Saturday, July 27, 2024
Homeರಾಷ್ಟ್ರೀಯಆಂಧ್ರದಲ್ಲಿ ಆಡಳಿತಾರೂಢ ವೈಎಸ್‌‍ಆರ್‌ಪಿಗೆ ಮುಖಭಂಗ

ಆಂಧ್ರದಲ್ಲಿ ಆಡಳಿತಾರೂಢ ವೈಎಸ್‌‍ಆರ್‌ಪಿಗೆ ಮುಖಭಂಗ

ಅಮರಾವತಿ ಜೂ. 4. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌‍ಆರ್‌ಪಿ ಪಕ್ಷಕ್ಕೆ ತೀವ್ರ ಮುಖಭಂಗ ಉಂಟಾಗಿದೆ. ಲೋಕಸಭಾ ಚುನಾವಣೆ ಜೊತೆಯಲ್ಲೇ ಆಂಧ್ರಪ್ರದೇಶದ ಓಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ನಾಲ್ಕೂ ರಾಜ್ಯಗಳ ವಿಧಾನ ಸಭಾ ಚುನಾವಣೆಯು ನಡೆದಿತ್ತು.

ನಿನ್ನೆ ಅರುಣಾಚಲ ಪ್ರದೇಶ ಹಾಗೂ ಸಿಕ್ಕೀಂ ರಾಜ್ಯಗಳ ಲಿತಾಂಶ ಪ್ರಕಟವಾಗಿದ್ದು, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಜಯ ಗಳಿಸಿತು. ಸಿಕ್ಕಿಂನಲ್ಲಿ ಎಸ್‌‍ಕೆಎಮ್‌ ಪಕ್ಷ ಭಾರೀ ಬಹುಮತ ಗಳಿಸಿ ಅದಿಕಾರದ ಗದ್ದುಗೆ ಹಿಡಿದಿತ್ತು. ಇಂದು ಆಂಧ್ರ ಪ್ರದೇಶ ಮತ್ತು ಓಡಿಶಾ ವಿಧಾನಸಭಾ ಚುನಾವಣಾ ಲಿತಾಂಶ ಪ್ರಕಟವಾಗಿದೆ.

ಆಂಧ್ರಪ್ರದೇಶದಲ್ಲಿ ಟಿಡಿಪಿಯ ಚಂದ್ರಬಾಬು ನಾಯ್ಡು , ಜೆಎನ್‌ಪಿಯ ಪವನ್‌ ಕಲ್ಯಾಣ್‌‍ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದು, ಈ ಮೂರು ಪಕ್ಷಗಳು ಆರಂಭಿಕವಾಗಿ ಭರ್ಜರಿ ಮುನ್ನಡೆ ಸಾದಿಸಿವೆ. ಆಂಧ್ರಪ್ರದೇಶದ 175 ಸದಸ್ಯ ಬಲದಲ್ಲಿ ಟಿಡಿಪಿ 78 ಕ್ಷೇತ್ರದಲ್ಲಿ ಭಾರೀ ಮುನ್ನಡೆ ಸಾದಿಸಿದ್ದಾರೆ. ಪವನ ಕಲ್ಯಾಣ ನೇತೃತ್ವದ ಜನಸೇವಾ ಪಾರ್ಟಿ 19 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆಯಲ್ಲಿದೆ.

ಆಡಳಿತಾರೂಢ ವೈಎಸ್‌‍ಆರ್‌ಪಿ ಕೇವಲ 13 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗಿದೆ. ಆಂಧ್ರ ಪ್ರದೇಶದಲ್ಲಿ ಆಡಳಿತ ವಿರೋದಿ ಅಲೆ ಮತವಾಗಿ ಪರಿವರ್ತನೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೋದಿಯವರೊಂದಿಗೆ ಮಾತುಕತೆ ನಡೆಸಿ, ಕೊನೆ ಕ್ಷಣದಲ್ಲಿ ಮಾಡಿದ ರಾಜಕೀಯ ತಂತ್ರಗಾರಿಕೆ ಇಲ್ಲಿ ಸಲವಾದಂತಿದೆ.

RELATED ARTICLES

Latest News