Monday, February 26, 2024
Homeರಾಷ್ಟ್ರೀಯಭೀಕರ ಅಪಘಾತ ತಂದೆ-ಮಗ ಸೇರಿ ನಾಲ್ವರ ದುರ್ಮರಣ

ಭೀಕರ ಅಪಘಾತ ತಂದೆ-ಮಗ ಸೇರಿ ನಾಲ್ವರ ದುರ್ಮರಣ

ಬೀಡ್, ಜ 13 (ಪಿಟಿಐ) ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಪಿಕಪ್ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ತಡರಾತ್ರಿ ಅಹಮದ್‍ಪುರ-ಅಹಮದ್‍ನಗರ ಹೆದ್ದಾರಿಯಲ್ಲಿ ಬೀಡ್ ತಾಲೂಕಿನ ಸಾಸೆವಾಡಿ ಗ್ರಾಮದ ಬಳಿ ಈ ಘೋರ ಅಪಘಾತ ಸಂಭವಿಸಿದೆ.

ಪಿಕಪ್ ವಾಹನವು ಜಿಲ್ಲೆಯ ಮಂಜರಸುಂಭದ ಮೂಲಕ ಪಟೋಡಕ್ಕೆ ತೆರಳುತ್ತಿದ್ದಾಗ ಎದುರು ದಿಕ್ಕಿನಿಂದ ಪೈಪ್‍ಗಳನ್ನು ಸಾಗಿಸುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ನಂತರ ಪಿಕಪ್ ವಾಹನವು ಟ್ರಕ್‍ಗೆ ಸಿಲುಕಿ ಸ್ವಲ್ಪ ದೂರದವರೆಗೆ ಎಳೆದೊಯ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಜ್ರಿಗೆ ರವಾನೆಯಾಯ್ತು ಮತ್ತೊಂದು ನೋಟೀಸ್

ಅಪಘಾತದಲ್ಲಿ ಮೃತಪಟ್ಟವರನ್ನು ಪಿಕಪ್ ವಾಹನದಲ್ಲಿದ್ದ ಪ್ರಹ್ಲಾದ್ ಘರತ್ (63), ಅವರ ಪುತ್ರ ನಿತಿನ್ (41), ವಿನೋದ್ ಸನಪ್ (40) ಮತ್ತು ಟ್ರಕ್ ಚಾಲಕ ಗಹಿನಿನಾಥ್ ಗರ್ಜೆ (31) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News