಿ(58) ಮತ್ತು ನಾಗಿರೆಡ್ಡಿ(24) ಎಂದು ಗುರುತಿಸಲಾಗಿದೆ. ಅಪಘಾತದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಸ್ಥಳೀಯರ ನೆರವಿನೊಂದಿಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಮೀಪ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ನಿಂತ ಟ್ರಕ್‍ಗೆ ಹಿಂಬದಿಯಿಂದ ಡಿಕ್ಕಿ […]