Tuesday, January 7, 2025
Homeರಾಷ್ಟ್ರೀಯ | Nationalಛತ್ತೀಸ್‌‍ಗಢ : ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲೀಯರ ಹತ್ಯೆ, ಪೊಲೀಸ್‌‍ ಹುತಾತ್ಮ

ಛತ್ತೀಸ್‌‍ಗಢ : ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲೀಯರ ಹತ್ಯೆ, ಪೊಲೀಸ್‌‍ ಹುತಾತ್ಮ

4 Naxals gunned down in encounter with security forces in Chhattisgarh, cop dies

ದಾಂತೇವಾಡ, ಜ 5 (ಪಿಟಿಐ) ಛತ್ತೀಸ್‌‍ಗಢದ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲೀಯರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮುಖಾಮುಖಿಯಲ್ಲಿ ಜಿಲ್ಲಾ ರಿಸರ್ವ್‌ ಗಾರ್ಡ್‌ನ (ಡಿಆರ್‌ಜಿ) ಹೆಡ್‌ ಕಾನ್‌ಸ್ಟೆಬಲ್‌ ಕೂಡ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮದ್‌ನ ಅರಣ್ಯದಲ್ಲಿ ನಿನ್ನೆ ಸಂಜೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲೀಯ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆಯಿತು ಎಂದು ಅವರು ತಿಳಿಸಿದರು.

ತಡರಾತ್ರಿ ಗುಂಡಿನ ಚಕಮಕಿ ನಿಂತ ನಂತರ, ನಾಲ್ವರು ನಕ್ಸಲೀಯರ ಶವಗಳು ಮತ್ತು ಎಕೆ-47 ರೈಫಲ್‌ ಮತ್ತು ಸ್ವಯಂ ಲೋಡಿಂಗ್‌ ರೈಫಲ್‌ (ಎಸ್‌‍ಎಲ್‌ಆರ್‌) ಸೇರಿದಂತೆ ಸ್ವಯಂಚಾಲಿತ ಶಸಾ್ತ್ರಸ್ತ್ರಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಗುಂಡಿನ ಚಕಮಕಿಯಲ್ಲಿ ಡಿಆರ್‌ಜಿ ಹೆಡ್‌ ಕಾನ್‌ಸ್ಟೆಬಲ್‌ ಸನ್ನು ಕರಮ್‌ ಕೂಡ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News