Thursday, December 5, 2024
Homeರಾಷ್ಟ್ರೀಯ | Nationalಟಿಡಿಪಿ ಬದಲು ಬಿಜೆಪಿಗೆ ಪವನ್ ಕಲ್ಯಾಣ್ ಬೆಂಬಲ

ಟಿಡಿಪಿ ಬದಲು ಬಿಜೆಪಿಗೆ ಪವನ್ ಕಲ್ಯಾಣ್ ಬೆಂಬಲ

ಹೈದರಾಬಾದ್, ನ.6- ಭಾರತೀಯ ಜನತಾ ಪಕ್ಷ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಗಳ ನಡುವಿನ ಮೈತ್ರಿ ಮುಂದುವರೆಯಲಿದ್ದು, ತೆಲಂಗಾಣ ವಿಧಾನಸಭಾ ಚುನಾವಣೆಗೆ ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ವಿವರಗಳನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಬಿಜೆಪಿ ಸಂಸದ ಲಕ್ಷ್ಮಣ್ ತಿಳಿಸಿದ್ದಾರೆ.

ಮೈತ್ರಿ ಮುಂದುವರಿಕೆ ಕುರಿತಂತೆ ಪವನ್ ಕಲ್ಯಾಣ್ ಹಾಗೂ ನಾದೆಂಡ್ಲ್ ಮನೋಹರ್ ಅವರೊಂದಿಗೆ ಈ ಸಂಬಂಧ ನಾನು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಜಿ ಕಿಶನ್‍ರೆಡ್ಡಿ ಮಾತುಕತೆ ನಡೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಾವು ರಾಜ್ಯದಲ್ಲಿ ಒಟ್ಟಿಗೆ ಸ್ರ್ಪಧಿಸುತ್ತೇವೆ. ನರೇಂದ್ರ ಮೋದಿ ಜಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ನೋಡುವುದು ಎರಡು ಪಕ್ಷಗಳ ಗುರಿ ಮತ್ತು ಆಕಾಂಕ್ಷೆ ಎಂದು ಅವರು ಹೇಳಿದರು. ಸಂಸತ್ ಚುನಾವಣೆಯಲ್ಲೂ ತಮ್ಮ ಪಕ್ಷವು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಲಿದೆ ಎಂದು ಪವನ್ ಕಲ್ಯಾಣ್ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಪಡಿತರ ಯೋಜನೆ ವಿಸ್ತರಣೆಗೆ ಸಿಬಲ್ ಲೇವಡಿ

ಏತನ್ಮಧ್ಯೆ, ತೆಲಂಗಾಣದಲ್ಲಿ 32 ಸ್ಥಾನಗಳಲ್ಲಿ ಸ್ರ್ಪಧಿಸಲು ತಮ್ಮ ಪಕ್ಷವು ಯೋಚಿಸುತ್ತಿದೆ ಎಂದು ಪವನ್ ಕಲ್ಯಾಣ್ ಅವರು ಜನಸೇನಾ ಪ್ರಕಟಣೆಯನ್ನು ಉಲ್ಲೇಖಿಸಿದ್ದಾರೆ. ಆದರೆ, ಎನ್‍ಡಿಎಯಲ್ಲಿ ಮಿತ್ರಪಕ್ಷವಾಗಿ ಬಿಜೆಪಿಯೊಂದಿಗೆ ಜನಸೇನೆ ಮಾತುಕತೆ ನಡೆಸಿದ್ದು, ಜನಸೇನೆ ಸ್ರ್ಪಧಿಸುವ ಸ್ಥಾನಗಳ ಕುರಿತು ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಯೊಂದಿಗೆ ಒಟ್ಟಾಗಿ ಹೋಗಲು ಜನಸೇನೆ ಈ ಹಿಂದೆ ನಿರ್ಧರಿಸಿತ್ತು.

RELATED ARTICLES

Latest News