ಥಾಣೆ, ಜ.30– ಮಹಾರಾಷ್ಟ್ರದ ಥಾಣೆ ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ನಾಲ್ವರು ಬಾಂಗ್ಲಾದೇಶಿ ಮಹಿಳೆಯರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.ಅಕ್ರಮ ವಲಸಿಗರಿಗೆ ಬಾಡಿಗೆಗೆ ನೀಡಲಾಗಿದ್ದ ಮನೆಯ ಮಾಲೀಕರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಪೊಲೀಸರು ಮನೋರ್ಪಡಾದಲ್ಲಿರುವ ಸ್ಥಳೀಯ ನಾಗರಿಕ ಸಂಸ್ಥೆಯ ಪುನರ್ವಸತಿ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುಮಾರು 38 ರಿಂದ 50 ವರ್ಷ ವಯಸ್ಸಿನ ನಾಲ್ವರು ಬಾಂಗ್ಲಾದೇಶಿ ಮಹಿಳೆಯರು ಅಲ್ಲಿನ ಮನೆಯೊಂದ ಕೋಣೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಪರಿಶೀಲನೆಯ ಸಮಯದಲ್ಲಿ, ಅವರು ಯಾವುದೇ ದಾಖಲೆ ಇಲ್ಲ .ಇವರು ಹೇಗೆ ಬಂದರು ಮತ್ತು ಕರೆತಂದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಅವರು ಹೇಳಿದರು.