Thursday, December 7, 2023
Homeರಾಷ್ಟ್ರೀಯ508 ಕೋಟಿ ವಂಚನೆಗೆ ಮಹಾದೇವನ ಹೆಸರು ಬಳಸಿದ್ದು ಸರಿಯಲ್ಲ ; ಬಿಸ್ವಾ

508 ಕೋಟಿ ವಂಚನೆಗೆ ಮಹಾದೇವನ ಹೆಸರು ಬಳಸಿದ್ದು ಸರಿಯಲ್ಲ ; ಬಿಸ್ವಾ

ಬಿಲಾಸ್‍ಪುರ, ನ.6- ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಅವರು ಹಣ ಲೂಟಿ ಮಾಡಲು ಮಹಾದೇವ್ ಹೆಸರು ಬಳಕೆ ಮಾಡಿರುವುದು ಅಚ್ಚರಿ ಮೂಡಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಮಹದೇವ್ ಆ್ಯಪ್‍ನ ಪ್ರವರ್ತಕರು ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್‍ಗೆ 508 ಕೋಟಿ ಪಾವತಿಸಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಹಣ ಲೂಟಿ ಮಾಡಲು ಮಹದೇವ್ ಅವರ ಹೆಸರನ್ನು ಯಾರಾದರೂ ಬಳಸುತ್ತಾರೆ ಎಂದು ಯಾರೂ ಭಾವಿಸುವುದಿಲ್ಲ. ನೀವು ಜಿಂಟೋ ಅಥವಾ ಮಿಂಟೋ ಎಂಬ ಯಾವುದೇ ಹೆಸರನ್ನು ಬಳಸಬಹುದು. ಆದರೆ ನೀವು ಮಹದೇವ್ ಅವರ ಹೆಸರನ್ನು ಬಳಸಿ ಒಂದಲ್ಲ ಎರಡಲ್ಲ 508 ಕೋಟಿ ಲೂಟಿ ಮಾಡಿದ್ದೀರಿ ಎಂದು ಅವರು ಹರಿಹಾಯ್ದಿದ್ದಾರೆ.

ನವೆಂಬರ್ 7 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನದ ಪ್ರಚಾರದ ಕೊನೆಯ ದಿನವಾದ ಛತ್ತೀಸ್‍ಗಢದ ಬಿಲಾಸ್‍ಪುರದಲ್ಲಿ ಬಿಜೆಪಿ ನಾಯಕರು ಈ ರೀತಿ ವಾಗ್ದಾಳಿ ನಡೆಸಿದರು. ಮಾ ಕಾಮಾಖ್ಯ ಎಂದರೆ ಪಾರ್ವತಿ, ಸತಿ, ಮಹಾ ಕಾಳಿ… ಮಾ ಪಾರ್ವತಿ ಕೂಡ ಮಹಾದೇವನ ಪತ್ನಿ. ಇಂದು ಛತ್ತೀಸ್‍ಗಢ ಸಿಎಂ ಭೂಪೇಶ್ ಬಘೇಲ್ ಮಹಾದೇವನ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವ ಸುದ್ದಿ ಹೊರಬಿದ್ದಿದ್ದು, ಮಾತೆ ಕಾಮಾಖ್ಯ ಅಳುತ್ತಿದ್ದಾರೆ. ಎಂದು ಮುಖ್ಯಮಂತ್ರಿ ಹೇಳಿದರು.

ಧೈರ್ಯ ಮತ್ತು ದಕ್ಷತೆಯೇ ಪ್ರತಿಮಾ ಪ್ರಾಣಕ್ಕೆ ಮುಳುವಾಯ್ತಾ..?

ಛತ್ತೀಸ್‍ಗಢ ಮುಖ್ಯಮಂತ್ರಿ ಅವರು ಸೃಷ್ಟಿಸಿದ ವಿಷವನ್ನು ಸೇವಿಸಲು ಸಾಧ್ಯವಾಗುವುದಿಲ್ಲ ಮತ್ತು ಅಂತಿಮವಾಗಿ ಅವರ ರಾಜಕೀಯದಿಂದ ವಿದಾಯ ಕ್ಕೆ ಇದು ಕಾರಣವಾಗಲಿದೆ ಎಂದು ಅವರು ಹೇಳಿದರು. ಮಹಾದೇವ ಅವರು ಜಗತ್ತನ್ನು ರಕ್ಷಿಸಲು ವಿಷಪಾನ ಮಾಡುತ್ತಿದ್ದರು ಆದರೆ ನೀವು (ಬಘೇಲ್) ಸೃಷ್ಟಿಸಿದ ಈ ವಿಷವನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಇದು ನಿಮ್ಮ ರಾಜಕೀಯದಿಂದ ವಿದಾಯಕ್ಕೆ ಕಾರಣವಾಗಲಿದೆ ಎಂದು ಅವರು ಭವಷ್ಯ ನುಡಿದರು.

RELATED ARTICLES

Latest News