Thursday, September 19, 2024
Homeರಾಷ್ಟ್ರೀಯ | Nationalಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಂದು ಬೆತ್ತಲೆ ದೇಹ ಪೊದೆಗೆ ಎಸೆದ ದುರುಳರು

ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಂದು ಬೆತ್ತಲೆ ದೇಹ ಪೊದೆಗೆ ಎಸೆದ ದುರುಳರು

ಹೈದರಾಬಾದ್‌, ಜೂ.22- ದುಷ್ಕರ್ಮಿಗಳ ತಂಡವೊಂದು ಮಹಿಳೆ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿ ಬೆತ್ತಲೆ ದೇಹವನ್ನು ಪೊದೆಗಳಲ್ಲಿ ಎಸೆದು ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದ ಕುಗ್ರಾಮವೊಂದರಲ್ಲಿ ನಡೆದಿದೆ. ಬಾಪಟ್ಲಾ ಜಿಲ್ಲೆಯಲ್ಲಿ ಎಪುರುಪಾಲೇಂ ಗ್ರಾಮದ ಮಹಿಳೆಯ ಬೆತ್ತಲೆ ಶವ ಸಮೀಪದ ಬಾಲಕಿಯ ಪ್ರೌಢಶಾಲೆ ಬಳಿಯ ಪೊದೆಯೊಂದರಲ್ಲಿ ಪತ್ತೆಯಾಗಿದೆ.

ಮಹಿಳೆಯು ಪ್ರಕತಿಯ ಕರೆಗೆ ಹಾಜರಾಗಲು ಹೋಗಿದ್ದ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದೆ ಎಂದು ಬಪಟ್ಲಾ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ವಕುಲ್‌ ಜಿಂದಾಲ್‌ ತಿಳಿಸಿದ್ದಾರೆ. .

ಹತ್ಯೆಯ ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ ಮತ್ತು ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗ್ರಾಮಕ್ಕೆ ಭೇಟಿ ನೀಡುವಂತೆ ಗಹ ಸಚಿವ ವಂಗಲಪುಡಿ ಅನಿತಾ ಅವರಿಗೆ ಸೂಚಿಸಿದ್ದಾರೆ.

48 ಗಂಟೆಗಳಲ್ಲಿ ಅಪರಾಧಿಗಳನ್ನು ಬಂಧಿಸಬೇಕು. ಯಾವುದೇ ಲೋಪಕ್ಕೆ ಅವಕಾಶವಿಲ್ಲ ಮತ್ತು ಮುಖ್ಯಮಂತ್ರಿ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ ಎಂದು ಅನಿತಾ ಹೇಳಿದರು, ಹೆಚ್ಚಿದ ಮಾದಕ ದ್ರವ್ಯ ಸೇವನೆಯಿಂದ ಇಂತಹ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಸರ್ಕಾರ ಶಂಕಿಸಿದೆ.

ಆಂಧ್ರಪ್ರದೇಶವು ಮಾದಕವಸ್ತು ಪ್ರಕರಣಗಳನ್ನು ಎದುರಿಸಲು ಪ್ರತ್ಯೇಕ ಸೆಲ್‌ ಅನ್ನು ಸಹ ಹೊಂದಿಲ್ಲ, ಮಾದಕ ದ್ರವ್ಯ ಪೂರೈಕೆ ಮತ್ತು ದುರುಪಯೋಗವನ್ನು ತಡೆಯಲು ನಾವು ಯುದ್ಧದ ಆಧಾರದ ಮೇಲೆ ಕೆಲಸ ಮಾಡಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.

RELATED ARTICLES

Latest News