Monday, November 25, 2024
Homeರಾಷ್ಟ್ರೀಯ | Nationalರೈಲು ಹಳಿ ಮೇಲೆ ಬಸ್ ಬಿದ್ದು ನಾಲ್ವರ ಸಾವು, 34 ಮಂದಿಗೆ ಗಾಯ

ರೈಲು ಹಳಿ ಮೇಲೆ ಬಸ್ ಬಿದ್ದು ನಾಲ್ವರ ಸಾವು, 34 ಮಂದಿಗೆ ಗಾಯ

ದೌಸಾ,ನ.6- ರಾಜಸ್ತಾನದಲ್ಲಿ 70ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ದೌಸಾ ಕಲೆಕ್ಟರೇಟ್ ವೃತ್ತದ ಬಳಿ ರೈಲು ಹಳಿ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು ಇತರ 34 ಮಂದಿ ಗಂಭೀರವಾಗಿಒ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸುಮಾರು ಹನ್ನೆರಡು ಆಂಬುಲೆನ್ಸ್‍ಗಳಲ್ಲಿ ಕೊತ್ವಾಲಿ ಪೊಲೀಸರು ಎಲ್ಲಾ ಗಾಯಾಳುಗಳನ್ನು ದೌಸಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹರಿದ್ವಾರದಿಂದ ಜೈಪುರಕ್ಕೆ ಹೋಗುತ್ತಿದ್ದ ಬಸ್ ಕಲೆಕ್ಟರೇಟ್ ಛೇದಕ ದೌಸಾ ಬಳಿಯ ಮೋರಿಯಿಂದ 30 ಅಡಿ ಕೆಳಗೆ ಪಲ್ಟಿಯಾಗಿದೆ. ಬಸ್‍ನಲ್ಲಿ ಸುಮಾರು 70-80 ಜನರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಮಹಿಳೆಯರು ಹಾಗು ಇಬ್ಬರು ಪುರುಷರು ಸೇರಿದಂತೆ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ, ಮೃತರ ದೇಹಗಳನ್ನು ದೋಸಾ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳ ಭೂಕಂಪ : ನೆಲೆ ಕಳೆದುಕೊಂಡು ನರಳುತ್ತಿರುವ ಜನ, ನೆರವಿಗೆ ಅಧಿಕಾರಿಗಳ ಹರಸಾಹಸ

ಮಾಹಿತಿ ಮೇರೆಗೆ ದೋಸಾ ಜಿಲ್ಲಾಧಿಕಾರಿ ಕಮರ್ ಚೌಧರಿ, ಎಡಿಎಂ ರಾಜ್‍ಕುಮಾರ್ ಕಸ್ವಾ ಮತ್ತು ಉಪವಿಭಾಗಾಧಿಕಾರಿ ಸಂಜಯ್ ಗೋರಾ ಅವರು ಅಪಘಾತದ ಸ್ಥಳಕ್ಕೆ ಧಾವಿಸಿದರು ಮತ್ತು ದೋಸಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದರು. ಅಪಘಾತದ ಪರಿಣಾಮವಾಗಿ ರೈಲ್ವೆ ಕಾರ್ಯಾಚರಣೆಯ ಮೇಲೆ ಸ್ವಲ್ಪ ಸಮಯದವರೆಗೆ ಪರಿಣಾಮ ಬೀರಿತು ಮತ್ತು ರೈಲು ಸೇವೆಗಳು ಹಲವಾರು ಗಂಟೆಗಳ ಕಾಲ ಸ್ಥಗಿತಗೊಂಡವು.

ಜಿಲ್ಲಾಧಿಕಾರಿ ಕಮರ್ ಚೌಧರಿ ಮಾತನಾಡಿ, ಜೈಪುರದಿಂದ ದೆಹಲಿಗೆ ತೆರಳುತ್ತಿದ್ದ ರೈಲನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದ್ದು, ಕ್ರೇನ್ ಸಹಾಯದಿಂದ ಬಸ್ ಅನ್ನು ಹಳಿಯಿಂದ ಹೊರತೆಗೆದು ಹಳಿಯನ್ನು ಸುಗಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

RELATED ARTICLES

Latest News