Saturday, July 27, 2024
Homeಇದೀಗ ಬಂದ ಸುದ್ದಿಒಡಿಶಾ ವಿಧಾನಸಭೆ ಚುನಾವಣೆ : ಬಿಜೆಪಿ ದಾಪುಗಾಲು

ಒಡಿಶಾ ವಿಧಾನಸಭೆ ಚುನಾವಣೆ : ಬಿಜೆಪಿ ದಾಪುಗಾಲು

ಭುವನೇಶ್ವರ, ಜೂ. 4-ಒಡಿಶಾದಲ್ಲಿ ಆಡಳಿತಾರೂಢ ಬಿಜೆಡಿಗೆ ಭಾರೀ ಹಿನ್ನಡೆಯಾಗಿದೆ. 147 ಸದಸ್ಯ ಬಲದ ವಿಧಾನಸಭೆ ಚುನಾವಣಾ ಲಿತಾಂಶ ಪ್ರಕಟವಾಗಿದ್ದು ಬಿಜೆಪಿ 34ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತಾರೂಢ ಬಿಜೆಡಿ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಮೂಲಕ ಸೋಲಿನ ಭೀತಿ ಎದುರಿಸುತ್ತಿದೆ.

3 ದಶಕಗಳಷ್ಟು ಆಡಳಿತ ನಡೆಸಿದ ಪಕ್ಷವನ್ನು ಬಿಜೆಪಿ ಹಿಮೆಟ್ಟಿಸುವ ಸೂಚನೆ ಕಂಡು ಬಂದಿದೆ. ಕಾಂಗ್ರೆಸ್‌‍ ಪಕ್ಷ ಇಲ್ಲಿ 5 ಸ್ಥಾನಗಳಲ್ಲಿ ಗೆಲುವಿನ ಹಾದಿಯಲ್ಲಿದೆ. ಸಿಪಿಎಂ ಪಕ್ಷ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

147 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳ ಆರಂಭಿಕ ಲಿತಾಂಶದ ಮಾಹಿತಿ ಲಭ್ಯವಾಗಿದ್ದು ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವಿನ ಹಾದಿಯತ್ತ ಸಾಗಿರುವುದು ಅದಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆ ಕಂಡು ಬಂದಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.

RELATED ARTICLES

Latest News