Thursday, April 3, 2025
Homeರಾಷ್ಟ್ರೀಯ | Nationalಪರೀಕ್ಷೆಗಳಿಗೆ ತೆರಳುತ್ತಿದ್ದಾಗ ಅಪಘಾತ: 4 ವಿದ್ಯಾರ್ಥಿಗಳ ಸಾವು

ಪರೀಕ್ಷೆಗಳಿಗೆ ತೆರಳುತ್ತಿದ್ದಾಗ ಅಪಘಾತ: 4 ವಿದ್ಯಾರ್ಥಿಗಳ ಸಾವು

ಶಹಜಹಾನ್‍ಪುರ , ಫೆ 27: ಕಾರೊಂದು ಚಾಲಕನ ನಿರಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪರೀಕ್ಷೆ ಬರೆಯಲು ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿಳು ಸಾವನ್ನಪ್ಪಿ,ಆರು ಮಂದಿ ಗಾಯಗೊಂಡಿರುವ ಘಟನೆ ಇಲ್ಲಿನ ಜರವಾವ್ ಗ್ರಾಮದ ಬಳಿ ನಡೆದಿದೆ.

ವಿದ್ಯಾರ್ಥಿಗಳನ್ನು ಅನುರಪ್ ಖುಷ್ವಾಹ (15), ಅನುರಾಗ್ ಶ್ರೀವಾಸ್ತವ (14), ಪ್ರತಿಷ್ಠಾ ಮಿಶ್ರಾ (15),ಮೋಹಿನಿ ಮೌರ್ಯ (16) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಬೋರ್ಡ್ ಪರೀಕ್ಷೆ ಆರಂಭವಾಗಿದ್ದು ವಿದ್ಯಾರ್ಥಿಗಳು ಕಾರಿನಲ್ಲಿ ಪರೀಕ್ಷೆಗಾಗಿ ಜೈತಿಪುರದ ಶಾಲೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ

ಕಾರು ರಭಸವಾಗಿ ಮರಕ್ಕೆ ಡಿಕ್ಕಿ ಹೊಡೆದು ಬಳಿಯ ಕಂದಕಕ್ಕೆ ಬಿದ್ದಿದೆ ಎಂದು ಹೆಚ್ಚುವರಿ ಎಸ್ಪಿ ಸಂಜಯ್ ಕುಮಾರ್ ತಿಳಿಸಿದ್ದಾರೆ.ಗಾಯಗೊಂಡಿರುವ ಇತರ ಆರು ಮಂದಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News